Revenue Facts

ಎಕ್ಸ್ ಪೈರಿ ಆದ ಕ್ರೆಡಿಟ್ ಕಾರ್ಡ್ ಗಳನ್ನು ಮರು ಬಳಕೆ ಮಾಡುವುದು ಹೇಗೆ..?

ಎಕ್ಸ್ ಪೈರಿ ಆದ ಕ್ರೆಡಿಟ್ ಕಾರ್ಡ್ ಗಳನ್ನು ಮರು ಬಳಕೆ ಮಾಡುವುದು ಹೇಗೆ..?

ಬೆಂಗಳೂರು, ಫೆ. 27 : ಈಗ ಎಲ್ಲರ ಬಳಿಯೂ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತದೆ. ಪ್ರತೀ ಕ್ರೆಡಿಟ್ ಕಾರ್ಡ್‌ನಲ್ಲಿಯೂ ಎಕ್ಸ್‌ ಪೈರಿ ಡೇಟ್‌ ಇರುತ್ತದೆ. ಎಕ್ಸ್‌ ಪೈರಿ ಡೇಟ್‌ ಆದ ಮೇಲೆ ಕಾರ್ಡ್ ಇನ್ನು ಮುಂದೆ ಕಾರ್ಯನಿರ್ವಹಿಸದು. ಕಾರ್ಡುದಾರರಿಗೆ, ನಿಜವಾದ ಕ್ರೆಡಿಟ್ ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಅರ್ಥವಲ್ಲ, ಇದರರ್ಥ ನಿಮಗೆ ಬ್ಯಾಂಕಿನಿಂದ ಹೊಸ ಪ್ಲಾಸ್ಟಿಕ್ ತುಂಡು ಬೇಕಾಗುತ್ತದೆ. ಕಾರ್ಡ್ ವಿತರಕರು ಸಾಮಾನ್ಯವಾಗಿ ಅವಧಿ ಮುಗಿಯುವ ಮೊದಲೇ ಹೊಸ ಕಾರ್ಡ್ ಅನ್ನು ಮೇಲ್ ಮಾಡಲು ತೆಗೆದುಕೊಳ್ಳುತ್ತಾರೆ, ಆದರೂ ಕೆಲವು ಕಾರ್ಡ್ ಹೊಂದಿರುವವರು ಬದಲಿಗಾಗಿ ವಿತರಕರನ್ನು ಸಂಪರ್ಕಿಸ ಬೇಕಾಗಬಹುದು.

ಇನ್ನು ಹೀಗೆ ಎಕ್ಸ್ ಪೈರಿ ಆದ ಕಾರ್ಡ್ ಗಳನ್ನು ಸಾಮಾನ್ಯವಾಗಿ ಎಲ್ಲರೂ ಬಿಸಾಡಿ ಬಿಡುತ್ತಾರೆ. ಡಸ್ಟ್ ಬಿನ್ ಗೆ ಡೇಟ್ ಬಾರ್ ಆದ ಕಾರ್ಡ್ ಗಳನ್ನು ಹಾಕುವುದನ್ನು ಬಿಟ್ಟು, ಅದನ್ನು ಬಳಸುವುದು ಹೇಗೆ. ಡೇಟ್ ಬಾರ್ ಆದ ಕಾರ್ಡ್ ಅನ್ನು ಪುನಃ ಬಳಸಬಹುದೇ. ಅದೇ ಕಾರ್ಡ್ ಅನ್ನು ಬಳಸಿ ಏನನ್ನು ಮಾಡಬಹುದು ಎಂಬುದನ್ನು ತಿಳಿಯಿರಿ.

ಹಳೆಯ ಕ್ರೆಡಿಟ್ ಕಾರ್ಡ್ ಅನ್ನು ಬಿಸಾಡುವ ಬದಲು ಅದನ್ನು ಪುಸ್ತಕ ಓದುವವರಿಗೆ ಸಹಾಯವಾಗುತ್ತದೆ. ಬುಕ್ ಮಾರ್ಕ್ ಆಗಿ ಈ ಕಾರ್ಡ್‌ ಅನ್ನು ಬಳಸಬಹುದು. ಆಗ ಪುಸ್ತಕ ಓದುವವರಿಗೆ ಬಹಳ ಉಯೋಗವಾಗುತ್ತದೆ. ಪುಸ್ತಕ ಓದುವವರು ಸಾಮಾನ್ಯವಾಗಿ ಈದಿರುವ ಪೇಜ್‌ ನ ತುದಿಯನ್ನು ಮಡಸುತ್ತಾರೆ. ಇದರ ಬದಲು ಎಕ್ಸ್‌ ಪೈರಿ ಆದ ಕಾರ್ಡ್ ಅನ್ನು ಬುಕ್‌ ಮಾರ್ಕ್‌ ಆಗಿ ಬಳಸಬಹುದು.

