Revenue Facts

2 ವರ್ಷಗಳಿಂದ ಒಂದು ಬಾರಿಯೂ ಬಳಸದ Gmail ಖಾತೆ ಡಿಸೆಂಬರ್‌ನಲ್ಲಿ ಡಿಲೀಟ್

2 ವರ್ಷಗಳಿಂದ ಒಂದು ಬಾರಿಯೂ ಬಳಸದ Gmail ಖಾತೆ ಡಿಸೆಂಬರ್‌ನಲ್ಲಿ ಡಿಲೀಟ್

ನ್ಯೂಯಾರ್ಕ್‌;ಸತತ 2 ವರ್ಷಗಳಿಂದ ಒಂದು ಬಾರಿಯೂ ಬಳಸದ Gmail, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಗೂಗಲ್ ಫೋಟೋಸ್ ಇತ್ಯಾದಿ ನಿಮ್ಮ ಖಾತೆಗಳು ಮುಂದಿನ ತಿಂಗಳು ಡಿಲೀಟ್(Delete) ಆಗುವ ಸಾಧ್ಯತೆಯಿದೆ. ಗೂಗಲ್ ಕಂಪನಿಯು ತನ್ನ ಸೆಕ್ಯೂರಿಟಿ(Security) ನಿಯಮಗಳನ್ನು ಕಳೆದ ಮೇ ತಿಂಗಳಿನಲ್ಲೇ ಅಪ್‌ಡೇಟ್ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್‌ ಕ್ರಿಚೇಲ್‌, ಮುಂಬರುವ ಡಿಸೆಂಬರ್‌ನಲ್ಲಿ(December) ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್‌(Login) ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಬಳಸದ ಜಿಮೇಲ್ ಖಾತೆಗಳನ್ನು ಮುಂಬರುವ ಡಿಸೆಂಬರ್ ನಿಂದ ನಿರಂತರವಾಗಿ ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ. ತನ್ನ ಸುರಕ್ಷತಾ ನಿಯಮಗಳಿಗೆ ಗೂಗಲ್ ಕಳೆದ ಮೇ ತಿಂಗಳಿನಲ್ಲೇ ತಿದ್ದುಪಡಿ ತಂದು ಈ ಬಗ್ಗೆ ಸ್ಪಷ್ಟಪಡಿಸಿತ್ತು. ಅದರಂತೆ ಬಳಕೆದಾರರು & ಸಂಸ್ಥೆಗೆ ಅಪಾಯವಾಗದಿರಲಿ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಜಿಮೇಲ್ ರದ್ದಾದರೆ ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್ & ಗೂಗಲ್(Google) ಫೋಟೋಸ್ ಕೂಡ ತಾನಾಗಿಯೇ ರದ್ದಾಗಲಿವೆ ಎಂದು ಸಂಸ್ಥೆ ತಿಳಿಸಿದೆ.ಸಾಂಸ್ಥಿಕ ಅಂದರೆ ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್‌ ಖಾತೆಗಳು ಡಿಲೀಟ್‌ ಆಗುವುದಿಲ್ಲ.

Exit mobile version