Revenue Facts

ಕಾಯಿನ್ ಗಳು ನಿಮ್ಮ ಬಳಿ ಹೆಚ್ಚಾಗಿದ್ದರೆ ಹೀಗೆ ಮಾಡಿ..

ಬೆಂಗಳೂರು, ಆ. 01 : ಚಿಲ್ಲರೆ ಅಂದರೆ ಕೇವಲ ಅಂಗಡಿ, ಹಣ್ಣು-ತರಕಾರಿ ಖರೀದಿ ಮಾಡುವುದಲ್ಲ. ಮಕ್ಕಳು ಹುಂಡಿ ಅನ್ನು ಇಟ್ಟುಕೊಂಡು ಮನೆಯವರು ಕೊಡುವ ನಾಣ್ಯಗಳನ್ನು ಕೂಡಿಡುತ್ತಾರೆ. ಒಂದೊಂದು ರೂಪಾಯಿಯನ್ನೇ ಹುಂಡಿಯಲ್ಲಿ ಹಾಕಿ, ತುಂಬಿದ ಬಳಿಕ ನೂರಾರು ರೂಪಾಯಿ ಸಿಗುತ್ತದೆ. ಹೀಗೆ ಹಣ ಕೂಡಿಡುವವರು ಮಕ್ಕಳಷ್ಟೇ ಅಲ್ಲ, ದೊಡ್ಡವರಿಗೂ ಈ ಅಭ್ಯಾಸವಿರುತ್ತದೆ. ಆದರೆ, ಹೆಚ್ಚಿನ ಮೊತ್ತದ ಚಿಲ್ಲರೆ ಅನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವುದು ಹೇಗೆ..?

ಈ ನಾಣ್ಯಗಳನ್ನು ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳಲು ಅವಕಾಶವಿದೆ. ಈಗ ಭಾರತದಲ್ಲಿ ಒಂದು, ಎರಡು, ಐದು, ಹತ್ತು ಹಾಗೂ 20 ರೂಪಾಯಿಗಳ ವಿವಿಧ ಮುಖಬೆಲೆಯ ನಾಣ್ಯಗಳು ಇವೆ. ಮನೆಯಲ್ಲಿ ಹೆಚ್ಚಿನ ಮೊತ್ತದ ನಾಣ್ಯಗಳಿದ್ದು, ಅವನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳಬೇಕೆಂದರೆ, ಒಮ್ಮೆಗೆ ಎಷ್ಟು ಮೊತ್ತವನ್ನು ಬದಲಾಯಿಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ನಾಣ್ಯದ ವಿನ್ಯಾಸ, ಪ್ರಮಾಣ ಹಾಗೂ ಮುಖಬೆಲೆಯ ಬಗ್ಗೆ ನಿರ್ಧರಿಸುವ ಅಧಿಖಾರ ಆರ್ ಬಿಐಗೆ ಮಾತ್ರವೇ ಇರುತ್ತದೆ.

ಆರ್ ಬಿಐ ಪ್ರಕಾರ ಎಲ್ಲಾ ಬ್ಯಾಂಕ್ ಗಳಲ್ಲೂ ನಾಣ್ಯಗಳನ್ನು ಬದಲಾಯಿಸುವ ಅವಕಾಶವಿರುತ್ತದೆ. ಯಾವುದೇ ಬ್ಯಾಂಕ್ ಕೂಡ ನಾಣ್ಯಗಳನ್ನು ನಿರಾಕರಿಸುವಂತಿಲ್ಲ. ನಿಮ್ಮ ಬಳಿ ಎಷ್ಟೇ ನಾಣ್ಯಗಳು ಇದ್ದರೂ ಕೂಡ ಅವನ್ನು ನೀವು ಬ್ಯಾಮಕ್ ನಲ್ಲಿ ಜಮೆ ಮಾಡಬಹುದಾಗಿದೆ. ಆದರೆ, ಯಾವುದೇ ಬ್ಯಾಂಕ್ ಕೂಡ ಸೂಕ್ತ ಕಾರಣವಿಲ್ಲದೆ ನಾಣ್ಯಗಳನ್ನು ಠೇವಣಿಯನ್ನು ನಿರಾಕರಿಸುವಂತಿಲ್ಲ. ಹಾಗೊಂದು ವೇಳೆ, ಯಾವುದಾದರೂ ಬ್ಯಾಂಕ್ ನಿರಾಕರಿಸಿದರೆ, ಈ ಬಗ್ಗೆ ದೂರು ದಾಖಲಿಸಬಹುದು.

Exit mobile version