ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯ:-
ಪ್ರಪಂಚದಲ್ಲಿ ಅಧಿಕಗೊಂಡ ಜಗತ್ತಿಕ ಉತ್ಪಾದನೆ ಆರ್ಥಿಕ ಚಟುವಟಿಕೆಗಳ ಕಾರಣದಿಂದಾಗಿ ಸರಕುಗಳು ಮತ್ತು ಸೇವೆಗಳ ದರಗಳು ನಿಶ್ಚಿತವಾಗಿರಬೇಕಾದ ಅಗತ್ಯ ಉಂಟಾಗಿ ಅದರ ಉದ್ದೇಶಕ್ಕಾಗಿ ಬ್ಯಾಂಕಿಂಗ್ ಪದ್ದತಿಯು ಬಹು ಮುಖ್ಯವಾದ ಪಾತ್ರವನ್ನು ವಹಿಸಿರುತ್ತದೆ.
ಬ್ಯಾಂಕಿಗ್ ಎಂಬುದು ರಾಷ್ಟ್ರಿಯ ಮತ್ತು ಜಾಗತಿಕ ಆರ್ಥಿಕತೆ ಮತ್ತು ಅದರ ಬೆಳವಣಿಗಾಗಿ ಒಂದು ಮುಖ್ಯ ಸಾಧನವಾಗಿ, ಎರವಲು, ಲೇವಾದೇವಿ ಮತ್ತು ನಿಧಿಗಳ ನಿರ್ವಹಣೆಯ ಒಂದು ವ್ಯವಹಾರವಾಗಿರುತ್ತದೆ. ಬ್ಯಾಂಕುಗಳು ಜನರ ಉಳಿತಾಯ ಆಶ್ರಯ ತಾಣಗಳಾಗಿವೆ. ಒಂದು ರಾಷ್ಟ್ರದ ಔದ್ಯಮಿಕ, ವ್ಯಾಪಾರ ಮತ್ತು ಕೃಷಿ ಬೆಳವಣಿಗೆಯು ಪ್ರಮುಖವಾಗಿ ಬ್ಯಾಂಕಿಂಗ್ ಮೇಲೆ ಅವಲಂಬಿಸಿರುತ್ತದೆ.
ಬ್ಯಾಂಕಿಗ್ ಮೂಲ:-
ಒಂದು ಚಿಂತನೆಯ ಪಂಥದ ಪ್ರಕಾರ, ಬ್ಯಾಂಕ್ ಎಂಬ ಪದವು ಒಂದು ಪೀಠವೆಂದು ಅರ್ಥವನ್ನು ನೀಡುವ ಬ್ಯಾಂಕೊ (Banco) ಅಥವಾ ಬ್ಯಾಂಖ್ (Banque) ಎಂಬ ಪದದಿಂದ ಇಟಾಲಿಯನ್ ಮೂಲವಾಗಿದೆ. ಈ ಸಂದರ್ಭದಲ್ಲಿ ಪೀಠವೆಂಬುದು ನಾಣ್ಯಗಳ ಪ್ರದರ್ಶನದಿಂದ ಹಣಕಾಸಿನ ಲೇವಾದೇವದಾರರು ಮತ್ತು ಹಣಕಾಸಿನ ಬದಲಾವೆದಾರರು ಹಣಕಾಸಿನ ವ್ಯವಹಾರವನ್ನು ಕೈಗೊಳ್ಳುವ ಒಂದು ಮಾರುಕಟ್ಟೆ ಸ್ಥಳ.
ಆ ದಿನಗಳಲ್ಲಿ ಹಣಕಾಸಿನ ಬದಲಾವಣೆಯನ್ನು ಒಂದು ಬ್ಯಾಂಕಿನ ಅತ್ಯಂತ ಪ್ರಮುಖ ಪ್ರಕಾರ್ಯವಾಗಿತ್ತೆಂದು ಪರಿಗಣಿಸಲಾಗಿತ್ತು. ಅಂತಿಮ ವಾಗಿ ಬ್ಯಾಂಕೋ ಕರ್ತವ್ಯವೂ ಇಂಗ್ಲಿಷ್ ಭಾಷೆಯಲ್ಲಿ ಬ್ಯಾಂಕ್ ಎಂದಾಯಿತು. ಬ್ಯಾಂಕಿಂಗ್ ಇತಿಹಾಸದಲ್ಲಿ ಬ್ಯಾಂಕ್ ಆಫ್ ವೆನಿಸ್’ ನು ಅತ್ಯಂತ ಪ್ರಾಚೀನ ಬ್ಯಾಂಕ್ ಎಂಬುದಾಗಿ ಪರಿಗಣಿಸಲಾಗಿದೆ.
ಮತ್ತೊಂದು ಚಿಂತನೆಯ ಪಂಥದ ಪ್ರಕಾರ, ಬ್ಯಾಂಕ್ ಎಂಬ ಪದವು ಒಂದು ಜಂಟಿ ನಿಧಿಯೆಂಬ ಅರ್ಥವನ್ನು ನೀಡುವ ಜರ್ಮನಿಯ ಪದ “ಬ್ಯಾಕ್'(Back) ಎಂಬ ಪದದಿಂದ ಬಂದುದಾಗಿದೆ. ಈ “ಬ್ಯಾಕ್’ ಎಂಬ ಜರ್ಮನಿಯ ಪದವು ಇಟಲಿಯಲ್ಲಿ “ಬ್ಯಾಂಕೊ’ ಎಂಬುದಾಗಿ ಬದಲಾಯಿತು
ಬ್ಯಾಂಕಿಗ್ ಸಂಸ್ಥೆಗಳ ಬೆಳವಣಿಗೆ (Development of Banking Institutions) :-
ಬ್ಯಾಂಕಿಂಗ್‌ನ ವ್ಯವಹಾರವು ಪ್ರಾಚೀನ ಮೂಲವನ್ನು ಹೊಂದಿದೆ. ಬ್ಯಾಂಕಿಗ್ ಪದ್ದತಿಯು ಕ್ರಿ.ಪೂ 2000 ರಲ್ಲಿಯು ಸಹ ಬಾಬಿಲೋನಿಯಾದ ದೇವಾಲಯಗಳಲ್ಲಿ ಅಸ್ತಿತ್ವದಲ್ಲಿದ್ದ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ. ಈ ಪದ್ದತಿಯಲ್ಲಿ ಬಡ್ಡಿಯ ಪಾವತಿಯ ಮೇರೆಗೆ ಸಾಲ ಮತ್ತು ಮುಂಗಡಗಳ ಪಾವತಿಯ ವಿರುದ್ದ ಭದ್ರತೆಯ ರೂಪದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಇರಿಸಿಕೊಳ್ಳಲು ದೇವಾಲಯಗಳನ್ನ ಬಳಸಿಕೊಳ್ಳಲಾಗುತ್ತಿತ್ತು.
