ಬೆಂಗಳೂರು, ಡಿ. 26: ಈಗಂತೂ ಎಲ್ಲರ ಕೈನಲ್ಲೂ ಕ್ರೆಡಿಟ್ ಕಾರ್ಟ್ ಇದ್ದೇ ಇರುತ್ತದೆ. ಶಾಪಿಂಗ್ ಮಾಲ್ ಗೆ ಹೋದಾಗ, ಆನ್ ಲೈನ್ ನಲ್ಲಿ ಖರೀದಿಸಲು ಪ್ರತಿಯೊಂದಕ್ಕೂ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಿಕೊಂಡು ಆ ಮೂಲಕ ಮುಂದಿನ ದಿನಗಳಲ್ಲಿ ಕಾರು ಲೋನ್, ಹೋಮ್ ಲೋನ್ ಪಡೆಯಲು ಸುಲಭ ಎನ್ನುವುದೇ ಎಲ್ಲರ ಅಭಿಪ್ರಾಯ. ಆದರೆ, ಕೆಲವರು ಕ್ರೆಡಿಟ್ ಕಾರ್ಡ್ ಗಳನ್ನು ಬಳಸಲು ತಿಳಿಯದೇ ಎಡವಟ್ಟು ಮಾಡಿಕೊಂಡಿದ್ದೂ ಇದೆ. ಕ್ರೆಡಿಟ್ ಕಾರ್ಟ್ ಅನ್ನು ಬಳಸಿ, ಬೇಕಾದ್ದನ್ನೆಲ್ಲಾ ಖರೀದಿಸಿ, ಕೊನೆಗೆ ಹಣ ಕಟ್ಟಲಾಗದೇ ಒದ್ದಾಡಿದ್ದೂ ಇದೆ.
ಇನ್ನು ಕೆಲವರ ಕೈನಲ್ಲಿ ಎಲ್ಲಾ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಕೂಡ ಇರುತ್ತದೆ. ಒಂದು ಸಾಲದು ಎಂದು ಐದಾರು ಕಾರ್ಡ್ ಗಿಂತಲೂ ಹೆಚ್ಚು ಕಾರ್ಡ್ ಗಳನ್ನು ಬಳಸುತ್ತಾರೆ. ಒಂದು ಕಾರ್ಡ್ ನಲ್ಲಿ ಹಣ ಮುಗಿದ ಮೇಲೆ ಮತ್ತೊಂದು ಕಾರ್ಡ್ ಅನ್ನು ಬಳಸುವ ಕಲೆಯನ್ನೂ ಕೆಲವರು ಕಲಿತಿರುತ್ತಾರೆ. ಆದರೆ, ನಿಜವಾಗಿಯೂ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಎಷ್ಟು ಕ್ರೆಡಿಟ್ ಕಾರ್ಡ್ ಅನ್ನು ಬಳಸಬೇಕು ಎಂಬುದು ನಿಮಗೆ ತಿಳಿದಿದೆಯೇ..? ಕ್ರೆಡಿಟ್ ಕಾರ್ಡ್ಗಳಂತಹ ರಿವಾಲ್ವಿಂಗ್ ಖಾತೆಗಳನ್ನು ಒಳಗೊಂಡಂತೆ ನೀವು ಕ್ರೆಡಿಟ್ ಖಾತೆಗಳ ಸರಿಯಾದ ಮಿಶ್ರಣವನ್ನು ಹೊಂದಲು ಬಯಸುತ್ತೀರಿ.
