Revenue Facts

UPI ಬಗ್ಗೆ ಆರ್‌ಬಿಐ ಮಹತ್ವದ ಘೋಷಣೆ;ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಿದ ಆರ್‌ಬಿಐ

UPI ಬಗ್ಗೆ ಆರ್‌ಬಿಐ ಮಹತ್ವದ ಘೋಷಣೆ;ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಿದ  ಆರ್‌ಬಿಐ

#Important announcement # RBI about UPI # increased # transaction limit # 5 lakh

ಬೆಂಗಳೂರು;UPI ಬಗ್ಗೆ ಆರ್‌ಬಿಐ(RBI) ಮಹತ್ವದ ದೊಡ್ಡ ಘೋಷಣೆ ಮಾಡಿದ್ದಾರೆ ಯುಪಿಐ ಬಳಕೆದಾರರಿಗೆ ಇದು ಶುಭ ಸುದ್ದಿ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ UPI ವಹಿವಾಟುಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ವಹಿವಾಟಿಗೆ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ.ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಮಹತ್ವದ ಘೋಷಣೆ ಮಾಡಿದ್ದಾರೆ. ಯುಪಿಐ ಮೂಲಕ ಪಾವತಿ ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆದರೆ ಇದಕ್ಕೆ ಒಂದು ಷರತ್ತು ಇದೆ. ಶಿಕ್ಷಣ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಹೆಚ್ಚಿನ ಮೊತ್ತದ ಆನ್‌ಲೈನ್ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.RBI ಕಾಲಕಾಲಕ್ಕೆ UPI ವಹಿವಾಟಿನ ವಿವಿಧ ವರ್ಗಗಳ ಮಿತಿಗಳನ್ನು ಪರಿಶೀಲಿಸುತ್ತದೆ.

ಈ ಮಧ್ಯೆ, ಸಾಮಾನ್ಯವಾಗಿ ಪ್ರತಿ ಬಳಕೆದಾರರು UPI ಮೂಲಕ ಒಂದು ದಿನದಲ್ಲಿ ಕೇವಲ 1 ಲಕ್ಷ ರೂ. ಮಾತ್ರ ವಹಿವಾಟು ನಡೆಸಬಹುದು.ಈಗ ಒಂದೇ ಬಾರಿಗೆ 5 ಲಕ್ಷದವರೆಗೆ ಪಾವತಿ ಮಾಡಬಹುದು. ಮೊದಲು ಈ ಮಿತಿ ಒಂದು ಲಕ್ಷ ರೂಪಾಯಿಗೆ ಸೀಮಿತವಾಗಿತ್ತು. ಜಿಡಿಪಿ ಬೆಳವಣಿಗೆಯ ಅಂದಾಜನ್ನು 6.50 ರಿಂದ 7 ರಷ್ಟು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ. ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ GDP ಅಂಕಿಅಂಶವು 6.7 ಶೇಕಡಾ ಎಂದು ನಿರೀಕ್ಷಿಸಲಾಗಿದೆ,ಹಣದುಬ್ಬರ ದರವನ್ನು ಶೇ.4ಕ್ಕೆ ತರುವ ಗುರಿ ತಲುಪಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂದರು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡಾ 5.6 ರಷ್ಟಿರುವ ಸಾಧ್ಯತೆಯಿದೆ.ಇದು ಚಿಲ್ಲರೆ ಡಿಜಿಟಲ್ ಪಾವತಿಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಭಾರತದಲ್ಲಿ, ಮತ್ತು ಅದರ ಅಳವಡಿಕೆಯು ತ್ವರಿತ ಗತಿಯಲ್ಲಿ ಹೆಚ್ಚುತ್ತಿದೆ.

Exit mobile version