Revenue Facts

ನಿಮ್ಮ ವಿಮೆಯ ದಾಖಲೆಗಳು ಕಳೆದು ಹೋದರೆ ಹೀಗೆ ಮಾಡಿ..

ನಿಮ್ಮ ವಿಮೆಯ ದಾಖಲೆಗಳು ಕಳೆದು ಹೋದರೆ ಹೀಗೆ ಮಾಡಿ..

ಬೆಂಗಳೂರು, ಜು. 11 : ನಿಮ್ಮ ಅಮೂಲ್ಯವಾದ ವಿಮಾ ಪಾಲಿಸಿ ಅಕಸ್ಮಾತ್ ಆಗಿ ಕಳೆದು ಹೋದರೆ, ನೌು ಬಹಳ ಸಮಸ್ಯೆ ಅನ್ನು ಎದುರಿಸಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಿಮೆಯನ್ನು ಕಷ್ಟಪಟ್ಟು ಖರೀದಿಸಿರುತ್ತೀರಾ. ಆದರೆ, ಅದನ್ನು ಕ್ಲೈಮ್ ಮಾಡುವ ಸಂದರ್ಭದಲ್ಲಿ ದಾಖಲೆಗಳು ಇಲ್ಲ ಎಂದರೆ ಬಹಳ ಕಷ್ಟವಾಗುತ್ತದೆ. ದಾಖಲೆಗಳಿಲ್ಲದೆ ವಿಮಾ ಕಂಪನಿಗಳು ವಿಮಾ ಮೊತ್ತವನ್ನು ನೀಡುವುದಿಲ್ಲ. ಆರೋಗ್ಯ, ಶಿಕ್ಷಣ, ಜೀವ ವಿಮಾಗಳನ್ನು ಕ್ಲೈಮ್ ಮಾಡಲು ದಾಖಲೆಗಳು ಖಂಡಿತವಾಗಿಯೂ ಬೇಕಾಗುತ್ತದೆ.

ಹಾಗೊಂದು ವೇಳೆ ನಿಮ್ಮ ವಿಮಾ ದಾಖಲೆಗಳು ಕಳೆದು ಹೋದರೆ, ಹಾಗೆ ಸುಮ್ಮನಿರಬೇಡಿ. ಬದಲಿಗೆ ನಿಮ್ಮ ಏಜೆಂಟ್ ಅನ್ನು ಮೊದಲು ಸಂಪರ್ಕಿಸಿ. ಅವರಿಗೆ ನಿಮ್ಮ ವಿಮಾ ದಾಖಲೆಗಳು ಕಳೆದು ಹೋಗಿರುವ ವಿಚಾರವನ್ನು ತಿಳಿಸಿ. ಆಗ ನಿಮ್ಮ ಏಜೆಂಟ್ ನಿಮ್ಮ ಬಳಿ ಕೆಲವು ದಾಖಲೆಗಳನ್ನು ಕೇಳುತ್ತಾರೆ. ಆ ದಾಖಲೆಗಳನ್ನು ಮಿಸ್ ಮಾಡದೇ, ಅವರಿಗೆ ತಲುಪಿಸಿ. ಆಗ ವಿಮಾ ಕಂಪನಿಗೆ ಏಜೆಂಟರು ಅದನ್ನು ನೀಡಿ ಡುಪ್ಲಿಕೇಟ್ ದಾಖಲೆಗಳನ್ನು ನೀಡುತ್ತಾರೆ. ವಿಮಾ ಪ್ರಮಾಣಪತ್ರದ ಮರುಹಂಚಿಕೆಗಾಗಿ ವಿಮಾದಾರರಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಿ. ನಿಮ್ಮ ಸ್ಥಳೀಯ ಪತ್ರಿಕೆಯಲ್ಲಿ ಈ ಕೆಳಗಿನವುಗಳನ್ನು ಪ್ರಕಟಿಸಿ. ಪಾಲಿಸಿದಾರರ ಹೆಸರು, ವಿಮಾ ಪಾಲಿಸಿ ಸಂಖ್ಯೆ, ವಿಮಾ ಕಂಪನಿಯ ಹೆಸರು, ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ, ನಿಮ್ಮ ವಿಮಾದಾರರಿಗೆ ನೋ-ಜುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಪರಿಹಾರ ಬಾಂಡ್ ಅನ್ನು ಕಳುಹಿಸಿ.

ವಿಮಾ ಪಾಲಿಸಿಯು ವಿಮಾ ಕಂಪನಿಯು ನೀಡಿದ ಕಾನೂನು ದಾಖಲೆಯಾಗಿದೆ ಮತ್ತು ವಿಮಾ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುತ್ತದೆ. ಅದು ತಪ್ಪಿಹೋದರೆ, ಕಳೆದುಹೋದರೆ ಅಥವಾ ಹಾನಿಗೊಳಗಾಗಿದ್ದರೆ, ಸಂಪೂರ್ಣವಾಗಿ ಅಥವಾ ಭಾಗಶಃ, ನಿಗದಿತ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ನಕಲಿ ಪಾಲಿಸಿ ದಾಖಲೆಯನ್ನು ನೀಡುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು, ಇದು ವಿಮಾದಾರರಲ್ಲಿ ಬದಲಾಗಬಹುದು.

Exit mobile version