ಇನ್ನು ಮೊಬೈಲ್‌ ನ ಚಾರ್ಜರ್, ಇಯರ್‌ ಫೋನ್‌ ಅನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಮೊಬೈಲ್‌ ಅನ್ನು ಚಾರ್ಜ್ ಮಾಡಿದ ಮೇಲೆ ವೈಯರ್‌ ಅನ್ನು ಸುತ್ತಿಡಲು ಕೆಲವರು ಒದ್ದಾಡುತ್ತಾರೆ. ಇದಕ್ಕೆ ಈ ಡೇಟ್‌ ಬಾರ್‌ ಆದ, ಉಪಯೋಗಕ್ಕೆ ಬಾರದ ಕಾರ್ಡ್‌ ಅನ್ನು ಬಳಸಬಹುದು. ಇಯರ್‌ ಪೋನ್‌ ಅನ್ನು ಕೂಡ ಬಳಸಬಹುದು. ಆಗ ವೈಯರ್‌ ಗಳು ಗಂಟಾಗುವುದು ತಪ್ಪುತ್ತದೆ. ಹೀಗೆ ಕ್ರೆಡಿಟ್‌ ಕಾರ್ಡ್‌ಗ ೆಸುತ್ತಿಟ್ಟರೆ, ಮಿಸ್‌ ಆಗುವುದೂ ಇಲ್ಲ. ಸುಲಭವಾಗಿ ಕ್ಯಾರಿ ಮಾಡಬಹುದು.

ಇನ್ನು ಈಂತಹ ಕಾರ್ಡ್‌ ಗಳನ್ನು ಎರಡು ಮೂರು ಸೇರಿಸಿ, ಮೊಬೈಲ್‌ ಸ್ಟ್ಯಾಂಡ್‌ ಆಗಿ ಬಳಸಬಹುದು. ಆಗ ಮೊಬೈಲ್‌ ಸ್ಟ್ಯಾಮಡ್‌ ಗಾಗಿ ಹಣ ವ್ಯಯಿಸುವುದು ತಪ್ಪುತ್ತದೆ. ಮೊಬೈಲ್‌ ಅನ್ನು ಕೈಯಲ್ಲಿಡಿದು ಗಂಟೆ ಗಟ್ಟಲೆ ನೋಡುವುದು ಕಷ್ಟ. ಅದೇ ಡೇಟ್‌ ಬಾರ್‌ ಆದ ಈ ಕಾರ್ಡ್‌ ಗಳನ್ನು ಬಳಸಿ ಮೊಬೈಲ್‌ ಸ್ಟ್ಯಾಂಡ್‌ ಮಾಡಿಕೊಂಡರೆ, ಫಿಲ್ಮ್‌ ಅನ್ನು ನೋಡಬಹುದು.

ಇನ್ನು ಸ್ಟ್ರೀಟ್‌ ಫುಡ್‌ ತಯಾರಿಸುವವರು ಕೂಡ ಈ ಎಕ್ಸ್‌ ಪೈರಿ ಆದ ಕಾರ್ಡ್‌ ಗಳನ್ನು ಬಳಸಬಹುದು. ಅದು ಹೇಗೆ ಎಂದರೆ, ದೋಸೆ ಮಾಡಲು ಇದು ಉಪಯೋಗಕ್ಕೆ ಬರುತ್ತದೆ. ದೋಸೆಯನ್ನು ಬಹಳ ತೆಳ್ಳಗೆ ಎಳೆಯಲು ಈ ಕಾರ್ಡ್‌ ಗಳನ್ನು ಬಳಸಬಹುದು. ಮನೆಯಲ್ಲೂ ದೋಸೆ ಮಾಡಲು ಈ ಕಾರ್ಡ್‌ ಅನ್ನು ಬಳಸಬಹುದು.

ಇನ್ನು ಟೈಲರ್‌ ಗಳಿಗೂ ಈ ಕಾರ್ಡ್‌ ಗಳು ಬಳಕೆಗೆ ಬರುತ್ತದೆ. ಟೈಲರ್‌ ಗಳು ದಾರವನ್ನು ಸುತ್ತಿಡಲು ಕಾರ್ಡ್‌ ಗಳು ಬಳಕೆಗೆ ಬರುತ್ತವೆ. ಇನ್ನು ಸೀರೆ ಕುಚ್ಚು ಹಾಕುವುದಕ್ಕೂ ಈ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಬರುತ್ತದೆ. ಕುಚ್‌ ಗೆ ದಾರವನ್ನು ಸುತ್ತಿ ಕುಚ್‌ ಕಟ್ಟಲು ಈ ಕಾರ್ಡ್‌ ಗಳು ಬಳಸಬಹುದು.

ಕೊನೆಯದಾಗಿ ಈ ಕಾರ್ಡ್‌ ಅನ್ನು ಸ್ಕ್ರ್ಯಾಪ್‌ ಆಗಿ ಬಳಸಬಹುದು. ಎಲ್ಲಾದರೂ ಕಲೆಗಳು ಆಗಿದ್ದರೆ, ಅದನ್ನು ತೆಗೆಯಲು ಈ ಕ್ರೆಡಿಟ್‌ ಕಾರ್ಡ್‌ ಗಳು ಬಳಕೆಗೆ ಬರುತ್ತವೆ. ಸುಮ್ಮನೆ ಬಿಸಾಡುವ ಬದಲು ಹೀಗೆ ನಾನಾ ರೀತಿಯಲ್ಲಿ ಕಾರ್ಡ್‌ ಗಳನ್ನು ಬಳಸಬಹುದು.

Exit mobile version