ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ದೆಹಲಿ-ಎನ್ಸಿಆರ್ನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸಾಂಸ್ಥಿಕ ಹೂಡಿಕೆಗಳು ವರ್ಷದಿಂದ ವರ್ಷಕ್ಕೆ 2.5 ಪಟ್ಟು ಏರಿಕೆಯಾಗಿದ್ದು, 754 ಮಿಲಿಯನ್ ಡಾಲರ್ಗೆ ತಲುಪಿದೆ ಎಂದು ಕಾಲಿಯರ್ಸ್ ಇಂಡಿಯಾ ವರದಿ ಮಾಡಿದೆ.
ಭಾರತೀಯ ರಿಯಲ್ ಎಸ್ಟೇಟ್ನಲ್ಲಿನ ಒಟ್ಟು ಹೂಡಿಕೆಗಳು ಈ ವರ್ಷದ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಶೇಕಡಾ 18 ರಷ್ಟು ಏರಿಕೆಯಾಗಿದ್ದು, 3.6 ಶತಕೋಟಿ ಡಾಲರ್ಗೆಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 3.03 ಶತಕೋಟಿಯಿತ್ತು.
ಅಂಕಿಅಂಶಗಳ ಪ್ರಕಾರ, ದೆಹಲಿ-ಎನ್ಸಿಆರ್ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 754 ಮಿಲಿಯನ್ ಡಾಲರ್ ಮೌಲ್ಯದ ಸಾಂಸ್ಥಿಕ ಹೂಡಿಕೆಗಳನ್ನು ಆಕರ್ಷಿಸಿದೆ. ಇದು ವರ್ಷದ ಹಿಂದಿನ ಅವಧಿಯಲ್ಲಿ 301 ಮಿಲಿಯನ್ ಡಾಲರ್ ಹೂಡಿಕೆಯಾಗಿತ್ತು.
ಬೆಂಗಳೂರಿನಲ್ಲಿ, ಹೂಡಿಕೆಯು 317 ಮಿಲಿಯನ್ ಡಾಲರ್ನಿಂದ 375 ಮಿಲಿಯನ್ ಡಾಲರ್ಗೆ 18% ಏರಿಕೆಯಾಗಿದೆ. ಚೆನ್ನೈನಲ್ಲಿ 98 ಮಿಲಿಯನ್ನಿಂದ 345 ಮಿಲಿಯನ್ ಡಾಲರ್ಗೆ ಹೂಡಿಕೆ ಹೆಚ್ಚಾಗಿದೆ.

ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿನ ಸಾಂಸ್ಥಿಕ ಹೂಡಿಕೆಗಳು 452 ಮಿಲಿಯನ್ ಡಾಲರ್ನಿಂದ 477 ಮಿಲಿಯನ್ ಡಾಲರ್ಗೆ 5% ಏರಿಕೆಯಾಗಿದೆ. ಆದರೆ, ಪುಣೆಯಲ್ಲಿ 232 ಮಿಲಿಯನ್ ಡಾಲರ್ನಿಂದ 9 ಮಿಲಿಯನ್ ಡಾಲರ್ಗೆ 96% ಕುಸಿಯಿತು.
ಹೈದರಾಬಾದ್ ಮತ್ತು ಕೋಲ್ಕತ್ತಾ ಈ ವರ್ಷದ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಯಾವುದೇ ಹೂಡಿಕೆಯಾಗಿಲ್ಲ. ಹಿಂದಿನ ವರ್ಷದ ಅವಧಿಯಲ್ಲಿ ಅನುಕ್ರಮವಾಗಿ 486 ಮಿಲಿಯನ್ ಮತ್ತು 105 ಮಿಲಿಯನ್ ಡಾಲರ್ ಹೂಡಿಕೆಯಾಗಿತ್ತು.
ಇತರ ನಗರಗಳಲ್ಲಿನ ಹೂಡಿಕೆಯು ಈ ವರ್ಷದ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ 1,619 ಮಿಲಿಯನ್ ಡಾಲರ್ಗೆ 54% ಹೆಚ್ಚಾಗಿದೆ. ಹಿಂದಿನ ವರ್ಷದ ಅವಧಿಯಲ್ಲಿ 1,049 ಮಿಲಿಯನ್ ಡಾಲರ್ ಆಗಿತ್ತು.
“ದೇಶೀಯ ಸಾಂಸ್ಥಿಕ ಮತ್ತು ಚಿಲ್ಲರೆ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಭಾರತೀಯ ರಿಯಲ್ ಎಸ್ಟೇಟ್ನ ಬಂಡವಾಳವು ಹೆಚ್ಚಾಗುತ್ತಿದೆ” ಎಂದು ಕೊಲಿಯರ್ಸ್ ಇಂಡಿಯಾದ ಕ್ಯಾಪಿಟಲ್ ಮಾರ್ಕೆಟ್ಸ್ ಮತ್ತು ಇನ್ವೆಸ್ಟ್ಮೆಂಟ್ ಸರ್ವೀಸಸ್ನ ವ್ಯವಸ್ಥಾಪಕ ನಿರ್ದೇಶಕ ಪಿಯೂಷ್ ಗುಪ್ತಾ ಹೇಳಿದ್ದಾರೆ.
ಜಾಗತಿಕ ಮಂದಗತಿಯ ಪ್ರವೃತ್ತಿಯ ನಡುವೆಯೂ ಭಾರತದಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆ ನಡೆಯುತ್ತಿದೆ. ಹಣದುಬ್ಬರ ಮತ್ತು ಬಡ್ಡಿದರಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಆರ್ಥಿಕತೆಯ ಸ್ಥಿತಿಯು ದೀರ್ಘಾವಧಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ಪಿಯೂಷ್ ಗುಪ್ತಾ ಹೇಳಿದ್ದಾರೆ.
ದೇಶೀಯ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅವರ ಹೂಡಿಕೆಯ ಒಳಹರಿವು ಕಳೆದ ವರ್ಷದ ಇದೇ ಅವಧಿಯಲ್ಲಿ 14% ಇದದ್ದು, 2022 ರ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ 18% ಇದೆ. ಆದರೂ, ಜಾಗತಿಕ ಹೂಡಿಕೆದಾರರು ವ್ಯವಹಾರಗಳಲ್ಲಿ ಹೆಚ್ಚು ಭಾಗವಹಿಸುವಿಕೆಯೊಂದಿಗೆ ಫಂಡ್ ಚಟುವಟಿಕೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ, ಆರ್ಥಿಕ ಹಿಂಜರಿತದಿಂದಾಗಿ ಹಣ ನಿಯೋಜನೆಯಲ್ಲಿ ಸ್ವಲ್ಪ ನಿಧಾನವಾಗಬಹುದು. ಆದರೂ, ಭಾರತೀಯ ಮಾರುಕಟ್ಟೆಯು ತುಲನಾತ್ಮಕವಾಗಿ ಉತ್ತಮವಾಗಿದೆ. ಹೂಡಿಕೆದಾರರು ಅದನ್ನು ಅನುಕೂಲಕರವಾಗಿ ನೋಡುವುದನ್ನು ಮುಂದುವರೆಸಿದ್ದಾರೆ,” ಎಂದು ಹಿರಿಯ ನಿರ್ದೇಶಕ ಮತ್ತು ಕೊಲಿಯರ್ಸ್ ಇಂಡಿಯಾದ ಸಂಶೋಧನಾ ಮುಖ್ಯಸ್ಥ ವಿಮಲ್ ನಾಡರ್ ಹೇಳಿದ್ದಾರೆ.


