Revenue Facts

UPI ವಹಿವಾಟಿನ ಬಗ್ಗೆ ನಿಮಗೆ ಗೊತ್ತಾಗಲೇ ಬೇಕಾದ ಮಾಹಿತಿ..!

UPI  ವಹಿವಾಟಿನ ಬಗ್ಗೆ ನಿಮಗೆ ಗೊತ್ತಾಗಲೇ ಬೇಕಾದ ಮಾಹಿತಿ..!

ಬ್ಯಾಂಕ್ ವಿಚಾರ ಎಂದರೆ ಮೊದಲು ನಾವು ಹುಷಾರಾಗಿರಬೇಕು. ಒಂದ ರಲ್ಲಿ ಹೆಚ್ಚು ಕಡಿಮೆ ಆದ್ರೂ ನಮಗೆ ತೊಂದರೆ. ಆನ್ಲೈನ್ ಪಾವತಿಗಳನ್ನು ಮಾಡುವಾಗ ನಮ್ಮ ಮೈಯೆಲ್ಲ ಕಣ್ಣಾಗಿರಬೇಕು. ನಿಮ್ಮ ಹಣವನ್ನು ನೀವೇ ನೋಡಿಕೊಳ್ಳಿ ಬೇರೆಯರಿಗೆ ಪಿನ್ ಆಗಲಿ ಬ್ಯಾಂಕ್ ಖಾತೆ ವಿವರ ಗೊತ್ತ್ಆದರೆ ನಿಮ್ಮ ಹಣ ಗುಳುಂ .

UPI ಬಳಸಬೇಕಾದ್ರೆ ಮಾಡಲೇ ಬೇಕಾದ ಅಂಶಗಳು

* ವಿಶ್ವಾಸಾರ್ಹ ಅಪ್ಲಿಕೇಶನ್ ಗಳನ್ನು ಮಾತ್ರ ಬಳಸ ಬೇಕು.
* UPI ಪಾವತಿಸಲು UPI ಅಪ್ಲಿಕೇಶನ್ ಅಗತ್ಯವಿದೆ.
* ನೀವು ಬಳಸುತ್ತಿರು ಅಪ್ಲಿಕೇಶನ್ ಸರಿಯಾಗಿದಿಯ ಮತ್ತು RBI ಅನುಮೋದಿಸಿದೆಯಾ ಖಚಿತಪಡಿಸಿಕೊಳ್ಳಿ
* ನಿಮ್ಮ ಪಿನ್ ಗಳನ್ನು ಗುಪ್ತವಾಗಿಡಿ UPI ಪಾವತಿಸಲು ಪಿನ್ ಬೇಕಾಗುತ್ತೆ.
* ಬ್ಯಾಂಕ್ ಖಾತೆಯನ್ನು ಯಾರೊಂದಿಗು ಹಂಚಿಕೊಳ್ಳಬೇಡಿ
* UPI ಪಾವತಿಸಲು ಬ್ಯಾಂಕ್ ಖಾತೆ ವಿವರಗಳನ್ನು ನೀವು ಒಮ್ಮೆ ಮಾತ್ರ ಹೊಂದಿಸಬೇಕಾಗುತ್ತದೆ.

 

ಯುಪಿಐ ನಲ್ಲಿ ಒಂದು ದಿನ ಎಷ್ಟು ವಹಿವಾಟು ಮಾಡಬಹುದು..?

* ಸಾಮಾನ್ಯ ವಹಿವಾಟುಗಳಿಗೆ ದಿನಕ್ಕೆ ಗರಿಷ್ಟ UPI ಮಿತಿ ೧ ಲಕ್ಷ
* ಬ್ಯಾಂಕ್ ಅಪ್ಲಿಕೇಶನ್ ಮೂಲಕ ದಿನಕ್ಕೆ ೨೦ UPI ವಹಿವಾಟುಗಳನ್ನು ಮಾಡಬಹುದು
* UPI ಅಪ್ಲಿಕೇಶನ್ ಬಳಸಿಕೊಂಡು ಎಟಿಎಂ ಹಿಂಪಡೆಯಲು ದಿನಕ್ಕೆ UPI ಮಿತಿ ರೂ. ೧೦ ಸಾವಿರ
* ಮೂರನೇ ವ್ಯಕ್ತಿಯ UPI ಅಪ್ಲಿಕೇಶನ್ ಮೂಲಕ ದಿನಕ್ಕೆ ೧೦ ವಹಿವಾಟುಗಳನ್ನು ನಡೆಸಬಹುದು
* ಐಪಿಒ ಗಳು ಮತ್ತು ಚಿಲ್ಲರೆ ನೇರ ಯೋಜನೆಗಾಗಿ ಯುಪಿಐ ಮಿತಿ ಪ್ರತಿ ವಹಿವಾಟಿಗೆ ೫ ಲಕ್ಷ ರೂ.

ಚೈತನ್ಯ ರವೆನ್ಯೂ ಫ್ಯಾಕ್ಟ್ ನ್ಯೂಸ್

Exit mobile version