Revenue Facts

ಎಲ್‌ಐಸಿ ಲಾಭ ಕುಸಿತ,ಎಲ್‌ಐಸಿ ನಿವ್ವಳ ಲಾಭ 50% ಕುಸಿತ

ಎಲ್‌ಐಸಿ ಲಾಭ ಕುಸಿತ,ಎಲ್‌ಐಸಿ ನಿವ್ವಳ ಲಾಭ 50% ಕುಸಿತ

ನವದೆಹಲಿ;ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(LIC) ಸಾರ್ವಜನಿಕ ವಲಯದ ವಿಮಾ ಕಂಪನಿ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ.LIC ತ್ರೈಮಾಸಿಕದಲ್ಲಿ 15,952 ಕೋಟಿ ವರ್ಷದ ದ್ವಿತೀಯ ತ್ರೈಮಾಸಿಕದ ಒಟ್ಟು ಲಾಭ ಅರ್ಧಕ್ಕರ್ಧ ಕುಸಿದಿದೆ. ಕಳೆದ ವರ್ಷದ ದ್ವಿತೀಯ ರೂ. ಲಾಭ ಗಳಿಸಿದ್ದ ಕಂಪನಿ, ಈ ಬಾರಿ ಗಳಿಸಿರುವುದು ಕೇವಲ 7,925 ಕೋಟಿ ರೂ. ಮಾತ್ರ, ವಿಮಾ ಕಂತುಗಳ ಮೂಲಕ ಕಳೆದ ದ್ವಿತೀಯ ತ್ರೈಮಾಸಿಕದಲ್ಲಿ 1.32 ಲಕ್ಷ ಕೋಟಿ ರೂ. ಆದಾಯ ಗಳಿಸಿದ್ದರೆ, ಈ ಬಾರಿಯ ಆದಾಯ 1.07 ಕೋಟಿ ರೂ.ಗಳಿಗೆ ಇಳಿದಿದೆ. ಒಟ್ಟು ಆದಾಯ 2.22 ಲಕ್ಷ ಕೋಟಿ ರೂ.ಗಳಿಂದ 2.01 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ.ಎಲ್ಐಸಿ(LIC) 2022 ರ ಮೇ ತಿಂಗಳಲ್ಲಿ ಅತಿದೊಡ್ಡ ಐಪಿಒ(IPO) ಅನ್ನು ತಂದಿತು. ಕಂಪನಿಯು ಪ್ರತಿ ಷೇರಿಗೆ 949 ರೂ.ನಂತೆ ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸಿತ್ತು. ಆದರೆ ನವೆಂಬರ್ 10, 2023 ರಂದು ಶುಕ್ರವಾರದಂದು ಮಾರುಕಟ್ಟೆ ಮುಚ್ಚಿದಾಗ 949 ರೂ.ಗಳ ಬೆಲೆಯ ಷೇರುಗಳು 610 ರೂ. ನಷ್ಟಿವೆ. ಅಂದರೆ ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ ಪ್ರತಿ ಷೇರಿಗೆ 36 ಪ್ರತಿಶತ ಅಥವಾ ರೂ 339 ನಷ್ಟವನ್ನು ಎದುರಿಸುತ್ತಿದ್ದಾರೆ. ಎಲ್‌ಐಸಿಯ ಮಾರುಕಟ್ಟೆ ಬಂಡವಾಳ 3.86 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದೇ ಅವಧಿಯಲ್ಲಿ ವರ್ಗಾವಣೆಯಾದ 14,272 ಕೋಟಿ ರೂ.ಗಿಂತ ಕಡಿಮೆಯಾಗಿದೆ.ದೇಶದ ಅತಿದೊಡ್ಡ ವಿಮಾದಾರರ ಒಟ್ಟು ಆದಾಯವು ಇತ್ತೀಚಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ 2,01,587 ಕೋಟಿಗೆ ಇಳಿಕೆಯಾಗಿದೆ,

Exit mobile version