Revenue Facts

ಆದಾಯ ತೆರಿಗೆಯನ್ನು ಹೆಚ್ಚಿಗೆ ಕಟ್ಟಿದ್ದೀರಾ..? ಹಾಗಾದರೆ ರೀಫಂಡ್‌ ಪಡೆಯಿರಿ..

ಆದಾಯ ತೆರಿಗೆಯನ್ನು ಹೆಚ್ಚಿಗೆ ಕಟ್ಟಿದ್ದೀರಾ..? ಹಾಗಾದರೆ ರೀಫಂಡ್‌ ಪಡೆಯಿರಿ..

ಬೆಂಗಳೂರು, ಮೇ. 24 : ಆದಾಯ ತೆರಿಗೆಯನ್ನು ಕಟ್ಟುವಾಗ ಕೆಲವೊಮ್ಮೆ ನಮಗೆ ಅರಿವಿಲ್ಲದೇ, ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿರುತ್ತೀವಿ. ಅಂತಹ ಸಂದರ್ಭದಲ್ಲಿ ರೀಫಂಡ್‌ ಪಡೆಯಲು ಆದಾಯ ತೆರಿಗೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಆದಾಯ ತೆರಿಗೆ ಕಟ್ಟುವುದು ಹೇಗೆ, ರಿಟರ್ನ್‌ ಫೈಲಿಂಗ್‌ ಬಗ್ಗೆ ನಿಮಗೆ ತಿಳಿದಿದೆ. ಆದರೆ, ರೀಫಂಡ್‌ ಪಡೆಯುವುದು ಹೇಗೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಅಕಸ್ಮಾತ್‌ ಆಗಿ ಆದಾಯ ತೆರಿಗೆಯನ್ನು ಹೆಚ್ಚಿನ ಮೊತ್ತ ಪಾವತಿಸಿದ್ರೆ, ವಾಪಸ್‌ ಪಡೆಯಲು ಹೀಗೆ ಮಾಡಿದೆ.

ಆದಾಯ ತೆರಿಗೆ ಯಲ್ಲಿ ರೀಫಂಡ್‌ ಪಡೆಯಲು, 1961ರ ಸೆಕ್ಷನ್ 143 (1) ಕಾಯ್ದೆ ಅಡಿಯಲ್ಲಿ ನೋಟಿಸ್ ಕಳುಹಿಸಲಾಗುತ್ತದೆ. ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಯಾವಾಗಲೂ ಎಸ್ ಬಿಐ ಬ್ಯಾಂಕ್ ನಡೆಸುತ್ತದೆ. ಈ ಹಣವನ್ನು ತೆರಿಗೆದಾರರು ಐಟಿಆರ್‌ ಫೈಲಿಂಗ್‌ ಗೆ ನೀಡಿರುವ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ 237 ರಿಂದ 245 ಸೆಕ್ಷನ್ ಗಳು ಸಂಪೂರ್ಣವಾಗಿ ತೆರಿಗೆ ರೀಫಂಡ್ ಗೆ ಸಂಬಂಧಿಸಿದ್ದಾಗಿದೆ.

ಸೆಕ್ಷನ್ 237ರ ಅನ್ವಯ ಹೆಚ್ಚಿನ ಮೊತ್ತವನ್ನು ಪಾವತಿಸಿರುವ ಬಗ್ಗೆ ತೆರಿಗೆದಾರ ಮೌಲ್ಯಮಾಪನ ಅಧಿಕಾರಿಗೆ ಅರ್ಥ ಮಾಡಿಸಬೇಕು. ಆಗ ನಿಮ್ಮ ಹಣ ವಾಪಸ್‌ ಬರುತ್ತದೆ. ಅದು ಹೇಗೆ ಎಂದರೆ, ತೆರಿಗೆ ಪಾವತಿಸುವ ವ್ಯಕ್ತಿ ಆದಾಯ ತೆರಿಗೆ ರೀಫಂಡ್ ಕ್ಲೇಮ್ ಮಾಡಬಹುದು. ಕಾಯ್ದೆ ಅಡಿಯಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಒಟ್ಟು ಆದಾಯದಲ್ಲಿ ಸೇರಿದ್ದರೆ ಅದಕ್ಕೆ ರೀಫಂಡ್ ಪಡೆಯಬಹುದು. ವಾರಸುದಾರರು ಕೂಡ ರೀಫಂಡ್‌ ಅನ್ನು ಕ್ಲೈಮ್ ಮಾಡಬಹುದು.

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿ ಅಧಿಕ ತೆರಿಗೆಯನ್ನು ಕ್ಲೈಮ್ ಮಾಡಬಹುದು. ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ (ಫಾರ್ಮ್ 26AS) ಪರಿಶೀಲಿಸಿ. ನೀವು ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಪಾವತಿಸಿದ ಹೆಚ್ಚಿನ ತೆರಿಗೆಯನ್ನು ರೀಫಂಡ್ ಕ್ಲೈಮ್ ಮಾಡಬಹುದು. ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ರೀಫಂಡ್ ಗಾಗಿ ಮನವಿಯನ್ನು ಸಲ್ಲಿಸಿ. ಬಳಿಕ ರೀಫಂಡ್ ಸ್ಟೇಟಸ್ ಅನ್ನು ಆನ್ ಲೈನ್ ನಲ್ಲಿ ಪರಿಶೀಲಿಸಿ. ಈ ಸಂದರ್ಭದಲ್ಲಿ ನೀವು ರೀಫಂಡ್ ಮೊತ್ತವನ್ನು ಪಡೆಯಬಹುದು. ಇಲ್ಲವೇ ನಿಮ್ಮ ತೆರಿಗೆ ಸಲಹೆಗಾರ ಅಥವಾ ಸಿಎ ಅವರಿಂದ ಸಲಹೆಯನ್ನು ಕೂಡ ಪಡೆಯಬಹುದಾಗಿದೆ.

Exit mobile version