ಬೆಂಗಳೂರು, ಮಾ. 10 : ಚಿನ್ನದ ಮೇಲೆ ಹೂಡಿಕೆ ಮಾಡುವುದು ಬಹಳ ಸುರಕ್ಷಿತ. ಎಂದಿಗೂ ಚಿನ್ನ ಹಾಗೂ ಭೂಮಿಯ ಮೇಲೆ ಹೂಡಿಕೆ ಮಾಡಿದರೆ, ಎಂದಿಗೂ ನಷ್ಟವಾಗುವುದಿಲ್ಲ. ಭಾರತೀಯ ಹೆಣ್ಣು ಮಕ್ಕಳಿಗಂತೂ ಮನೆಯಲ್ಲಿ ಎಷ್ಟು ಚಿನ್ನವಿದ್ದರೂ ಸಾಕಾಗುವುದಿಲ್ಲ. ಪದೇ ಪದೇ ಚಿನ್ನಾಭರಣವನ್ನು ಖರೀದಿಸುವ ಆಸೆ ಹೆಂಗಳೆಯರಲ್ಲಿ ಕಡಿಮೆಯಾಗುವುದೇ ಇಲ್ಲ. ಹೀಗಿರುವಾಗ ಚಿನ್ನದ ಮೇಲಿನ ಬೆಲೆ ಕಡಿಮೆಯೂ ಆಗುವುದಿಲ್ಲ. ಹತ್ತು ವರ್ಷಗಳ ಹಿಂದೆ ಇತ್ತದ ಚಿನ್ನದ ಬೆಲೆಗೂ ಈಗಿರುವ ಚಿನ್ನದ ಬೆಲೆಯೂ ಮೂರು ಪಟ್ಟು ಹೆಚ್ಚಾಗಿದೆ. ಹಾಗಾಗಿ ಹೂಡಿಕೆ ಮಾಡಲು ಬಯಸುವವರು ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ಹಾಗಾದರೆ, ಚಿನ್ನದ ಮೇಲೆ ಎಲ್ಲಿ ಹೂಡಿಕೆ ಮಾಡಬೇಕು..? ಹೇಗೆ ಹೂಡಿಕೆ ಮಾಡಬೇಕು..? ಚಿನ್ನದ ಮೇಲೆ ಎಷ್ಟು ಹೂಡಿಕೆ ಮಾಡಿದರೆ ಲಾಭ ಸಾಧ್ಯ.? ಎಷ್ಟು ಲಾಭವನ್ನು ಪಡೆಯಬಹುದು.? ಎಂದೆಲ್ಲಾ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಎದ್ದಿರಬಹುದು. ಹೀಗಾಗಿ ಚಿನ್ನದ ಮೇಲಿನ ಹೂಡಿಕೆಯ ಬಗ್ಗೆ ಕೆಲ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯರಿ.
ಯಾವಾಗಲೂ ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಒಂದೇ ಕಡೆ ಹೆಚ್ಚು ಹೂಡಿಕೆ ಮಾಡದಿರಿ. ಇದರಿಂದ ಮುಂದೆ ನಷ್ಟ ಅನುಭವಿಸಬೇಕಾಗಬುದು. ಬದಲಿಗೆ ನಿಮ್ಮ ಹೂಡಿಕೆಯ ಮೊತ್ತದ ಶೇ. 10-15 ರಷ್ಟು ಮೊತ್ತವನ್ನು ಮಾತ್ರವೇ ಚಿನ್ನದ ಮೇಲೆ ಹೂಡಿಕೆ ಮಾಡಿ. ಈ ಹೂಡಿಕೆ ನಿಮಗೆ ಲಾಭವನ್ನು ತಂದು ಕೊಡುತ್ತದೆ.
ಚಿನ್ನಾಭರಣಗಳನ್ನು ನೀವು ಖರೀದಿಸುವಾಗ ಹತ್ತು ಸಲ ಯೋಚನೆ ಮಾಡಿ. ನಿಮಗೆ ಅದರ ಅಗತ್ಯವಿದೆಯೇ ಎಂದು ತಿಳಿಯಿರಿ. ತೀರಾ ಅನಿವಾರ್ಯತೆ ಇದ್ದಾಗ ಮಾತ್ರವೇ ಚಿನ್ನಾಭರಣವನ್ನು ಖರೀದಿ ಮಾಡಿ. ಏಕೆಂದರೆ, ವೇಸ್ಟೇಜ್, ಮೇಕಿಂಗ್ ಎಂದು ಹೆಚ್ಚು ಹಣವನ್ನು ವ್ಯಯಿಸಬೇಕಾಗಬಹುದು. ಇನ್ನು ಕಾಯಿನ್ ಅಥವಾ ಬಿಸ್ಕೆಟ್ ಅನ್ನು ಖರೀದಿಸಿದರೂ ಕಾಪಾಡುವುದು ಕೊಂಚ ಕಷ್ಟವೇ. ಹೀಗಾಗಿ ಚಿನ್ನವನ್ನು ಖರೀದಿಸುವಾಗ ಆದಷ್ಟು ಆಲೋಚಿಸಿ ಖರೀದಿ ಮಾಡಿ. ಇನ್ನು ಖರೀದಿಸಿದ ಬಿಲ್ ಗಳನ್ನು ಬಿಸಾಡದೇ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.
ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಡಿಜಿಟಲ್ ಬಾಂಡ್ ಗಳು ಬಂದಿವೆ. ಅದರ ಮೇಲೂ ನೀವು ಹೂಡಿಕೆಯನ್ನು ಮಾಡಬಹುದು. ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್ ಎಸ್, ಗೋಲ್ಡ್ ಫಂಡ್ಸ್ ಹಾಗೂ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆಗಳು ನೀವು ಚಿನ್ನವನ್ನು ಖರೀದಿಸಿದಾಗ ತಂದುಕೊಡುವ ಲಾಭವನ್ನೇ ಇಲ್ಲೂ ತಂದು ಕೊಡುತ್ತದೆ. ಆದರೆ, ಈ ಚಿನ್ನವನ್ನು ನೀವು ಕೈನಲ್ಲಿ ಮುಟ್ಟು ಸಾಧ್ಯವಾಗುವುದಿಲ್ಲವಷ್ಟೇ.