Revenue Facts

ಆಧಾರ್ ಕಾರ್ಡ್ ಕಳೆದು ಹೋದರೆ ಆನ್ಲೈನ್ ಮುಖಾಂತರ ಮರಳಿ ಪಡೆಯೋದು ಹೇಗೆ…

ಬೆಂಗಳೂರು, ಮೇ. 26 :ಭಾರತದಲ್ಲಿ ಆಧಾರ್ ಕಾರ್ಡ್ (Aadhaar card) ಅತ್ಯಂತ ಪ್ರಮುಖವಾದ ದಾಖಲೆಗಳಲ್ಲೊಂದು. ಬ್ಯಾಂಕ್ ಖಾತೆ (bank account)ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯೋ ತನಕ ಆಧಾರ್ ಕಾರ್ಡ್ ಅಗತ್ಯ. ಗುರುತು ದೃಢೀಕರಣದ ಅತ್ಯಂತ ಪ್ರಮುಖ ದಾಖಲೆಯಾಗಿರೋ ಆಧಾರ್ ಕಾರ್ಡ್ 12 ಅಂಕೆಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ಹೊಂದಿರುತ್ತದೆ. ನಿಮ್ಮ ಗುರುತು ದೃಢೀಕರಣಕ್ಕೆ ಈ ಸಂಖ್ಯೆ ನೀಡಿದ್ರೆ ಸಾಕು, ಬೇರೆ ಯಾವ ದಾಖಲೆಗಳ ಅಗತ್ಯವಿರೋದಿಲ್ಲ.2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಹಾಗೂ ಇದರಲ್ಲಿರುವ 12 ಅಂಕಿಗಳ ಸಂಖ್ಯೆ ಪ್ರತಿಯೊಬ್ಬ ಭಾರತೀಯನ ಗುರುತಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್​ ಬಂದು 14 ವರ್ಷಗಳಾಗಿವೆ.ಹೀಗಿರುವಾಗ ಎಲ್ಲಾದರು ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು?, ಇದನ್ನು ಮರಳಿ ಪಡೆಯುವುದು ಹೇಗೆ? ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.

ಒಂದು ವೇಳೆ ನೀವು ಆಧಾರ್ ಕಳೆದುಕೊಂಡರೆ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಬಳಸಿ ಆನ್‌ಲೈನ್‌ ಮೂಲಕ ನಕಲು ಪ್ರತಿ ಪ್ರಿಂಟ್ ಮಾಡಬಹುದು. ಆದರೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀಡಿದರೇ ಮಾತ್ರ ಒಟಿಪಿ ಬರುತ್ತದೆ. ಅದಕ್ಕೆ 50ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ನಂಬರ್ ಲಿಂಕ್ಡ್ ಆಗಿದ್ದರೇ ನೋಂದಣಿ ಸಂಖ್ಯೆ ಇಲ್ಲದಿದ್ದರೂ ನಡೆಯುತ್ತದೆ.

ಇಲ್ಲಿ ಒಟಿಪಿ ಲಿಂಕ್ ಮಾಡಿದ ಮೊಬೈಲ್ ನಂಬರ್ ​ಗೆ ಅಥವಾ ಇ-ಮೇಲ್ ಐಡಿಗೆ ಮಾತ್ರ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೀವು ಧೃಡಿಕರಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಆಧಾರ್ ಸಂಖ್ಯೆಯನ್ನು ನಿಮ್ಮ ಆಧಾರ್ ಡೌನ್‌ ಲೋಡ್ ಮಾಡಲು ಅಥವಾ ನಿಮ್ಮ ಆಧಾರ್‌ ನ ಮರುಮುದ್ರಣಕ್ಕೆ ಆದೇಶಿಸಬಹುದು.

ಆಧಾರ್ ಕಾರ್ಡ್‌ ಅನ್ನು ಮರಳಿ ಪಡೆದುಕೊಳ್ಳಲು ಈ ಕೆಳಗಿನವು ನಿಮ್ಮ ಬಳಿಯಲ್ಲಿ ಇರಬೇಕು.

1. ನಿಮ್ಮ ಆಧಾರ್ ಸಂಖ್ಯೆ ಅಥವಾ ದಾಖಲಾತಿ ಐಡಿ ಅಥವಾ ವರ್ಚುವಲ್ ಐಡಿ

2. ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ

 


ಆಧಾರ್ ನಂಬರ್ ಲಾಕ್ ಮಾಡಿ:

ಆಧಾರ್ ಕಾರ್ಡ್ ಕಳೆದು ಹೋದರೆ ಮೊದಲು ಆಧಾರ್ ಸಂಖ್ಯೆಯನ್ನ ಲಾಕ್ ಮಾಡಬೇಕು. ನಂತರ ಅನ್​ಲಾಕ್ ಮಾಡುವ ಮೂಲಕ ಬಳಸಬಹುದಾಗಿದೆ. ಈ ಬಗ್ಗೆ ಯುಐಡಿಐಡಿ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ

*ಮೊದಲಿಗೆ https://resident.uidai.in/ ಭೇಟಿ ನೀಡಬೇಕು.

*ನಂತರ ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಸೆಲೆಕ್ಟ್ ಮಾಡಿ.

*ಇಲ್ಲಿ ಲಾಕ್​ ಅನ್​ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ.

*ಲಾಗ್ ಇನ್ ಆಯ್ಕೆ ಕಾಣಿಸುತ್ತದೆ. ನಂತರ 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸಿ

*ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೆಂಡ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.

*ಒಟಿಪಿ ಹಾಕಿದ ನಂತರ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.

*ಈಗ ಬಯೋಮೆಟ್ರಿಕ್ ಡೇಟಾವನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಲಾಕ್ ಆಗುತ್ತದೆ

Exit mobile version