Revenue Facts

ಐಟಿಆರ್‌ ಪೈಲ್‌ ಮಾಡಿದ ನಂತರ ರಿಫಂಡ್‌ ಬರದಿದ್ದರೆ ಏನು ಮಾಡಬೇಕು..?

ಐಟಿಆರ್‌ ಪೈಲ್‌ ಮಾಡಿದ ನಂತರ ರಿಫಂಡ್‌ ಬರದಿದ್ದರೆ ಏನು ಮಾಡಬೇಕು..?

ಬೆಂಗಳೂರು, ಜು. 27 : ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಇನ್ನು ತೆರಿಗೆ ವಿನಾಯ್ತಿ ಪಡೆಯುವ ಬಗ್ಗೆ ಈಗಾಗಲೇ ಹಲವು ಮಾರ್ಗಗಳನ್ನು ತಿಳಿಸಿಕೊಡಲಾಗಿದೆ. ಆದಾಯ ತೆರಿಗೆಯನ್ನು ಕಟ್ಟುವಾಗ ಕೆಲವೊಮ್ಮೆ ನಮಗೆ ಅರಿವಿಲ್ಲದೇ, ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿರುತ್ತೀವಿ. ಅಂತಹ ಸಂದರ್ಭದಲ್ಲಿ ರೀಫಂಡ್ ಪಡೆಯಲು ಆದಾಯ ತೆರಿಗೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಆದಾಯ ತೆರಿಗೆ ಕಟ್ಟುವುದು ಹೇಗೆ, ರಿಟರ್ನ್ ಫೈಲಿಂಗ್ ಬಗ್ಗೆ ನಿಮಗೆ ತಿಳಿದಿದೆ. ಕೆಲವೊಮ್ಮೆ ರಿಸ್ಟ್ರಿಕ್ಟೆಡ್ ರೀಫಂಡ್ ಅಥವಾ ನಾಟ್ ಎಲಿಜಿಬಲ್ ಫಾರ್ ರೀಫಂಡ್ ಎಂಬ ಮೆಸೇಜ್‌ ಇದ್ದಲ್ಲಿ ಸುಲಭವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

ಐಟಿ ರೀಫಂಡ್‌ ಆಗದಿದ್ದಾಗ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸ ಸರಿ ಇದೆಯಾ ಎಂಬುದನ್ನು ನೋಡಿ.. ಇದು ತಪ್ಪಾಗಿದ್ದರೂ ಕೂಡ ರೀಫಂಡ್ ಸಮಸ್ಯೆಯಾಗುತ್ತದೆ. ಇನ್ನು ಐಟಿ ರಿಟರ್ನ್ ಫೈಲಿಂಗ್ ವೇಳೆ ತಪ್ಪು ಮಾಡಿದ್ದರೂ ರೀಫಂಡ್‌ ಬರುವುದಿಲ್ಲ. ಆದಾಯ, ವೆಚ್ಚ, ಹೂಡಿಕೆ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿ. ಇಲ್ಲವೇ ನಿಮ್ಮ ಬಳಿ ಬಾಕಿ ತೆರಿಗೆ ಇದ್ದರೆ, ಅದನ್ನು ಸರ್ಕಾರ ಪಡೆದುಕೊಂಡಿರುತ್ತದೆ. ಆದರೆ, ರೀಫಂಡ್‌ ಆಗಿಲ್ಲ ಎಂದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಐಟಿಆರ್ ರೀಫಂಡ್ ಸ್ಟೇಟಸ್ ಅನ್ನು ಪರಿಶೀಲಿಸಿ, ರೀಫಂಡ್ ಹಣ ಬಿಡುಗಡೆಗೆ ಮತ್ತೊಮ್ಮೆ ಮನವಿಯನ್ನು ಸಲ್ಲಿಕೆ ಮಾಡಿ. ಈ ಹಿಂದೆ ಸಲ್ಲಿಸಿದ್ದ ಐಟಿಆರ್ ನಲ್ಲಿ ಸಮಸ್ಯೆ ಇದ್ದಲ್ಲಿ ಸರಿ ಪಡಿಸಿ ಮತ್ತೆ ಸಲ್ಲಿಕೆ ಮಾಡಿ. ಬಾಕಿತೆರಿಗೆ ಇದ್ದರೆ, ಅದನ್ನು ಪಾವತಿ ಮಾಡಿ. ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಬ್ಯಾಂಕ್‌ ಖಾತೆಯನ್ನು ಪ್ರೀ ವ್ಯಾಲಿಡೇಟ್‌ ಮಾಡಿ. ಅದರಿಂದಲೂ ನಿಮಗೆ ಸಹಾಯವಾಗುತ್ತದೆ.

Exit mobile version