ಬೆಂಗಳೂರು, ಮೇ. 05 : ಈಗ ಎಲ್ಲವೂ ಮನೆಯಲ್ಲಿ ಕುಳಿತು ಆನ್ ಲೈನ್ ನಲ್ಲೇ ಬ್ಯಾಂಕ್ ವ್ಯವಹಾರವನ್ನು ಮಾಡಬಹುದು. ಹೀಗಾಗಿ ಈಗ ಯಾರೂ ಹೆಚ್ಚಾಗಿ ಬ್ಯಾಂಕ್ ಗಳಿಗೆ ಹೋಗಲು ಬಯಸುವುದಿಲ್ಲ. ಹೀಗಿರುವಾಗ ಕೆಲವರು ಒಂದಲ್ಲ ಎಂದು ಎರಡು-ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆಗ ಯಾವುದಾದರೂ ಒಂದು ಖಾತೆಯಲ್ಲಿ ಹೆಚ್ಚು ವ್ಯವಹರಿಸುವುದಿಲ್ಲ. ಕೆಲವೊಮ್ಮೆ ಯಾವುದಾದರೂ ಒಂದು ಖಾತೆ ಇರುವುದನ್ನೇ ಮರೆತು ಬಿಡುತ್ತಾರೆ. ಅದರಲ್ಲಿ ಯಾವುದೇ ವ್ಯವಹಾರವನ್ನು ನಡೆಸುವುದಿಲ್ಲ. ಆಗ ಅಂತಹ ಬ್ಯಾಂಕ್ ಖಾತೆಗಳೂ ನಿಷ್ಕ್ರಿಯಗೊಳ್ಳುತ್ತವೆ.
ಬ್ಯಾಂಕ್ ಖಾತೆಯ ಹೇಗೆ ನಿಷ್ಕ್ರಿಯಗೊಳ್ಳುತ್ತದೆ.? ಅದನ್ನು ಮತೆತ ಬಳಸಬೇಕು ಎಂದರೆ ಏನು ಮಾಡಬೇಕು.? ಖಾತೆಯಲ್ಲಿ ಹಣವಿದ್ದರೆ, ನಿಷ್ಕ್ರಿಯಗೊಂಡ ಮೇಲೆ ನಮ್ಮ ಹಣವನ್ನು ವಾಪಸ್ ಪಡೆಯಬಹುದಾ..? ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಯನ್ನು ಹೇಘೆ ಸಂಭಾಳಿಸುವುದು.? ಎಂಬ ಹಲವು ಪ್ರಶ್ನೆಗಳಿಗೆ ಈ ಲೇಖನದಲ್ಲಿ ವಿವರಣೆಯನ್ನು ನೀಡಲಾಗಿದೆ. ನೀವು ಓದಿ, ನಿಮ್ಮ ಖಾತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.
ಬ್ಯಾಂಕ್ ಖಾತೆಯನ್ನು ತೆರೆದ ಬಳಿಕ ಆಗಾಗ ವ್ಯವಹರಿಸುತ್ತಿರಬೇಕು. ಕೆಲ ಸಮಯದ ಬಳಿಕ ವಹಿವಾಟು ನಡೆಸದಿದ್ದರೆ ಅಂತಹ ಖಾತೆಗಳು ಆಟೋಮೆಟಿಕ್ ಆಗಿ ನಿಷ್ಕ್ರಿಯಗೊಳ್ಳುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಎರಡು ವರ್ಷಗಳ ಕಾಲ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಿದ್ದರೆ, ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ನಿಷ್ಕ್ರಿಯಗೊಂಡ ಖಾತೆಯನ್ನು ಸಕ್ರಿಯಗೊಳಿಸಲು ಹತ್ತು ವರ್ಷ ಬೇಖು. ಹತ್ತು ವರ್ಷದ ಬಳಿಕ ಬ್ಯಾಂಕ್ ಖಾತೆ ಪುನಃ ಸಕ್ರಿಯಗೊಳ್ಳುತ್ತದೆ. ಆದರೆ, ಖಾತೆಯಲ್ಲಿ ಹಣವಿದ್ದು, ನಿಷ್ಕ್ರಿಯಗೊಂಡಿದ್ದರೆ, ಅದರಲ್ಲಿದ್ದ ಹಣ ನಿಮ್ಮ ಕೈ ಸೇರುವುದಿಲ್ಲ.
ಬ್ಯಾಂಕ್ ಖಾತೆಯಲ್ಲಿದ್ದ ಸಂಪೂರ್ಣ ಹಣ ಮತ್ತು ಬಡ್ಡಿ ಮೊತ್ತವನ್ನು ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಸಂದಾಯಿಸಲಾಗುತ್ತದೆ. ಈ ಹಣ ಯಾವುದೇ ಕಾರಣಕ್ಕೂ ಹಿಂತಿರುಗಿ ಬರುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳಬಾರದು ಎಂದರೆ ಆಗಾಗ ವಹಿವಾಟು ನಡೆಸುತ್ತಿರಿ. ಅಗತ್ಯವಿಲ್ಲದಿದ್ದರೂ ಹಣವನ್ನು ತೆಗೆಯುವುದು, ಹಾಕುವುದನ್ನು ಮಾಡುತ್ತಿರಿ.
ಆಗ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುವುದಿಲ್ಲ. ಇನ್ನು ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಖಾತೆಗಳಿದ್ದರೆ, ಅದರಲ್ಲಿ ಯಾವುದಾದರೂ ಒಂದು ಖಾತೆಯನ್ನು ಮುಚ್ಚಲು ಬಯಸಿದರೆ, ಅದರಲ್ಲಿ ಹಣವಿರಲಿ. ಹಣವಿಲ್ಲದೇ ಯಾವುದೇ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆಯನ್ನು ಸಂಫೂರ್ಣವಾಗಿ ಕ್ಲೋಸ್ ಮಾಡಲು ಬ್ಯಾಂಕಿಗೆ ಶುಲ್ಕವನ್ನು ನೀಡಬೇಕಾಗುತ್ತದೆ. ಅದಕ್ಕಾಗಿಯಾದರೂ ನೀವು ನಿಮ್ಮ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.