ನಿಮ್ಮ ಹೋಮ್ ಆಫೀಸ್ ಸುಂದರವಾಗಿ ಕಾಣಲು ಇಲ್ಲಿದೆ 9 ಸರಳ ಸೂತ್ರಗಳು!

0
97

ಹಿಂದೊಂದು ಮಾತಿತ್ತು. ಮನೆಯೇ ಮೊದಲ ಪಾಠಶಾಲೆ ಎಂದು. ಆದರೆ, ಕೊರೊನಾ ನಂತರದ ಕಾಲದಲ್ಲಿ ಮನೆಯೇ ಕಚೇರಿಯೂ ಆಗಿದೆ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎಷ್ಟೋ ಉದ್ಯೋಗಿಗಳು ಮನೆಯಲ್ಲಿಯೇ ಕೆಲಸ ಕಾರ್ಯಗಳು ಆರಂಭಿಸಿ ವರ್ಷಗಳೇ ಕಳೆದಿವೆ. ಈ ಮಧ್ಯೆ ಬರುವಂತಹ ಲಾಕ್‌ಡೌನ್‌ಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಮುಂದೂಡುತ್ತಲೇ ಇವೆ. ಎಷ್ಟೋ ಜನರೂ ಸಹ ಕಚೇರಿಗಳನ್ನು ಮರೆತು ತಮ್ಮ ಮನೆಯನ್ನೇ ಸಣ್ಣ ಕಚೇರಿಯನ್ನಾಗಿ ಮಾಡಿಕೊಂಡು ಕಾರ್ಯನಿರ್ವಹಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಹೀಗೆ ಬಹುತೇಕರು ದಿನಕ್ಕೆ 8ರಿಂದ 10 ತಾಸು ಕಾರ್ಯನಿರ್ವಹಿಸುವಂತಹ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಳ್ಳಬೇಕಾದುದು ಅನಿವಾರ್ಯತೆ ಇದೆ. ಯಾಕೆಂದರೆ ಮನೆಯ ನಿತ್ಯದ ಗಜಿಬಿಜಿಗಳ ಮಧ್ಯೆ ಕಚೇರಿ ದೂರವಾಣಿ ಕರೆಗಳು, ವಿಡಿಯೋ ಕರೆಗಳನ್ನು ನೋಡಿಕೊಳ್ಳುತ್ತಾ ಇರಬೇಕು. ಇಂತಹ ಸಂದರ್ಭದಲ್ಲಿ ಕೆಲಸ ಮಾಡುವ ಪರಿಸರದ ಸುತ್ತಮುತ್ತ ಒಂದಷ್ಟು ಸುಂದರವಾಗಿ ಕಾಣುವಂತೆ ಮಾಡಿಕೊಂಡರೆ ಕೆಲಸದ ಆಯಾಸ ಕಡಿಮೆ ಮಾಡುತ್ತದೆ.

ನೀವು ನಿಮ್ಮ ಮನೆಯಲ್ಲಿ ವಾರಪೂರ್ತಿಯೋ ಅಥವಾ ವಾರದಲ್ಲಿ ಎರಡು ದಿನ ಕಚೇರಿ ಕೆಲಸವನ್ನು ಮಾಡುತ್ತಿದ್ದರೆ ಟೇಬಲ್, ಕುರ್ಚಿ ಈ ರೀತಿ ಸಣ್ಣ ಆಫೀಸ್ ಸೆಟಪ್ ಬೇಕಾಗುತ್ತದೆ. ಅದು ನಿಮಗೆ ಆರಾಮದಾಯಕವಾಗಿಯೂ, ಕೆಲಸ ಮಾಡಲು ಉತ್ತಮವಾಗುವಂತೆಯೂ ಇದ್ದರೆ ಚೆನ್ನಾಗಿರುತ್ತದೆ. ಹಾಗಾದ್ರೆ ಮನೆಯಲ್ಲೇ ಸರಳ ಆಫೀಸ್ ಸೆಟಪ್ ಹೇಗಿರಬೇಕು. ಸುಂದರವಾದ ಮತ್ತು ಪ್ರಾಯೋಗಿಕ ಹೋಮ್ ಆಫೀಸ್ ವಿನ್ಯಾಸಕ್ಕೆ ನಿಮ್ಮ ನೆರವಿಗೆ ಬರುವ ಸರಳ 9 ಸೂತ್ರಗಳು ಯಾವುವು ಎಂಬುದನ್ನು ನೋಡೋಣ.