ಆದರೆ ನೀವು ಎಷ್ಟು ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರಬೇಕು ಎಂಬುದನ್ನು ಕಂಡುಹಿಡಿಯುವುದು ಎಚ್ಚರಿಕೆಯಿಂದ ಲೆಕ್ಕಾಚಾರವನ್ನು ತೆಗೆದುಕೊಳ್ಳಬಹುದು. ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿಯು ವಿಶಿಷ್ಟವಾಗಿರುತ್ತದೆ. ಇದಕ್ಕೆ ಉತ್ತರವನ್ನು ಕಂಡುಹಿಡಿಯುವುದು ನೀವು ನಿರೀಕ್ಷಿಸುವುದಕ್ಕಿಂತ ಸ್ವಲ್ಪ ಹೆಚ್ಚಿನ ಸಂಶೋಧನೆಯನ್ನು ತೆಗೆದುಕೊಳ್ಳಬಹುದು. ಆದರೆ, ನೀವು ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ ಮಾಡುವ ಕೆಲವು ಸಾಮಾನ್ಯ ಮಾರ್ಗಸೂಚಿಗಳಿವೆ. ನಾವು ಇಂದು ಕ್ರೆಡಿಟ್ ಕಾರ್ಡ್ ಗಳನ್ನು ಸ್ಮಾರ್ಟ್ ಆಗಿ ಬಳಸುತ್ತಿದ್ದೇವೆ. ಆದರೆ ಎಷ್ಟು ಕ್ರೆಡಿಟ್ ಕಾರ್ಡ್ ಅನ್ನು ಹೊಂದಬೇಕು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಒಬ್ಬ ವ್ಯಕ್ತಿ ಎಷ್ಟು ಕ್ರೆಡಿಟ್ ಕಾರ್ಡ್ ಪಡೆಯಬಹುದು?
ತಾಂತ್ರಿಕವಾಗಿ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ನೀವು ನಿರ್ದಿಷ್ಟ ಸಂಖ್ಯೆಯ ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಾರೆ. ಕೆಲವರು ಕೇವಲ ಒಂದು ಕಾರ್ಡ್ ಅನ್ನೇ ಚೆನ್ನಾಗಿ ಬಳಸುತ್ತಾರೆ. ಕೆಲವರು ಮೂರು ಅಥವಾ ನಾಲ್ಕಕ್ಕೆ ಆದ್ಯತೆ ನೀಡಬಹುದು. ವಿಶೇಷವಾಗಿ ಅವರು ಪ್ರಯಾಣದ ಪ್ರತಿಫಲಗಳು, ಉಚಿತ ಕ್ರೆಡಿಟ್ ಮೇಲ್ವಿಚಾರಣೆ ಅಥವಾ ಕ್ಯಾಶ್ ಬ್ಯಾಕ್ನಂತಹ ವಿಭಿನ್ನ ಪ್ರಯೋಜನಗಳನ್ನು ಪಡೆಯುತ್ತಾರೆ. ಒಬ್ಬ ವ್ಯಕ್ತಿ ಕೈನಲ್ಲಿ ದುರುಪಯೋಗ ಮಾಡಿಕೊಳ್ಳದಂತೆ ಎಷ್ಟು ಕ್ರೆಡಿಟ್ ಕಾರ್ಡ್ ಅನ್ನು ಬಳಸಬೇಕು ಎಂಬುದನ್ನು ನಿರ್ದಿಷ್ವಾಗಿ ಹೇಳಲು ಸಾಧ್ಯವಿಲ್ಲ.
ನಿಮ್ಮ ಲೈನಲ್ಲಿ ಮೂರು ನಾಲ್ಕು ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವ ಸಾಮರ್ಥ್ಯವಿದ್ದರೆ ಬಳಸಬಹುದು. ಕಾರ್ಡ್ ಗಳನ್ನು ಬಳಸಿದ ಮೇಲೆ ಹಣ ಪಾವತಿ ಮಾಡುವಲ್ಲಿ ಸೋಲದಿದ್ದರೆ ಒಳ್ಳೆಯದು. ಆದರೆ, ಹಣ ಮರು ಪಾವತಿ ಮಾಡಲಾಗದೇ ಒದ್ದಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದು ಸೂಕ್ತವಲ್ಲ. ಇನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸುವಾಗ ಅದರ ಸಾಲದ ಮೊತ್ತ, ಕೊನೆಯ ದಿನಾಂಕಗಳನ್ನು ಟ್ರ್ಯಾಕ್ ಮಾಡುತ್ತಿರಿ. ಇಲ್ಲದಿದ್ದರೆ, ಒಂದು ದಿನ ತಡವಾದರೂ ಬಡ್ಡಿಯನ್ನು ಕಟ್ಟಬೇಕಾಗಿ ಬರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದು ಸೂಕ್ತ.