ಬೆಂಗಳೂರು, ಮಾ. 13 : ಭಾರತ ಸರ್ಕಾರವು ಮಿಶ್ರಿತ ವಲಯದ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರ ಯೋಗಕ್ಷೇಮಕ್ಕಾಗಿ ಇ-ಶ್ರಾಮ್ ಪೋರ್ಟಲ್ ಯೋಜನೆ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇ-ಶ್ರಾಮ್ ಪೋರ್ಟಲ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇ ಶ್ರಮ್ ಪೋರ್ಟಲ್‌ಗೆ ನೋಂದಾಯಿಸಿಕೊಳ್ಳುವವರಿಗೆ ವಿಶಿಷ್ಟ ಗುರುತಿನ ಸಂಖ್ಯೆ (UAN) ಕಾರ್ಡ್ ಅನ್ನು ನೀಡುತ್ತದೆ. ಇ-ಶ್ರಮ್ ಪೋರ್ಟಲ್ ನೋಂದಣಿಗಾಗಿ ವಿನಂತಿಸಲು ಬಯಸುವ ಅರ್ಜಿದಾರರು ಸಿಎಸ್‌ಸಿ ಸೇವಾ ಕೇಂದ್ರಕ್ಕೆ ಹಾಕಬಹುದು. ಅರ್ಜಿದಾರರು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಇ-ಶ್ರಾಮ್ ಪುಟದಲ್ಲಿ ಸ್ವಯಂ-ನೋಂದಣಿಯನ್ನು ಸಹ ಮಾಡಬಹುದು.
ಕರ್ನಾಟಕ ಸರ್ಕಾರವು ಕಾರ್ಮಿಕ ಕಾರ್ಡ್ ಇದ್ದವರಿಗೆ ಹಲವಾರು ಸೌಲಭ್ಯವನ್ನು ಒದಗಿಸುತ್ತಿದೆ.ಕಾರ್ಮಿಕ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000 ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಈ ಸೂಚನೆಯನ್ನು ಹೊರಡಿಸಲಾಗಿದೆ.ರಾಜ್ಯ ಸರ್ಕಾರದ ಕಟ್ಟಡ ಹಾಗೂ ಇತರೆ ಇತರೆ ನಿರ್ಮಾಣ ಕಾರ್ಮಿಕರ ಇಲಾಖೆಯಿಂದ ಜಾರಿಗೆ ತಂದಿರುವ ಕಾರ್ಡ್ ಇದಾಗಿದ್ದು, ಕಟ್ಟಡದ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರು, ಹಾಗೂ ಇತರ ನಿರ್ಮಾಣ ಹಂತದ ಕೆಲಸದ ಕಾರ್ಮಿಕರನ್ನು ಗುರುತಿಸಿ ಅವರಿಗೆ ನೇರವಾಗಿ ಸೌಲಭ್ಯವನ್ನು ತಲುಪಿಸಲು ಈ ಕಾರ್ಡ್ ಸಹಾಯವಾಗಲಿದ್ದು, ಈ ಕಾರ್ಡ್ ಮೂಲಕ ಕಟ್ಟಡ ಕಾರ್ಮಿಕರನ್ನು ಸರ್ಕಾರವು ಗುರುತಿಸಬಹುದಾಗಿದೆ. ಪ್ರತಿ ತಿಂಗಳು ಈ ಪಿಂಚಣಿಯನ್ನು ಪಡೆಯಲು ಏನು ಅರ್ಹತೆಗಳು ಇರಬೇಕು?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.ಈ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಯಾವುದೇ ಸರ್ಜರಿ ಚಿಕತ್ಸೆ ಅಗತ್ಯವಿದ್ದಲ್ಲಿ, ಕಟ್ಟಡ ಕಾರ್ಮಿಕ ನೊಂದಾಯಿತ ಆಸ್ಪತ್ರೆಯಲ್ಲಿ ದಾಖಲಾದಲ್ಲಿ 2 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ದೊರೆಯಲಿದೆ, ಹಾಗೂ ಇತರ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗೆ ದಾಖಾಲಾದಲ್ಲಿ 10,000 ದ ತನಕ ಚಿಕಿತ್ಸಾ ವೆಚ್ಚ ದೊರೆಯಲಿದೆ. ಈ ಸೌಲಭ್ಯ ಅವರ ನಾಮಿನಿ ಹಾಗೂ ಮಕ್ಕಳಿಗೂ ದೊರೆಯಲಿದೆ.
ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನುವಾಗುವಂತೆ 2007ರಲ್ಲಿ ನಿಯಮಗಳನ್ನು ರಚಿಸಿಕೊಂಡು ಹಲವಾರು ಅಭಿವೃದ್ಧಿಪರವಾದ ಯೋಜನೆಗಳನ್ನು ರೂಪಿಸಿಕೊಂಡಿದೆ.ನಿರ್ಮಾಣ ಕ್ಷೇತ್ರದ ಕಾರ್ಮಿಕರ ಹಿತದೃಷ್ಟಿಯನ್ನು ಧ್ಯೇಯವಾಗಿಸಿಕೊಂಡು ರಾಷ್ಟ್ರದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996 ಅನ್ನು ಜಾರಿಗೆ ತರಲಾಗಿದೆ. ಈ ಕಾರ್ಮಿಕ ಯೋಜನೆಗಳ ಅಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಿಂಗಳಿಗೆ 3000 ಗಳನ್ನು ನೇರವಾಗಿ ಖಾತೆಗೆ ಹಾಕಲಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು :
*ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿಯನ್ನು ಪೂರ್ಣಗೊಳಿಸಿರಬೇಕು.
*ನೋಂದಾಯಿತ ಕಟ್ಟಡ ಕಾರ್ಮಿಕ 60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.
*ಫಲಾನುಭವಿಯು ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನಾ ಸಂದರ್ಭದಲ್ಲಿ ಅರ್ಜಿ ಅನರ್ಹ ಎಂದು ಕಂಡು ಬಂದಲ್ಲಿ ಅರ್ಜಿಯನ್ನು ತಿರಸ್ಕಾರಿಸಲಾಗುವುದು.
*ನೋಂದಾಯಿತ ಫಲಾನುಭವಿಯು ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷವೂ ಜೀವಿತ ಪ್ರಮಾಣ ಪತ್ರ ನಮೂನೆ XIV-A ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು :
*ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
*ಉದ್ಯೋಗದ ದೃಢೀಕರಣ ಪತ್ರ
*ಜೀವಿತ ಪ್ರಮಾಣ ಪತ್ರ
*ರೇಷನ್ ಕಾರ್ಡ್ ಪ್ರತಿ
*ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ
*ಪಾಸ್ ಪೋರ್ಟ್ ಫೋಟೋ