1. ಸ್ಥಳ ಪ್ರಮುಖ ಕೀಲಿ ಕೈ
ಹೋಮ್ ಆಫೀಸ್‌ಗೆ ಒಂದೇ ತರಹದ ಸ್ವರೂಪ ಇರುವುದಿಲ್ಲ. ಅದು ಪ್ರತ್ಯೇಕ ಕೊಠಡಿಯಲ್ಲಿರಬಹುದು, ಒಂದು ಮೂಲೆಯಲ್ಲಿರಬಹುದು ಅಥವಾ ನಿಮ್ಮ ಅಡುಗೆ ಮನೆಯಲ್ಲಿರಬಹುದು. ನಿಮ್ಮ ಹೋಮ್ ಆಫೀಸ್‌ಗೆ ಸರಿಯಾದ ಸ್ಥಳವನ್ನು ಆಯ್ಕೆಮಾಡುವುದು ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ.

2. ವಿಪರೀತ ಸ್ಥಳಾವಕಾಶ
ಆರಾಮವಾಗಿ ಕೆಲಸ ಮಾಡಲು ಸಾಕಷ್ಟು ಜಾಗದ ಅವಶ್ಯಕತೆ ಇರುತ್ತದೆ. ನೀವು ಅಕ್ಕಪಕ್ಕಕ್ಕೆ ಸುಲಭವಾಗಿ ಚಲಿಸಲು ಸಾಧ್ಯವಾಗುವಷ್ಟರ ಮಟ್ಟಿಗಾದರೂ ಜಾಗ ಇರಬೇಕಾಗುತ್ತದೆ. ಹಾಗಾಗಿ ಕನಿಷ್ಠ 60″ (150cm) ಅಗಲ ಮತ್ತು 84″ (210cm) ಉದ್ದವಿದ್ದರೆ ಹೋಮ್ ಆಫೀಸ್ ಸುಂದರವಾಗಿ ಕಾಣುತ್ತದೆ.

3. ಡೆಸ್ಕ್ ಮತ್ತು ಚೇರ್ ಆಯ್ಕೆ
ನಿಮ್ಮ ಹೋಮ್ ಆಫೀಸ್‌ಗೆ ಸರಿಯಾದ ಮೇಜು ಮತ್ತು ಕುರ್ಚಿಯನ್ನು ಆರಿಸುವುದು ಅತ್ಯಗತ್ಯ. ನಿಮ್ಮ ಕಂಪ್ಯೂಟರ್‌ಗೆ ಸಾಕಷ್ಟು ಅಗಲವಿರುವ ಮತ್ತು ಕೆಲಸ ಮಾಡಲು ಅಗತ್ಯವಿರುವ ಯಾವುದನ್ನಾದರೂ ಆಯ್ಕೆಮಾಡಿ. ಸಾಮಾನ್ಯವಾಗಿ ಡೆಸ್ಕ್ ಕನಿಷ್ಠ 48″ (120cm) ಅಗಲವಾಗಿರಬೇಕು. ತುಂಬಾ ಎತ್ತರವಾದ ಡೆಸ್ಕ್ ಅವಶ್ಯಕತೆ ಇರುವುದಿಲ್ಲ. 28-30 (70-75cm) ಸ್ವೀಕಾರಾರ್ಹ ಅಳತೆಯಾಗಿದೆ. ಆರಾಮದಾಯಕ ಮತ್ತು ಸಾಧ್ಯವಾದರೆ ಸರಿಹೊಂದಿಸಬಹುದಾದ ಉತ್ತಮ ಗುಣಮಟ್ಟದ ಕುರ್ಚಿಯನ್ನು ಆಯ್ಕೆ ಮಾಡಿ.

