ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಯಶಸ್ಸು ಮತ್ತು ಪ್ರಗತಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ವಿಷಯಗಳನ್ನು ಹೇಳಲಾಗಿದೆ, ಇನ್ನು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಿಸುವ ಕೆಲ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅವುಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.
ಹಸುವಿನ ವಿಗ್ರಹ
ಮನೆಯಲ್ಲಿ ಹಿತ್ತಾಳೆಯ ಹಸುವಿನ ವಿಗ್ರಹವನ್ನು ಇಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಮಕ್ಕಳ ಮನಸ್ಸು ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತದೆ ಗೋವಿನ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಇದೇ ಉದ್ದೇಶದಿಂದ ಅನೇಕರು ಮನೆಯಲ್ಲಿ ಗೋವಿನ ಪ್ರತಿಮೆಗಳನ್ನು ಇಡುತ್ತಾರೆ. ವಾಸ್ತು ಪ್ರಕಾರ, ಮನೆಯಲ್ಲಿ ಹಸುವಿನ ವಿಗ್ರಹವನ್ನು ಇಡುವುದು ಫಲ ನೀಡಲಿದೆ.ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ವಿಗ್ರಹ ಇಟ್ಟೆರೆ ಹೆಚ್ಚು ಸೂಕ್ತ. ಜೊತೆಗೆ ಗೋವಿನ ವಿಗ್ರಹವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿಯೂ ಇಡಬಹುದು.
ಆಮೆ ವಿಗ್ರಹ
ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಅದೃಷ್ಟದ ಪ್ರಾಣಿಯೆಂದು ಹೇಳ್ತಾರೆ. ಆದ್ದರಿಂದಲೇ ದೇವಸ್ಥಾನಗಳಲ್ಲಿ ಕೂಡ ನಾವು ಹೆಚ್ಚಾಗಿ ಆಮೆಯ ಪ್ರತಿಮೆಯನ್ನು ನೋಡಬಹುದು. ಇನ್ನೂ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ತನ್ನ ಕಡೆಗೆ ಸೆಳೆದುಕೊಳ್ಳೋ ಅದ್ಬುತ ಶಕ್ತಿ ಆಮೆಗಿದೆ.ಮಕ್ಕಳಿಗೆ ಏಕಾಗ್ರತೆ ಜ್ಞಾನ ಹೆಚ್ಚಾಗಬೇಕೆಂದರೆ ಮಕ್ಕಳು ಓದುವ ಕೋಣೆಯಲ್ಲಿ ಹಿತ್ತಾಳೆಯ ಆಮೆಯನ್ನು ಇಟ್ಟರೆ ಮಕ್ಕಳು ಚೆನ್ನಾಗಿ ಓದುತ್ತಾರೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಲಾಭ ಉಂಟಾಗಲು ಆಮೆಯ ಪ್ರತಿಮೆ ನಮಗೆ ಸಹಾಯ ಮಾಡುತ್ತದೆ.
ನಗುವ ಬುದ್ಧ(ಲಾಫಿಂಗ್ ಬುದ್ಧ)
ಲಾಫಿಂಗ್ ಬುದ್ಧನನ್ನು ವಾಸ್ತು ಶಾಸ್ತ್ರದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿ ನೋಡಲಾಗುತ್ತದೆ. ಲಾಫಿಂಗ್ ಬುದ್ಧನನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ನೀವು ಅದನ್ನು ಮನೆಯ ಮುಖ್ಯ ದ್ವಾರದ ಮುಂದೆ ಇಡಲು ಸಾಧ್ಯವಾಗದಿದ್ದರೆ, ಅದನ್ನು ಸೂರ್ಯ ದ ಉದಯಿಸುವ ಪೂರ್ವ ದಿಕ್ಕಿನಲ್ಲಿಯೂ ಇಡಬಹುದು.
ಗಣೇಶ ವಿಗ್ರಹ
ಸಂಕಷ್ಟಹರ ಗಣಪತಿಗೆ (Lord Ganesha) ಪ್ರತಿನಿತ್ಯ ಪೂಜಿಸುವುದರಿಂದ ಕಷ್ಟಗಳು ನಿವಾರಣೆ ಆಗುತ್ತದೆ. ಎಲ್ಲರ ಮೆಚ್ಚಿನ ದೇವರಾದ ಗಣೇಶ ಪ್ರತಿ ಮನೆಗಳಲ್ಲೂ ಇರುತ್ತದೆ. ಗಣೇಶನ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದರಿಂದ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿಡಬೇಕು. ಅದ್ರಲ್ಲೂ ಗಣೇಶ ವಿಗ್ರಹವನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡೋದು ಅತ್ಯಂತ ಶುಭದಾಯಕ. ಪುರಾಣಗಳ ಪ್ರಕಾರ ಶಿವ ಉತ್ತರ ದಿಕ್ಕಿನಲ್ಲಿ ನೆಲೆಸಿರೋ ಕಾರಣ ಗಣೇಶನ ವಿಗ್ರಹವನ್ನು ಈ ದಿಕ್ಕಿಗೆ ಮುಖ ಮಾಡಿಟ್ಟರೆ ಶುಭ ಫಲಗಳು ಸಿಗುತ್ತವೆ.