ಬೆಂಗಳೂರು, ಜೂ. 30 : ಹಿರಿಯ ನಾಗರಿಕರಿಗಾಗಿಯೇ ಕೆಲ ತೆರಿಗೆ ವಿನಾಯ್ತಿಗಳನ್ನು ಪಡೆಯಬಹುದು. ತೆರಿಗೆಗಳನ್ನು ಉಳಿಸಲು ನಿಮಗೆ ಸಹಾಯ ಮಾಡುವ ಕೆಲವು ಮಾರ್ಗಗಳ ಬಗ್ಗೆ ತಿಳಿಯುವುದು ಒಳ್ಳೆಯದು. ಇನ್ನು ಹಿರಿಯ ನಾಗರೀಕರು ತೆರಿಗೆ ವಿನಾಯ್ತಿಯನ್ನು ಪಡೆಯುವುದು ಹೇಗೆ? ತಮ್ಮ ಖಾತೆಯಿಂದ ಹೆಚ್ಚಿನ ಮೊತ್ತ ತೆರಿಗೆ ಪಾಲಾಗದೇ, ಉಳಿತಾಯ ಮಾಡುವುದು ಹೇಗೆ? ಹಿರಿಯ ನಾಗರೀಕರಿಗಾಗಿ ಸರ್ಕಾರಗಲು ನೀಡಿರುವ ವಿನಾಯ್ತಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯಬಹುದು.
ಹಿರಿಯ ನಾಗರಿಕರಿಗೆ 1961ರ ಐಟಿ ಕಾಯ್ದೆಯ ಸೆಕ್ಷನ್ 194ಪಿ ಅಡಿಯಲ್ಲಿ ಕೆಲ ಷರತ್ತುಗಳ ಮೇಲೆ ತರಿಗೆ ಕಟ್ಟುವುದರಿಂದ ಮುಕ್ತಿ ಕೊಡಲಾಗಿದೆ. ಮೊದಲನೇಯದಾಗಿ ಹಿರಿಯ ನಾಗರಿಕರ ವಯಸ್ಸು 75 ವರ್ಷವಾಗಿರಬೇಕು. ಇವರ ಆದಾಯವು ಪಿಂಚಣಿ ಹಾಗೂ ಬಡ್ಡಿ ಆಗಿರಬೇಕು. ಅದೂ ಕೂಡ ಪಿಂಚಣಿ ಬರುವ ಬ್ಯಾಂಕಿನಲ್ಲೇ ಬಡ್ಡಿ ಆದಾಯ ಬರಬೇಕು. ಆಗ ಅದಕ್ಕೆ ತೆರಿಗೆಯನ್ನು ವಿಧಿಸುವುದಿಲ್ಲ. ಈ ಹೊಸ ಸೆಕ್ಷನ್ ಆದ 194ಪಿ 2021ರ ಏಪ್ರಿಲ್ 1ರಿಂದ ಜಾರಿಯಲ್ಲಿದೆ.
ಪಿಂಚಣಿ ಮತ್ತು ಠೇವಣಿಯ ಬಡ್ಡಿ ಹೊರತುಪಡಿಸಿ ವಾರ್ಷಿಕವಾಗಿ 2.5 ಲಕ್ಷ ರೂನಷ್ಟು ಬೇರೆ ಆದಾಯ ಹೊಂದಿದ ಯಾವುದೇ ಹಿರಿಯ ನಾಗರಿಕರಾದರೂ ಐಟಿ ರಿಟರ್ನ್ ಸಲ್ಲಿಸುವುದು ಅವಶ್ಯಕ. ಆದಾಯ ತೆರಿಗೆ ವಿನಾಯಿತಿ ಮಿತಿ ರೂ.2.5 ಲಕ್ಷದವರೆಗೆ ಇರುತ್ತದೆ. ಒಟ್ಟು ಆದಾಯ ರೂ. 50 ಲಕ್ಷಕ್ಕಿಂತ ಹೆಚ್ಚಿದ್ದರೆ ಮತ್ತು ರೂ. 1 ಕೋಟಿ ವರೆಗೆ ಸರ್ಚಾರ್ಜ್ ಅನ್ವಯಿಸುತ್ತದೆ. ಆದಾಯ ತೆರಿಗೆಯ 10%. ಒಟ್ಟು ಆದಾಯ ರೂ.1 ಕೋಟಿ ಮೀರಿದರೆ ಸರ್ಚಾರ್ಜ್ ಅನ್ವಯಿಸುತ್ತದೆ.
ಆದಾಯ ತೆರಿಗೆಯ 15%. ಪಿಎಫ್ನಿಂದ ಪಡೆದ ಮೊತ್ತವು ಸರ್ಕಾರಿ ನೌಕರರಿಗೆ ತೆರಿಗೆ ಮುಕ್ತವಾಗಿದೆ. ಸರ್ಕಾರೇತರ ಉದ್ಯೋಗಿಗಳಿಗೆ, 5 ವರ್ಷಗಳಿಗಿಂತ ಕಡಿಮೆಯಿಲ್ಲದ ನಿರಂತರ ಸೇವೆಯನ್ನು ಸಲ್ಲಿಸಿದ ನಂತರ ಮಾನ್ಯತೆ ಪಡೆದ ಪಿಎಫ್ ನಿಂದ ಪಡೆದರೆ ಪಿಎಫ್ ರಸೀದಿಗಳನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.