ಬೆಂಗಳೂರು ಜು.13 : ಕರ್ನಾಟಕ ಮುದ್ರಾಂಕ ಕಾಯಿದೆ, 1957 ರ ವೇಳಾಪಟ್ಟಿಯಲ್ಲಿನ ಷರತ್ತುಗಳ ಪ್ರಕಾರ ಸ್ಟ್ಯಾಂಪ್ ಡ್ಯೂಟಿಯನ್ನು ವಿಧಿಸಲಾಗುತ್ತದೆ ಮತ್ತು ಪ್ರಸ್ತುತ, ಸೆಕ್ಷನ್ 20 (1) ಅಡಿಯಲ್ಲಿ ಖರೀದಿ ಪತ್ರಗಳಿಗೆ 5% ಸ್ಟ್ಯಾಂಪ್ ಸುಂಕವನ್ನು ವಿಧಿಸಲಾಗುತ್ತಿದೆ. ಸದ್ಯಕ್ಕೆ ಮುದ್ರಾಂಕ ಶುಲ್ಕ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನಪರಿಷತ್ ಸದಸ್ಯರಾದ ಮುನಿರಾಜುಗೌಡ, ಪಿ.ಎಂ. ಅವರ ಪ್ರಶ್ನೆಗೆ ಉತ್ತರಿಸದ ಸಚಿವರು, ಜಮೀನುಗಳ ಮೌಲ್ಯ ಪರಿಷ್ಕರಣೆಯಾಗಿ ನಾಲ್ಕೂವರೆ ವರ್ಷಗಳಾಗಿದ್ದು, ನಿವೇಶನದ ಮೌಲ್ಯ ಪರಿಷ್ಕರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಆದರೆ ಮುದ್ರಾಂಕ ಶುಲ್ಕ ಪರಿಷ್ಕರಣೆಯಾಗಿಲ್ಲ ಎಂದು ಅವರು ತಿಳಿಸಿದರು.
35 ಲಕ್ಷದಿಂದ 45 ಲಕ್ಷ ರೂ.ವರೆಗಿನ ಅಪಾರ್ಟ್‌ಮೆಂಟ್ ಅಥವಾ ಫ್ಲ್ಯಾಟ್‌ಗಳ ಮೊದಲ ಖರೀದಿಯ ಮೇಲಿನ ಮುದ್ರಾಂಕ ಶುಲ್ಕವನ್ನು ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಲು 5% ರಿಂದ 3% ಕ್ಕೆ ಕಡಿತ ಮಾಡಲಾಗಿತ್ತು. ಸದರಿ ಶುಲ್ಕವನ್ನು ಹೆಚ್ಚಳ ಮಾಡುವ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ತಿಳಿಸಿದರು..