Revenue Facts

ನಿರೀಕ್ಷೆಗಿಂತ ಹೆಚ್ಚಿನ GDP ಬೆಳವಣಿಗೆ ನಿರೀಕ್ಷೆ;ಜಿಡಿಪಿ ಶೇ.8.4 ವೃದ್ಧಿ

ನಿರೀಕ್ಷೆಗಿಂತ ಹೆಚ್ಚಿನ GDP ಬೆಳವಣಿಗೆ ನಿರೀಕ್ಷೆ;ಜಿಡಿಪಿ ಶೇ.8.4 ವೃದ್ಧಿ

ದೆಹಲಿ;ಲೋಕಸಭೆ ಚುನಾವಣೆ ಎದುರಾಗುವ ಹೊತ್ತಲ್ಲೇ ಜಿಡಿಪಿಗೆ ಸಂಬಂದಿಸಿದಂತೆ ಸಂತಸದ ಸುದ್ದಿ ಹೊರಬಿದ್ದಿದೆ.ಈ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಭಾರತವು ಉತ್ತಮ GDP ಬೆಳವಣಿಗೆಯನ್ನು ದಾಖಲಿಸಿದ್ದು, ತಜ್ಞರ ನಿರೀಕ್ಷೆಗಳನ್ನು (6.6%) ಮೀರಿಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕವು 8.4% ಬೆಳವಣಿಗೆ ಕಂಡಿದೆ. ಹಿಂದಿನ ವರ್ಷ ಈ ಬೆಳವಣಿಗೆ 8.1% ಇತ್ತು. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಗುರುವಾರ ಬಿಡುಗಡೆಗೊಳಿಸಿದ ವರದಿಯ ಪ್ರಕಾರ 2022-23ರ ಮೂರನೇ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 4.3ರಷ್ಟಿತ್ತು.ಮತ್ತೊಂದೆಡೆ, ಕೇಂದ್ರವು ಮೊದಲ ತ್ರೈಮಾಸಿಕದಲ್ಲಿ 7.8% ರಿಂದ 8.2% & 2ನೇ ತ್ರೈಮಾಸಿಕದಲ್ಲಿ 7.6% ರಿಂದ 8.1% ಬೆಳವಣಿಗೆ ಸಾಧಿಸಿತ್ತು. ಇದು ಈ ಹಣಕಾಸು ವರ್ಷದ ಒಟ್ಟಾರೆ ಜಿಡಿಪಿಯನ್ನು 7% ರಿಂದ 7.6%ಗೆ ಏರಿಸಿದೆ.2023-24ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಜಿಡಿಪಿ ಶೇ. 7.6ರಷ್ಟು ತಲುಪುವ ಅಂದಾಜಿದೆ. ಪ್ರಮುಖವಾಗಿ 2023-24ರ ಮೂರನೇ ತ್ತೈಮಾಸಿಕ ದಲ್ಲಿ ಉತ್ಪಾದನ ವಲಯದ ಜಿಡಿಪಿ ಶೇ. 11.6ರಷ್ಟು ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಕ್ಷೇತ್ರದ ಜಿಡಿಪಿ ಶೇ. 4.8ರಷ್ಟಿತ್ತು.2023-24ರ ಮೂರನೇ ತ್ತೈಮಾಸಿಕದಲ್ಲಿ ಶೇ. 8.4ರಷ್ಟು ಜಿಡಿಪಿ ಬೆಳವಣಿಗೆಯು ದೇಶದ ಆರ್ಥಿಕತೆಯ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರುತ್ತದೆ. ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಾಣಲು ನಮ್ಮ ಪ್ರಯತ್ನಗಳು ಮುಂದುವರಿಯಲಿವೆ. ಇದು 140 ಕೋಟಿ ಭಾರತೀಯರು ಉತ್ತಮ ಜೀವನ ನಡೆಸುವಂತಾಗಲು ಮತ್ತು ವಿಕಸಿತ ಭಾರತ ರಚಿಸಲು ಸಹಕಾರಿಯಾಗಿದೆ.

Exit mobile version