ಬೆಂಗಳೂರು, ಮೇ. 03 : ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿ ಯಾವುದು ಎಂಬುದು ಮರೆತು ಹೋಗಿದೆಯಾ..? ಇದರಿಂದ ನಿಮಗೆ ಸಮಸ್ಯೆ ಆಗುತ್ತಿದೆಯಾ..? ಹಾಗಿದ್ದರೆ ಡೋಂಟ್ ವರಿ.. ಈಗ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ಸಂಖ್ಯೆಯನ್ನು ನೀಡಿದ್ದೀರಾ. ಯಾವ ಇ-ಮೇಲ್ ನಮೂದಿಸಿದ್ದೀರಾ ಎಂಬ ಬಗ್ಗೆ ಸುಲಭವಾಗಿ ಮಾಹಿತಿಯನ್ನು ತಿಳಿಯಬಹುದು. ಈ ಹೊಸ ಸೇವೆಯನ್ನು ಸರ್ಕಾರ ಪ್ರಾರಂಭಿಸಿದ್ದು, ಇದರಿಂದ ಹಲವರಿಗೆ ಸಹಾಯವಾಗುತ್ತಿದೆ.
ಈಗ ಹೊಸ ಸೌಲಭ್ಯದಿಂದ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯು ಯಾವುದು ಎಂಬ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈದರ ಬಗ್ಗೆ ಮಾಹಿತಿ ಪಡೆಯಲು ನೀವು ಮೊದಲು ಆಧಾರ್ನ ಅಧಿಕೃತ ವೆಬ್ಸೈಟ್ ಗೆ ತೆರಳಿ. ಅಲ್ಲಿ Verify email/mobile Number ಆಪ್ಷನ್ ಅನ್ನು ಆಯ್ಕೆ ಮಾಡಿ. ಇಲ್ಲವೇ mAadhaar ಮೂಲಕ ಕೂಡ ಮಾಹಿತಿ ಪಡೆಯಬಹುದು.ೀ ವೆಬ್ ಸೈಟ್ ಗೆ ತೆರಳಿದರೆ ನಿಮಗೆ ಅನುಕೂಲವಾಗಲಿದೆ https://myaadhaar. uidai. gov. in/
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ಇದು ಭಾರತದ ಎಲ್ಲಾ ನಿವಾಸಿಗಳಿಗೆ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ವಿವಿಧ ಸರ್ಕಾರಿ-ಅಧಿಕೃತ ಆಧಾರ್ ದಾಖಲಾತಿ ಕೇಂದ್ರಗಳು ಅಥವಾ ಆಧಾರ್ ಸೇವಾ ಕೇಂದ್ರಗಳಲ್ಲಿ ತಮ್ಮ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಒದಗಿಸುವ ಮೂಲಕ ನಿವಾಸಿಗಳು ಈ ಸಂಖ್ಯೆಯನ್ನು ಪಡೆಯುತ್ತಾರೆ. ಭಾರತದ ನಿವಾಸಿಗಳಿಗೆ ಯುಐಡಿಎಐ ಆಧಾರ್ ಉದ್ದೇಶಗಳಿಗಾಗಿ ವಿಶಿಷ್ಟ ಗುರುತಿನ ಪುರಾವೆಯಾಗಿ ಬಳಸಬಹುದಾದ ದಾಖಲೆಯನ್ನು
ಒದಗಿಸುವುದಾಗಿದೆ.
ಇದು ಕೇವಲ ಗುರುತಿನ ಸಂಖ್ಯೆಗಿಂತ ಹೆಚ್ಚು. ತೆರಿಗೆದಾರರು ತಮ್ಮ ವಾರ್ಷಿಕ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಭಾರತದಲ್ಲಿ ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೇ ಈಗ ಯಾವ ಕೆಲಸವೂ ನಡೆಯುವುದಿಲ್ಲ. ಮತದಾರರ ಗುರುತಿನ ಚೀಟಿಗಿಂತ ಭಿನ್ನವಾಗಿ ಅಪ್ರಾಪ್ತ ವಯಸ್ಕರಿಗೂ ಆಧಾರ್ ನೋಂದಣಿ ಲಭ್ಯವಿದೆ.