4. ಸಂಗ್ರಹಣೆ ಮತ್ತು ಶೆಲ್ವಿಂಗ್
ಹೋಮ್ ಆಫೀಸ್ ಅನ್ನು ವಿನ್ಯಾಸಗೊಳಿಸುವಾಗ ನಿಮ್ಮ ಶೇಖರಣಾ ಅಗತ್ಯಗಳಿಗಾಗಿ ಸಾಕಷ್ಟು ಶೆಲ್ವಿಂಗ್, ಫೈಲಿಂಗ್ ಕ್ಯಾಬಿನೆಟ್‌ಗಳು ಅಥವಾ ಕಪಾಟುಗಳು ಇರಬೇಕಾಗುತ್ತದೆ. ನಿಮ್ಮ ಕೆಲಸದ ಹರಿವನ್ನು ಪರಿಗಣಿಸಿ ಯಾವ ವಸ್ತುಗಳು ಇರುತ್ತವೆ, ಕೆಲಸ ಮಾಡುವಾಗ ಅದು ಎಲ್ಲಿ ಇರಬೇಕು ಮತ್ತು ಪೂರ್ಣಗೊಂಡಾಗ ಅದು ಎಲ್ಲಿಗೆ ಹೋಗಬೇಕು ಎಂಬುದೆಲ್ಲವನ್ನು ನಿರ್ಧರಿಸಬೇಕಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಫೈಲಿಂಗ್ ಗಳು ಸಮೀಪದಲ್ಲಿಯೇ ಕೈಗೆ ಎಟುಕುವ ರೀತಿಯಲ್ಲೇ ಇರಿಸಿಕೊಳ್ಳಲು ಪ್ರಯತ್ನಿಸಿ. ನೀವು ಕೈಪಿಡಿಗಳು, ಕ್ಯಾಟಲಾಗ್ ಗಳು ಅಥವಾ ಉಲ್ಲೇಖ ಪುಸ್ತಕಗಳನ್ನು ಬಳಸಿದರೆ, ಅವುಗಳನ್ನು ಇರಿಸಿಕೊಳ್ಳಲು ಮೇಜಿನ ಬಳಿ ಶೆಲ್ಫ್ ಬರುವಂತೆ ವಿನ್ಯಾಸ ಮಾಡಿಕೊಳ್ಳಿ.

5. ಭೇಟಿಯಾಗಲು ಸ್ಥಳ
ನೀವು ಗ್ರಾಹಕರನ್ನು ಅಥವಾ ಗ್ರಾಹಕರು ನಿಮ್ಮನ್ನು ಭೇಟಿ ಮಾಡುತ್ತಾರಾ? ನೀವು ಒಂದು ಸಣ್ಣ ಸಭೆಯ ಪ್ರದೇಶ ಇರುವಂತೆ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಸಭೆಗಳನ್ನು ಆಯೋಜಿಸಲು ಅನುಕೂಲವಾಗುವಂತೆ ನಿಮ್ಮ ಹೋಮ್ ಆಫೀಸ್ ವಿನ್ಯಾಸದಲ್ಲಿ ಕೆಲವು ಹೆಚ್ಚುವರಿ ಆಸನಗಳನ್ನು ಯೋಜಿಸಿಕೊಳ್ಳಬೇಕು.

6. ನೈಸರ್ಗಿಕ ಬೆಳಕು ಮತ್ತು ನೋಟ
ಯಾವುದೇ ಹೋಮ್ ಆಫೀಸ್ ಜಾಗಕ್ಕೆ ಉತ್ತಮ ಬೆಳಕು ನಿರ್ಣಾಯಕವಾಗಿರುತ್ತದೆ. ಹಾಗಾಗಿ ಹೆಚ್ಚು ನೈಸರ್ಗಿಕ ಬೆಳಕು ಬರುವ ಜಾಗವನ್ನು ಹೋಮ್ ಆಫೀಸ್ ಗೆ ಮೀಸಲಿರಿಸಿ. ಇದರ ಜೊತೆಗೆ ನಿಮ್ಮ ಮನೆಯ ಲುಕ್ ಚೆನ್ನಾಗಿರುವಂತೆ ವಿನ್ಯಾಸಮಾಡಿಕೊಳ್ಳಿ. ನಿಮ್ಮ ಡೆಸ್ಕ್ ಗೆ, ಕಂಪ್ಯೂಟರ್ ಪರದೆಗೆ ತೊಂದರೆಯಾಗದ ರೀತಿಯಲ್ಲಿ ಕಿಟಕಿಗಳ ನೋಟವನ್ನು ಬದಲಾಯಿಸಿ. ಅರೆಪಾರದರ್ಶಕ ಕಿಟಕಿಯ ಛಾಯೆಗಳು ನಿಮ್ಮ ಕೋಣೆಯನ್ನು ಕತ್ತಲೆಯಾಗದಂತೆ ನೋಡಿಕೊಳ್ಳುತ್ತದೆ. ಕನ್ನಡಿಯನ್ನು ಫಿಕ್ಸ್ ಮಾಡಿ, ಗೋಡೆಗಳಿಗೆ ತಿಳಿಬಣ್ಣ ಹಚ್ಚುವ ಮೂಲಕ ನೈಸರ್ಗಿಕ ಬೆಳಕನ್ನು ಹೆಚ್ಚಿಸಬಹುದು. ಓವರ್ಹೆಡ್ ಸೀಲಿಂಗ್ ಲೈಟ್ ಉತ್ತಮ ಬೆಳಕನ್ನು ಒದಗಿಸುತ್ತದೆ. ನೆರಳು-ಮುಕ್ತ ಟಾಸ್ಕ್ ಲೈಟಿಂಗ್ ಮತ್ತು ಸಂಜೆಯ ಸಮಯದಲ್ಲಿ ಹೆಚ್ಚುವರಿ ಬೆಳಕನ್ನು ಒದಗಿಸಲು ಡೆಸ್ಕ್ ಲೈಟ್ ಅನ್ನು ಸೇರಿಸಿ. ಹೆಚ್ಚುವರಿ ಬೂಸ್ಟ್‌ಗಾಗಿ ನಿಮ್ಮ ಲೈಟ್ ಫಿಕ್ಚರ್‌ಗಳಲ್ಲಿ ಕೆಲವು ಪೂರ್ಣ ಸ್ಪೆಕ್ಟ್ರಮ್ ಡೇಲೈಟ್ ಬಲ್ಬ್‌ಗಳನ್ನು ಸೇರಿಸಿ.

