Revenue Facts

ನಿಮ್ಮ ಇಪಿಎಫ್ ಖಾತೆಗೆ ನಾಮಿನಿಯ ಹೆಸರನ್ನು ನಮೂದಿಸಿಲ್ವಾ? ಹಾಗಾದರೆ ಮೊದಲು ಹೀಗೆ ಮಾಡಿ..

ನಿಮ್ಮ ಇಪಿಎಫ್ ಖಾತೆಗೆ ನಾಮಿನಿಯ ಹೆಸರನ್ನು ನಮೂದಿಸಿಲ್ವಾ? ಹಾಗಾದರೆ ಮೊದಲು ಹೀಗೆ ಮಾಡಿ..

ಬೆಂಗಳೂರು, ಮೇ. 30 : ಬ್ಯಾಂಕ್ ಸೇರಿದಂತೆ ಹಲವು ಸ್ಕೀಮ್ ಗಳಿಗೆ ನಾಮಿನಿಯನ್ನು ನಮೂದಿಸುವುದು ಬಹಳ ಮುಖ್ಯ. ಯಾಕೆಂದರೆ, ಅಕಸ್ಮಾತ್ ಆಗಿ ಸ್ಕೀಮ್ ಪಡೆದವರು ಸಾವನ್ನಪ್ಪಿದರೆ, ಅದರ ಪ್ರಯೋಜನವನ್ನು ನಾಮಿನಿಗಳು ಪಡೆಯಬಹುದಾಗಿದೆ. ಈಗ ಇಪಿಎಫ್ ಗೂ ಕೂಡ ನಾಮಿನಿ ಹೆಸರನ್ನು ನಮೂದಿಸುವಂತೆ ಇಪಿಎಫ್ಒ ತಿಳಿಸಿದೆ. ಹಾಗಾದರೆ, ಆನ್ ಲೈನ್ ನಲ್ಲೇ ಇಪಿಎಫ್ ಖಾತೆಗೆ ನಾಮಿನಿಯನ್ನು ನಮೂದಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಇಪಿಎಫ್ಒಗೆ ಇ–ನಾಮಿನೇಶನ್ ಮಾಡುವುದು ಬಹಳ ಸುಲಭ. ಇಪಿಎಫ್ಒ ಸದಸ್ಯರ ಪೋರ್ಟಲ್ಗೆ ಲಾಗಿನ್ ಆಗಬೇಕು. ಬಳಿಕ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ಕೂಡ ಅದರಲ್ಲಿ ನಮೂದಿಸಬೇಕು. ಕುಟುಂಬ ಸದಸ್ಯರ ಫೋಟೋ ಮತ್ತು ಆಧಾರ್ ಸಂಖ್ಯೆ ಅನ್ನು ಸೇರಿಸಿ, ಇತರೆ ವಿವರಗಳನ್ನು ದಾಖಲಿಸಬೇಕು. ಕುಟುಂಬದವರ ಮಾಹಿತಿ ಆಧಾರ್ ಕಾರ್ಡ್ ನೊಂದಿಗೆ ಹೊಂದಿಕೆಯಾಗದಿದ್ದರೆ, ಇಪಿಎಫ್ ನೊಂದಿಗೆ ಯಾವುದು ಯಶಸ್ವಿಯಾಗಿ ಸೇರ್ಪಡೆಗೊಳ್ಳುವುದಿಲ್ಲ.

ಅಗತ್ಯವಿದ್ದಲ್ಲಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ವಿವರವನ್ನು ಕೂಡ ಸೇರಿಸುವ ಇಚ್ಛೆ ಇದ್ದರೆ, ಸೇರಿಸಬಹುದು. ಇದಾದ ನಂತರ ಅಲ್ಲಿ ಪಿಡಿಎಫ್ ಫೈಲ್ ಸಿದ್ಧವಾಗುತ್ತದೆ. ಬಳಿಕ ನಿಮ್ಮ ಆಧಾರ್ ಗೆ ನೀಡಿರುವ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಇದನ್ನು ಪಿಡಿಎಫ್ ಫೈಲ್ಗೆ ಇ–ಸೈನ್ ಹಾಕಬೇಕು. ಆಗಷ್ಟೇ ನಾಮಿನಿ ಹೆಸರು ನಮೂದಾಗುತ್ತದೆ. ಪಿಡಿಎಫ್ಗೆ ಇ–ಸಹಿ ಬೀಳದೇ ಹೋದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಇಪಿಎಫ್ ಖಾತೆ ಹೊಂದಿರುವ ವ್ಯಕ್ತಿ ಮೃತಪಟ್ಟರೆ, ಃಣ ನಾಮಿನಿ ಕೈ ಸೇರುವುದಿಲ್ಲ.

ಹಾಗಾಗಿ ಪಿಡಿಎಫ್ ಫೈಲ್ ಗೆ ಇ–ಸೈನ್ ಹಾಕಬೇಕು. ಇದಕ್ಕಾಗಿ ಇ-ಸೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಬಾಕ್ಸ್ ಒಂದನ್ನು ನೀಡಿರಲಾಗುತ್ತದೆ. ಇದರಲ್ಲಿ ಎರಡು ಆಯ್ಕೆಗಳಿರುತ್ತವೆ. ಆಧಾರ್ ನಂಬರ್ ಅಥವಾ ವರ್ಚುವಲ್ ಐಡಿ. ಇದೆರಡರಲ್ಲಿ ಒಂದನ್ನು ನಮೂದಿಸಿ ವೆರಿಫೈ ಬಟನ್ ಒತ್ತಿರಿ. ಆಧಾರ್ ಜೋಡಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಹಾಕಿದರೆ ನಾಮಿನೇಶನ್ ಯಶಸ್ವಿಯಾಗುತ್ತದೆ.

Exit mobile version