ಇತ್ತೀಚಿನ ವರ್ಷಗಳಲ್ಲಿ, ಗುರುಗ್ರಾಮದ ಹಲವಾರು ಪ್ರದೇಶಗಳು ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಗಳ ಬೇಡಿಕೆಯಲ್ಲಿ ತೀವ್ರ ಬೆಳವಣಿಗೆಯನ್ನು ದಾಖಲಿಸಿವೆ. ಈ ಪಟ್ಟಿಯಲ್ಲಿ ಹೆಚ್ಚು ಬೇಡಿಕೆಯಿರುವ ಪ್ರದೇಶವೆಂದರೆ ಗ್ವಾಲ್ ಪಹಾರಿ; ಇದು ಅತ್ಯಂತ ಪ್ರತಿಷ್ಠಿತ ರಿಯಾಲ್ಟಿ ಯೋಜನೆಗಳಲ್ಲಿ ವೇಗವಾಗಿ ಹೊರಹೊಮ್ಮುತ್ತಿದೆ.
ಗೃಹ ಖರೀದಿದಾರರ ಸಕಾರಾತ್ಮಕ ಮಾರುಕಟ್ಟೆ ಭಾವನೆಯನ್ನು ಗಮನಿಸಿದ ಮಾರುಕಟ್ಟೆ ವಿಶ್ಲೇಷಕರು, ಮುಂದಿನ ವರ್ಷಗಳಲ್ಲಿ ಗ್ವಾಲ್ ಪಹಾರಿಯಲ್ಲಿ ಮುಂಬರುವ ಪ್ರಾಪರ್ಟಿ ಅಭಿವೃದ್ಧಿ ಯೋಜನೆಗಳ ಬೇಡಿಕೆ ಹೆಚ್ಚಳದಲ್ಲಿ ಸ್ಥಿರತೆ ಇರಲಿದೆ ಎಂದು ಅಂದಾಜಿಸಿದ್ದಾರೆ.
ಪ್ರಾಚೀನ ನೈಸರ್ಗಿಕ ಸೌಂದರ್ಯ ವಾತಾವರಣದಲ್ಲಿ ನೆಲೆಸಿರುವ ಗ್ವಾಲ್ ಪಹಾರಿ ಆರಾಮದಾಯಕ ಮತ್ತು ಅದ್ಧೂರಿ ಜೀವನಶೈಲಿಯನ್ನು ಒದಗಿಸುತ್ತದೆ. ಗ್ವಾಲ್ ಪಹಾರಿ ಮತ್ತು ಗುರುಗ್ರಾಮದ ಬೇರೆಲ್ಲ ಬೆಳವಣಿಗೆ ಕಾಣುತ್ತಿರುವ ರಿಯಲ್ ಎಸ್ಟೇಟ್ ಹಬ್‌ಗಳಲ್ಲಿನ ಪ್ರಮುಖ ವ್ಯತ್ಯಾಸ ಎಂದರೆ, ಗ್ವಾಲ್ ಪಹಾರಿ ಇನ್ನೂ ತನ್ನ ಹಸಿರು ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿದೆ. ನಗರಗಳ ಜನದಟ್ಟಣೆಯಿಂದ ದೂರದ ಪ್ರದೇಶಗಳಲ್ಲಿ ಮನೆ ಖರೀದಿಗಾಗಿ ಯೋಜಿಸುತ್ತಿರುವ ಜನರಿಗೆ ಈ ಅಂಶವು ಬೆಲೆಕಟ್ಟಲಾಗದ ಆಸ್ತಿಯಾಗಿದೆ. ಇದು ಆರೋಗ್ಯಕರ, ಸುಸ್ಥಿರ ಜೀವನವನ್ನು ಒದಗಿಸುವ ಅತ್ಯಾಧುನಿಕ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳಿಗೆ ಅಸೀಮ ಅವಕಾಶ ನೀಡುತ್ತದೆ.

ಉತ್ತಮ ಕಾರ್ಯಕ್ಷೇತ್ರ ದೆಹಲಿ ಹಾಗೂ ಗುರುಗ್ರಾಮದ ಇತರ ಭಾಗಗಳಿಗೆ ಸಾಟಿಯಿಲ್ಲದ ಸಾರಿಗೆ ಸಂಪರ್ಕದ ಕಾರಣ ಗ್ವಾಲ್ ಪಹಾರಿಯು ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ಅಪೇಕ್ಷಿತ ರಿಯಲ್ ಎಸ್ಟೇಟ್ ಕೇಂದ್ರಗಳಲ್ಲಿ ಒಂದಾಗಿ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಅದರ ಸಾಟಿಯಿಲ್ಲದ ಸಾರಿಗೆ ಸಂಪರ್ಕದೊಂದಿಗೆ, ಈ ಪ್ರದೇಶವು ಗುರುಗ್ರಾಮದಾದ್ಯಂತ ಅತ್ಯಧಿಕ ಮಟ್ಟದಲ್ಲಿ ಆಸ್ತಿಯ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಹೂಡಿಕೆಯ ಮೇಲಿನ ಹೆಚ್ಚಿನ ಲಾಭವು ಕೂಡ ಈ ಪ್ರದೇಶದ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುವ ಅತ್ಯುತ್ತಮ ಸೌಕರ್ಯಗಳ ವೃದ್ಧಿಗೆ ಕಾರಣವಾಗಿದೆ.
