ಲಿವಿಂಗ್‌ ರೂಂನ ಚೆಂದ ಹೆಚ್ಚಿಸಲು ಈ 4 ಸಲಹೆಗಳು ಸಹಕಾರಿ

0
108

ಮನೆಯ ಹಾಲ್‌ ನೋಡಿದಾಗ ಮನೆಯನ್ನು ಹೇಗೆ ಇಟ್ಟಿದ್ದೇವೆ ಎಂಬ ಕಲ್ಪನೆ ಮನೆಗೆ ಬಂದವರಿಗೆ ಸಿಗುತ್ತದೆ. ಮನೆಯ ಹಾಲ್‌ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ಅದನ್ನು ನಾವು ಹೇಗೆ ಕಟ್ಟಿಕೊಂಡಿರುತ್ತೇವೆ ಎಂಬುವುದರ ಮೇಲೆ ಆ ಹಾಲ್‌ನ ಚಂದ ಅಡಗಿರುತ್ತದೆ.ಹಾಲ್‌, ಕಣ್ಸೆಳೆಯುವ ಹಾಗೆ ಕಾಣಬೇಕೆಂದರೆ ಅದಕ್ಕೆ ಒಳಾಂಗಣ ವಿನ್ಯಾಸ ಮನೆಯ ಅಂದವನ್ನು ಹೆಚ್ಚಿಸಬೇಕೆಂದೇನಿಲ್ಲ, ನಾವೇ ಮನೆಯ ಚಂದ ಹೆಚ್ಚಿಸಬಹುದು.

ಅದಕ್ಕೆ ನೀವು ಈ 4 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಲ್‌ನ ಶೃಂಗಾರ ಮಾಡಿದರೆ ಮನೆ ನೋಡಲು ಸುಂದರವಾಗಿರುತ್ತದೆ.

1. ಮನೆಯ ಹಾಲ್‌ನ ಅಳತೆ ತೆಗೆದುಕೊಳ್ಳಿ ನಾವು ಹಾಲ್‌ಗೆ ಯಾವುದೇ ವಸ್ತುಗಳನ್ನು ಕೊಳ್ಳುವ ಪೂರ್ವದಲ್ಲಿ ಹಾಲ್‌ನ ಅಳತೆ ಪರಿಶೀಲನೆಮಾಡುವದು ಒಳ್ಳೆಯದು. ಓಡಾಡಲು ಸ್ವಲ್ಪ ಜಾಗ ಇರಬೇಕು. ಅದಕ್ಕೆ ತಕ್ಕಂತೆ ಸೋಫಾ, ಚೇರ್‌, ಟೀಪಾಯಿ ತನ್ನಿ.

2. ನಿಮ್ಮ ಉದ್ದೇಶವನ್ನು ವ್ಯಕ್ತಪಡಿಸಿ ಮನೆಯ ಹಾಲ್‌ ಹೇಗಿರಬೇಕೆಂದರೆ ನಿಮ್ಮ ಹಾಲ್‌ ನಿಮ್ಮ ಇಷ್ಟಗಳನ್ನು ಪ್ರತಿನಿಧಿಸುವಂತಿರಬೇಕು. ಒಂದು ಒಳ್ಳೆ ಪೇಂಟಿಂಗ್, ಕಲಾಕೃತಿ ಅಥವಾ ಕಪಾಟಿನಲ್ಲಿರುವ ಬುಕ್‌ ಇವೆಲ್ಲಾ ನಿಮ್ಮ ಇಷ್ಟಕ್ಕೆ ತಕ್ಕಂತೆ ಇರಬೇಕು. ನೀವು ಹಾಲ್‌ನಲ್ಲಿ ಕುಳಿತಾಗ ಅವುಗಳನ್ನು ನೋಡಿದಾಗ ನಿಮ್ಮ ಮನಸ್ಸಿಗೆ ನೆಮ್ಮದಿ ಅನಿಸುವಂತಿರಬೇಕು.

3. ಹಾಲ್‌ಗೆ ಸೂಕ್ತ ಅಲಂಕಾರಿಕ ವಸ್ತುಗಳನ್ನು ಖರೀದಿಮಾಡಿ ಟೀಪಾಯಿ ಮೇಲಿಡುವ ಫ್ಲವರ್‌ ಪಾಟ್‌, ಸೋಫಾದ ಕವರ್, ಗೋಡೆಯಲ್ಲಿ ನೇತು ಹಾಕುವ ಅಲಂಕಾರಿಕ ವಸ್ತುಗಳು ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಅಂಥ ವಸ್ತುಗಳನ್ನು ನೋಡಿಕೊಂಡು ಆಯ್ಕೆ ಮಾಡಿ. ಮ್ಯಾಚಿಂಗ್‌ ಹೊಂದುವಂತೆ ವಸ್ತುಗಳನ್ನು ಬಳಸಿದರೆ ಮನೆಯ ಅಂದ ಮತ್ತಷ್ಟು ಹೆಚ್ಚುವುದು.

4. ಹಸಿರು ಮರೆಯದಿರಿ ಮನೆಯ ಹಾಲ್‌ನಲ್ಲಿ ಚಿಕ್ಕ ಗಿಡಗಳನ್ನು ಇಡಿ. ಇವು ಹಾಲ್‌ನ ಅಂದಕ್ಕೆಮತ್ತಷ್ಟು ಮೆರಗು ನೀಡುವುದು. ಅಲ್ಲದೆ ಮನೆಯೊಳಗಡೆ ಗಿಡಗಳಿದ್ದರೆ ಕೋಣೆಯ ಒಳಗಡೆಯ ಗಾಳಿಯನ್ನು ಕೂಡ ಶುದ್ಧವಾಗಿಡುತ್ತೆ. ಚಿಕ್ಕ-ಚಿಕ್ಕ ಹೂ ಗಿಡಗಳನ್ನು. ಮನಿ ಪ್ಲ್ಯಾಂಟ್‌ ಇಡಬಹುದು. ಇವೆಲ್ಲಾ ನಿಮ್ಮ ಹಾಲ್‌ನ ಅಂದ-ಚಂದವನ್ನು ಹೆಚ್ಚಿಸುವುದು. ಇದು ನೆನಪಿರಲಿ ಹಾಲ್‌ನಲ್ಲಿ ತುಂಬಾ ವಸ್ತುಗಳು ತುಂಬಿಕೊಂಡಿದ್ದರೆ ಅದು ಹಾಲ್‌ನ ಅಂದ ಹೆಚ್ಚಿಸುವ ಬದಲಿಗೆ ಸ್ಥಳದ ಕೊರತೆ ಕಡಿಮೆ ಇದೆ ಎಂಬ ಭಾವನೆ ಮೂಡಿಸುವಂತೆ ಮಾಡುವುದು.