7. ತಂತ್ರಜ್ಞಾನ
ಪ್ರಸ್ತುತ ತಂತ್ರಜ್ಞಾನದ ಬಳಕೆಯು ನಿಮ್ಮ ಹೋಮ್ ಆಫೀಸ್ ಗೆ ವಿಭಿನ್ನ ಲುಕ್ ಕೊಡುತ್ತೆ. ವೈರ್ ಲೆಸ್ ರೂಟರ್, ಪ್ರಿಂಟರ್, ಮೌಸ್, ಹೀಗೆ ಇಂತಹಗಳ ಬಳಕೆಯಿಂದ ವೈರ್‌ಗಳು ತೂಗಾಡಲು ಅವಕಾಶ ಇಲ್ಲದಿರುವುದರಿಂದ ನೋಡುಗರಿಗೆ ತುಂಬಾ ಚೆನ್ನಾಗಿ ಕಾಣಲಿದೆ.

8.ಆಕರ್ಷಕ ಮತ್ತು ಸುಂದರ
ಹೌದು ನಿಮ್ಮ ಹೋಮ್ ಆಫೀಸ್ ಅನ್ನು ನಿಮ್ಮ ಅಭಿರುಚಿಗನುಗುಣವಾಗಿ ಇಟ್ಟುಕೊಳ್ಳಿ. ಕಲಾಕೃತಿಗಳು, ಗೋಡೆ ಚಿತ್ರಗಳು, ವಸ್ತುಗಳ ಸಂಗ್ರಹಗಳು ಇವುಗಳು ಆಕರ್ಷಕ ಮತ್ತು ಸುಂದರವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಹೋಮ್ ಆಫೀಸ್ ವಿನ್ಯಾಸವನ್ನು ನೀವು ಯೋಜಿಸಿದಾಗ ಈ ವೈಯಕ್ತಿಕ ಆಶಯಗಳು ಸೇರಿರಲಿ. ಇದು ನಿಮ್ಮ ದಿನವನ್ನು ಉಜ್ವಲಗೊಳಿಸುತ್ತದೆ.

9. ಫ್ಲೋರ್ ಯೋಜನೆಯಿರಲಿ
ನಿಮ್ಮ ಆಲೋಚನೆಗಳನ್ನು ಸಂಘಟಿಸಲು ಫ್ಲೋರ್ ಯೋಜನೆ ಬಹಳ ಉತ್ತಮ ಆಯ್ಕೆ. ನೀವು ಹೆಚ್ಚು ಶಕ್ತಿಶಾಲಿ 3D ವೈಶಿಷ್ಟ್ಯಗಳಿಗೆ ಸಿದ್ಧರಿದ್ದರೆ, ಉತ್ತಮ ಗುಣಮಟ್ಟದ 2D ಮತ್ತು 3D ಮಹಡಿ ಯೋಜನೆಗಳನ್ನು ರಚಿಸಲು, ಸರಳವಾಗಿ ಅಪ್‌ಗ್ರೇಡ್ ಮಾಡಿ. ಇದು ತುಂಬಾ ಸುಲಭ!