Revenue Facts

ಸ್ವಂತ ಉದ್ಯಮ ಶುರು ಮಾಡಲು ಸರ್ಕಾರದಿಂದ ಹಣದ ನೆರವು ಎಲ್ಲಿ ಸಿಗುತ್ತದೆ..?

ಬೆಂಗಳೂರು, ಜೂ. 26 : ನಿರುದ್ಯೋಗಿಗಳು ಕೂಡ ಕೆಲಸವನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಕುಗ್ಗುವುದರ ಬದಲು, ಸ್ವಲ್ಪ ತಲೆಗೆ ಕೆಲಸ ಕೊಟ್ಟರೆ, ಒಳ್ಳೆಯ ಉದ್ಯಮಿ ಕೂಡ ಆಗಬಹುದು. ನೀವು ನಾಲ್ಕಾರು ಜನರಿಗೆ ಕೆಲಸವನ್ನೂ ಕೊಡಬಹುದು. ಅದಕ್ಕಾಗಿ ಸರ್ಕಾರ ಉತ್ತೇಜನವನ್ನೂ ನೀಡುತ್ತದೆ. ಆದರೆ, ಸ್ವಂತ ಉದ್ಯಮ ಶುರು ಮಾಡುವುದು ಸುಲಭವೂ ಅಲ್ಲ. ಅದಕ್ಕೆಂದು ಒಂದಷ್ಟು ಪರಿಶ್ರಮ ಬೇಕಾಗುತ್ತದೆ.

ಜೊತೆಗೆ ಹಣವೂ ಬೇಕಾಗುತ್ತದೆ. ಹಣಕ್ಕಾಗಿ ಈಗ ಪರದಾಡುವ ಅಗತ್ಯವಿಲ್ಲ. ಕೆಲ ಬ್ಯಾಂಕ್ ಗಳಲ್ಲಿ ಸ್ವಂತ ಉದ್ಯಮ ಶುರು ಮಾಡಲು ಸಾಲವನ್ನು ಕೊಡಲಾಗುತ್ತದೆ. ಸ್ವಂತ ಬಿಸಿನೆಸ್ ಅನ್ನು ಪುಟ್ಟದಾಗಿ ಶುರು ಮಾಡಬಾಹುದು. ಬ್ಯಾಂಕ್ ಗಳಲ್ಲಿ ಅಂಗಡಿಗಳನ್ನು ತೆರೆಯಲು ಸಾಲ ನೀಡಲಾಗುತ್ತದೆ. ಕಿರಾಣಿ, ಬಟ್ಟೆ, ಮೆಡಿಕಲ್ ಸ್ಟೋರ್, ಕಾಫಿ ಶಾಪ್, ಹೋಟೆಲ್, ಬ್ಯಾಂಗಲ್ ಸ್ಟೋರ್, ಬೋಟಿಕ್ಸ್ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಉದ್ಯೋಗ ಮಾಡಬಹುದು.

ಇವಕ್ಕೆಲ್ಲಾ ಬಹಳ ಮುಖ್ಯವಾದದ್ದು ಹಣ. ಬ್ಯಾಂಕ್ ಗಳು ನೀವು ಯಾವ ಅಂಗಡಿಯನ್ನು ತೆರೆಯುತ್ತಿದ್ದೀರಿ ಎಂಬುದರ ಮೇಲೆ ನಿಮಗೆ ಸಾಲವನ್ನು ನೀಡಲು ನಿರ್ಧರಿಸುತ್ತದೆ. ಒಂದೊಂದು ಬ್ಯಾಮಕ್ ಗಳಲ್ಲಿ ಬಡ್ಡಿದರ ಬೇರೆ ಬೇರೆ ಇರುತ್ತದೆ. ಸಾಲ ಪಡೆಯುವಾಗ ನಿಮಗೆ ಬಡ್ಡಿದರ ಎಲ್ಲಿ ಕಡಿಮೆ ಇರುತ್ತದೋ ಅಲ್ಲಿ ಸಾಲ ಪಡೆಯುವುದು ಉತ್ತಮ. ಕೇಂದ್ರ ಸರ್ಕಾರವು ನಿರುದ್ಯೋಗಿಗಳನ್ನಿ ಸ್ವಾವಲಂಬಿ ಮಾಡುವುದಕ್ಕಾಗಿಯೇ ಕೆಲ ಬ್ಯಾಂಕ್ ಗಳ ಸಹಯೋಗದೊಂದಿಗೆ ಸಾಲ ನೀಡುವ ಯೋಜನೆಯನ್ನು ರೂಪಿಸಿದೆ.

ಯಾವುದೇ ಅಂಗಡಿಯನ್ನು ಪ್ರಾರಂಬಿಸುವುದಕ್ಕಾಗಿ ಕನಿಷ್ಠ 50,000 ದಿಂದ 5 ಲಕ್ಷದವರೆಗೆ ಬ್ಯಾಂಕ್ ಗಳಲ್ಲಿ ಸಾಲ ದೊರೆಯುತ್ತದೆ. ಇನ್ನು ಹೊಸದಾಗಿ ಅಂಗಡಿ ತೆರೆಯುವವರಿಗಷ್ಟೇ ಅಲ್ಲದೇ, ಈಗಾಗಲೇ ಅಂಗಡಿ ತೆರೆದಿರುವವರಿಗೂ ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತದೆ. ವ್ಯಾಪಾರವನ್ನು ವಿಸ್ತರಣೆ ಮಾಡಲು ಸಾಲವನ್ನು ಪಡೆಯಬಹುದಾಗಿದೆ. ಹಾಗದಾದರೆ ಬನ್ನಿ, ನಾವೀಗ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಸಿಗುತ್ತದೆ. ಯಾವೆಲ್ಲಾ ಯೋಜನೆಗಳಿವೆ ಎಂಬುದನ್ನು ತಿಳಿಯಿರಿ.

ಎಂಎಸ್‌ಎಂಇ ಸಾಲ, ಕ್ರೆಡಿಟ್‌ ಗ್ಯಾರಂಟಿ ಫಂಡ್‌ ಸ್ಕೀಮ್, ಮುದ್ರಾ ಸಾಲ, ಕ್ರೆಡಿಟ್‌ ಲಿಂಕ್‌ ಕ್ಯಾಪಿಟಲ್‌ ಸಬ್ಸಿಡಿ ಸ್ಕೀಮ್‌, ನ್ಯಾಷನಲ್‌ ಸ್ಮಾಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ ಸಬ್ಸಿಡಿ, ಎಸ್‌ಐಡಿಬಿಐ ಸಾಲಗಳನ್ನು ಕೇಂದ್ರ ಸರ್ಕಾರ ಸ್ವಂತ ಉದ್ಯಮ ಶುರು ಮಾಡುವವರಿಗೆ ನೀಡುತ್ತದೆ. ಕೇಂದ್ರ ಸರ್ಕಾರ ನೀಡುವ ಈ ಸವಲತ್ತುಗಳನ್ನು ಬಳಸಿಕೊಂಡು, ನಿಮ್ಮ ಸ್ವಂತ ಉದ್ಯಮವನ್ನು ಶುರು ಮಾಡಿ. ನಾಲ್ಕು ಜನರಿಗೆ ಕೆಲಸ ಕೊಡುವುದರ ಜೊತೆಗೆ, ನಿಮ್ಮ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು.

Exit mobile version