Revenue Facts

ಸ್ಮಾರ್ಟ್ ಯುಗದ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ನೀವೆಷ್ಟು ತಿಳಿದಿದ್ದೀರಾ..?

ಬೆಂಗಳೂರು, ಡಿ. 21: ಇದು ಸ್ಮಾರ್ಟ್ ಫೋನ್ ಗಳ ಯುಗ. ಎಲ್ಲವೂ ಕೈ ಬೆರಳ ತುದಿಯಲ್ಲೇ ಇರುತ್ತದೆ. ಬ್ಯಾಂಕಿಂಗ್ ಕೆಲಸಗಳಿಂದ ಹಿಡಿದು, ಮಕ್ಕಳು ಓದು, ಆಟ ಎಲ್ಲದಕ್ಕೂ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು. ಎಂತಹ ಕಠಿಣವಾದ ಪ್ರಶ್ನೆ ಇರಲಿ, ಅಥವಾ ದೂರದಲ್ಲಿರುವ ದೊಡ್ಡ ವ್ಯಕ್ತಿಗಳನ್ನು ಸಂಪರ್ಕಿಸಬೇಕೆಂದರೂ ಈಗ ಸುಲಭದ ವಿಚಾರ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾದಂತೆ ಡಿಜಿಟಲ್ ಪಾವತಿಯ ಸಂಖ್ಯೆಯೂ ಹೆಚ್ಚಾಗ ತೊಡಗಿತು. ಲಕ್ಷ ಲಕ್ಷ ಕೋಟಿ ಹಣ ಡಿಜಿಟಲ್ ಮೂಖಾಂತರವೇ ವಿನಿಮಯವಾಗುತ್ತಿದೆ. ಜನರು ಹೆಚ್ಚು ಹೆಚ್ಚು ಡಿಜಿಟಲ್ ಪಾವತಿಗೆ ಮೊರೆ ಹೋಗುತ್ತಿದ್ದಾರೆ.

ಸುಲಭವಾಗಿ ಕೆಲಸ ಸಾಧಿಸಲು ಈ ಸ್ಮಾರ್ಟ್ ಫೋನ್ ಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಕೈಯಲ್ಲಿ ಹಣ ಹಿಡಿದೇ ಶಾಪಿಂಗ್ ಹೋಗಬೇಕು, ತಿಂಗಳ ಸಂಬಳಕ್ಕಾಗಿ ಕಾಯಬೇಕು ಎಂಬುದು ಈಗ ಇಲ್ಲವೇ ಇಲ್ಲ. ಯಾಕೆಂದರೆ ಎಲ್ಲವೂ ಡಿಜಿಟಲ್ ಆಗಿದ್ದು, ಕ್ರೆಡಿಟ್ ಕಾರ್ಡ್ ಕೂಡ ಎಲ್ಲವನ್ನೂ ಸುಲಭವಾಗಿಸುವಂತೆ ಮಾಡುತ್ತಿದೆ. ಆಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ಗೆ ಜನ ಹೆಚ್ಚು ಹೆಚ್ಚು ಮೊರೆ ಹೋಗುತ್ತಿದ್ದಾರೆ. ಯುಪಿಐ, ಫೋನ್ ಪೇ ಗೂಗಲ್ ಪೇ, ಪೇಟಿಯಂ, ಡಿಜಿಟಲ್ ವಾಲೆಟ್ ಗಳ ಮೂಲಕ ಎಲ್ಲರೂ ತಮ್ಮ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದರಲ್ಲಿ ಯಾವುದು ಉತ್ತಮ, ಯಾವ ಡಿಜಿಟಲ್ ಬ್ಯಾಂಕಿಂಗ್ ಸುರಕ್ಷಿತ ಎಂಬ ಗೊಂದಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾದರೆ ಬನ್ನಿ ಯಾವ ಡಿಜಿಟಲ್ ಬ್ಯಾಂಕಿಂಗ್ ಸೇಫ್ ಎಂದು ತಿಳಿಯೋಣ.