ಗ್ವಾಲ್ ಪಹಾರಿಯಲ್ಲಿನ ಆಸ್ತಿ ಬೇಡಿಕೆಯ ಅತಿಯಾದ ಏರಿಕೆಯು ಈ ಪ್ರದೇಶದಲ್ಲಿ ಅಸಂಖ್ಯಾತ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ರಿಯಲ್ ಎಸ್ಟೇಟ್ ಡೆವಲಪರ್ಗಳನ್ನು ಉತ್ತೇಜಿಸಿದೆ. ಅವುಗಳಲ್ಲಿ ಗಗನಚುಂಬಿ ವಸತಿ ಅಪಾರ್ಟ್ಮೆಂಟ್ಗಳು, ಬಿಲ್ಡರ್ ಮಹಡಿಗಳು, ಐಷಾರಾಮಿ ವಿಲ್ಲಾಗಳು, ಭವ್ಯವಾದ ಪೆಂಟ್ಹೌಸ್ಗಳು, ಹಾಗೆಯೇ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ದೊಡ್ಡ ಕಚೇರಿ ಸ್ಥಳಗಳನ್ನು ಒಳಗೊಂಡಿದೆ.
ಹರಿಯಾಣ-ದೆಹಲಿ ಗಡಿಯಲ್ಲಿರುವ ಗ್ವಾಲ್ ಪಹಾರಿಯು ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಆಡಳಿತಕ್ಕೆ ಒಳಪಟ್ಟಿದೆ. ವಿಶೇಷ ಆರ್ಥಿಕ ವಲಯದ ಕಾರಣ ಟಿಸಿಎಸ್, ಐಬಿಎಂ, ಎರಿಕ್ಸನ್, ಮರ್ಕೆರ್ ಸಂಸ್ಥೆಗಳು ದೆಹಲಿ-ಎನ್ಸಿಆರ್ ಹೃದಯ ಭಾಗದಲ್ಲಿ ಕಚೇರಿಗಳನ್ನು ನಿರ್ಮಿಸಿಕೊಂಡಿವೆ. ಸಮೀಪವೇ ಬಿಎಚ್ಇಎಲ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ ಕಚೇರಿಗಳೂ ಇವೆ. ದ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ನ ವಿಶಾಲ, ಹಚ್ಚಹಸಿರು ಕ್ಯಾಂಪಸ್, ಗಾಲ್ಫ್ ಕೋರ್ಸ್, ಕ್ರಿಕೆಟ್ ಮೈದಾನ, ಎನ್ಬಿಆರ್ಸಿ ಕಟ್ಟಡ, ಸಸ್ಯಪಾಲನಾಲಯ, ಮೋಟರ್ಸ್ಪೋರ್ಟ್ಸ್ ಪ್ರದೇಶ ಮತ್ತು ನ್ಯಾನೊ ಬಯೋಟೆಕ್ನಾಲಜಿ ಕೇಂದ್ರಗಳು ಈ ಪ್ರದೇಶದ ಮೌಲ್ಯವನ್ನು ಹೆಚ್ಚಿಸಿವೆ. ಅಷ್ಟಲ್ಲದೇ ಗುರುಗ್ರಾಮ-ಫರೀದಾಬಾದ್ ರಸ್ತೆಗೆ ಹತ್ತಿಕೊಂಡಿರುವ ಗ್ವಾಲ್ ಪಹಾರಿ ವಿಸ್ತರಣೆಗೆ ಸಾಕಷ್ಟು ಅವಕಾಶಗಳನ್ನೂ ಹೊಂದಿದೆ.
ಅತ್ಯುತ್ತಮ ಶಾಲೆಗಳು, ಶಾಪಿಂಗ್ ಏರಿಯಾ, ಬ್ಯಾಂಕ್, ಆಸ್ಪತ್ರೆ, ಪ್ರತಿಷ್ಠಿತ ಹೋಟೆಲ್, ಸರ್ಕಾರಿ ಸಂಸ್ಥೆಗಳು, ಬಹು ನಿರೀಕ್ಷಿತ ವಸತಿ ಮತ್ತು ವಾಣಿಜ್ಯ ಯೋಜನೆಗಳು, ಕ್ರೀಡಾ ಕಾಂಪ್ಲೆಕ್ಸ್ಗಳು, ಸಾರ್ವಜನಿಕ ಉದ್ಯಾನ- ಈ ಎಲ್ಲ ಕಾರಣಗಳಿಂದಾಗಿ ಗ್ವಾಲ್ ಪಹಾರಿಯು ಅತಿ ಬೇಡಿಕೆಯ ಪ್ರದೇಶವಾಗಿ ಮಾರ್ಪಡುತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿಯೂ ಇಲ್ಲ.