ಯುಪಿಐ: ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಏಕೀಕೃತ ಪಾವತಿ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಇದನ್ನು ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಐಡಿ ರಚಿಸುವ ಮೂಲ ಈ ವ್ಯವಸ್ಥೆಯನ್ನು ಪಡೆಯಬಹುದು. ಇ-ಮೇಲ್ ಅಕೌಂಟ್ ರೀತಿ ಯುಪಿಐ ಐಡಿ ಕೂಡ. ಉದಾಹರಣೆಗೆ ನಿಮ್ಮ ಬ್ಯಾಮಕ್ ಖಾತೆಗೆ ನೀಡಿರುವ ಹೆರಿನ ಮುಂದೆ @okaxis, @sbi, @okhdfc ಎಂದು ಸೇರಿಸಲಾಗುತ್ತದೆ. ಒಮ್ಮೆ ಯುಪಿಐ ಐಡಿಯನ್ನು ರಚಿಸಿದರೆ, ಅದರ ಮೂಲಕ ಸುಲಭವಅಗಿ ಬ್ಯಾಂಕ್ ನಿಂದ ಬ್ಯಾಂಕ್ ಗೆ ಹಣವನ್ನು ವರ್ಗಾಯಿಸಬಹುದು.

ಡಿಜಿಟಲ್ ವಾಲೆಟ್: ಇನ್ನು ಡಿಜಿಟಲ್ ವಾಲೆಟ್ ಯುಪಿಐ ನಂತೆ ಕೆಲಸ ಮಾಡುವುದಿಲ್ಲ. ಇದು ಎರಡು ಬ್ಯಾಂಕ್ ಖಾತೆಗಳ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡುತ್ತದೆ. ಡಿಜಿಟಲ್ ವಾಲೆಟ್ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಹಣವನ್ನು ವರ್ಗಾಯಿಸುತ್ತದೆ. ವಾಲೆಟ್ ಒಂದೇ ಡಿಜಿಟಲ್ ವಾಳೇಘಳ ನಡುವೆ ಕೆಲಸ ಮಾಡುತ್ತದೆ. ಉದಾಹರಣೆಗೆ ಪೇಟಿಯಂ ನಿಂದ ಪೇಟಿಯಂಗೆ, ಇಲ್ಲವೇ ಗೂಗಲ್ ಪೇ ನಿಂದ ಗೂಗಲ್ ಪೇಗೆ ವಾಲೆಟ್ ಹಣವನ್ನು ವರ್ಗಾಯಿಸುತ್ತದೆ. ಈವೆಲ್ಲವೂ ಫೋನ್ ಮೂಲಕವೇ ವರ್ಗಾವಣೆಯಾಗುತ್ತದೆ.

ಪೇಟಿಎಂ, ಫೋನ್ ಪೇ, ಗೂಗಲ್ ಪೇ: ಈ ಮೂರು ಆಪ್‌ ಗಳು ಭಾರತದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಆಪ್‌ ಗಳು. ಗೂಗಲ್‌ ಪೇ ನಲ್ಲಿ ಹಣ ವರ್ಗಾಯಿಸಬೇಕೆಂದರೆ, ಅದರಲ್ಲಿ ಲಿಂಕ್‌ ಆಗಿರುವ ಖಾತೆಯಿಂದಲೇ ಹಣವನ್ನು ವರ್ಗಾಯಿಸಬೇಕು. ಆದರೆ ಪೇಟಿಎಂ ಹಾಗೂ ಫೋನ್‌ ಪೇ ನಲ್ಲಿ ನಿರ್ದಿಷ್ಟ ಹಣವನ್ನು ಆನ್‌ ಲೈನ್‌ ವಾಲೆಟ್‌ ಅನ್ನು ಬಳಸಿ ಹಣ ವಿನಿಮಯ ಮಾಡಬಹುದು. ಈ ಮೂರೂ ಆಪ್‌ ಗಳನ್ನು ಪ್ರತಿಯೊಬ್ಬರೂ ಕೆಲ ಬಿಲ್‌ ಗಳನ್ನು ಕಟ್ಟಲು, ಅಂಗಡಿಗಳಲ್ಲಿ ಹಣ ಸಂದಾಯ ಮಾಡಲು ಬಳಸುತ್ತಾರೆ. ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಸಂದಾಯ ಮಾಡುವುದಕ್ಕೆ ಎಲ್ಲರೂ ಹೆಚ್ಚಾಗಿ ಬಳಸುತ್ತಿದ್ದಾರೆ.

Exit mobile version