ಬೆಂಗಳೂರು, ಆ. 12 : ಭಾರತೀಯ ಅಂಚೆ ಕಚೇರಿಯಿಂದ ಸಾರ್ವಜನಿಕರಿಗೆ ಸಾಕಷ್ಟು ಪ್ರಯೋಜನಗಳಾಗಿವೆ. ಆದರೆ, ಇತ್ತೀಚೆಗೆ ಅಂಚೆ ಕಚೇರಿಗೆ ತೆರಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿದ್ದು, ಬಹುಮುಖ್ಯವಾಗಿ ಕಚೇರಿಯ ಸಮಯ. ಹೌದು.. ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುವುದು ಮಧ್ಯಾಹ್ನ 3.30 ರ ವರೆಗೆ ಮಾತ್ರ. ನಂತರ ಸಾರ್ವಜನಿಕರು ಅಂಚೆ ಕಚೇರಿಯಿಂದ ಯಾವ ಸೇವೆಯನ್ನು ಪಡೆಯಾಲಾಗದು.
ಕೆಲಗಳಿಗೆ ತೆರಳುವವರು ಸಂಜೆ 4 ರ ನಂತರವೇ ವಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯ. ಹೀಗಿರುವಾಗ ಅಂಚೆ ಕಚೇರಿ ಮುಚ್ಚಿದ್ದರೆ, ನಾಳೆಯವರೆಗೂ ಕಾಯಬೇಕಿತ್ತು. ಸ್ಪೀಡ್ ಪೋಸ್ಟ್, ಪಾರ್ಸೆಲ್, ಆಧಾರ್ ಎಲ್ಲಾ ಸೇವೆಗಳಿಗೂ ಸಾರ್ವಜನಿಕರು ತೊಂದರೆ ಎದುರಿಸಬೇಕಿತ್ತು. ಹಾಗಾಗಿ ಸಂಜೆ ಅಂಚೆ ಕಚೇರಿಯನ್ನು ತೆರೆಯಲಾಗಿದೆ. ಬೆಂಗಳೂರಿನಲ್ಲಿ ಮ್ಯೂಸಿಯಂ ರಸ್ತೆಯಲ್ಲಿರುವ ಹಳೆಯ ಕಟ್ಟಡದಲ್ಲಿ ಕಚೇರಿ ಇದ್ದು, ಸಾರ್ವಜನಿಕರ ಬೇಡಿಕೆ ಹೆಚ್ಚಿದಂತೆ ಮತ್ತಷ್ಟು ಬ್ರ್ಯಾಂಚ್ ಗಳನ್ನು ತೆರೆಯಲು ಆಲೋಚಿಸಲಾಗಿದೆ.
ಬಹುಮುಖ್ಯವಾಗಿ ಯುವಕರನ್ನು ಅಂಚೆ ಕಚೇರಿಯತ್ತ ಸೆಳೆಯುವ ಆಲೋಚನೆಯಿಂದಾಗಿ ಸಂಜೆ ಅಂಚೆ ಕಚೇರಿಯನ್ನು ತೆರೆಯಲಾಗಿದೆ. ಈಗ ಪೋಸ್ಟ್ ಆಫಿಸ್ ನಲ್ಲಿ ಕೆಲಸವಿದ್ದರೆ, ಆಫೀಸಿನಿಂದ ಬೇಗ ಹೊರಡುವ ಅಥವಾ ಲೇಟ್ ಅಗಿ ಹೋಗುವ ಯೋಚನೆಯೇ ಇಲ್ಲ. ಭಾರತೀಯ ಅಂಚೆ ಇಲಾಖೆ ಬೆಂಗಳೂರಿನಲ್ಲಿ ಮೊದಲ ಸಂಜೆ ಅಂಚೆ ಕಚೇರಿಯನ್ನು ಪ್ರಾರಂಬಿಸಿದೆ. ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯು ಸ್ಪೀಡ್ ಪೋಸ್ಟ್ ನಿಂದ ಆಧಾರ್ವರೆಗಿನ ಸೇವೆಗಳನ್ನು ಒದಗಿಸುತ್ತದೆ.
ಕಚೇರಿಯು ವಾರದ ಆರು ದಿನಗಳು ಮಧ್ಯಾಹ್ನ 1 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕಿಂಗ್, ಪಾರ್ಸೆಲ್ ಪ್ಯಾಕಿಂಗ್, ಆಧಾರ್ ಸೇವೆಗಳು, ಚಿತ್ರ ಪೋಸ್ಟ್ ಕರ್ಡ್ ಗಳು ಮತ್ತು ಸ್ಟಾಂಪ್ ನ ಸೇವೆಗಳನ್ನು ನೀಡುತ್ತದೆ. ಇದನ್ನು ಬಹುಮುಖ್ಯವಾಗಿ ಕೆಲಸ ಮಾಡುವ ವೃತ್ತಿಪರರಿಗಾಗಿ ಪರಿಚಯಿಸಲಾಗಿದೆ. ಅವರಿಗೆ ಸೇವೆಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಸಾಮಾನ್ಯ ಅಂಚೆ ಕಚೇರಿಯಲ್ಲಿ ಕೌಂಟರ್ ಮುಚ್ಚುವ ಸಮಯ 3:30.
ಆದರೆ ಸಂಜೆ ಅಂಚೆ ಕಚೇರಿಯು ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ವಿಶಿಷ್ಟ ಉದ್ದೇಶವನ್ನು ಪೂರೈಸುತ್ತದೆ. ಬುಕ್ಕಿಂಗ್ ವಿಚಾರಣೆಗೆ ಬರಬಹುದಾಗಿದೆ. ಕಚೇರಿಗೆ ತೆರಳುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಹೆಚ್ಚಿನ ಸಂಜೆ ಅಂಚೆ ಕಚೇರಿಗಳ ಅಭಿವೃದ್ಧಿ ಪಡಿಸಲಾಗುತ್ತಿದೆ. ನವೆಂಬರ್ 2022 ರಲ್ಲಿ ಕರ್ನಾಟಕದ ಧಾರವಾಡದಲ್ಲಿ ಮೊದಲ ಸಂಜೆ ಅಂಚೆ ಕಚೇರಿಯನ್ನು ಸ್ಥಾಪಿಸಲಾಯಿತು. ಅದರ ಯಶಸ್ಸನ್ನು ನೋಡಿ ಬೆಂಗಳೂರಿನಲ್ಲಿಯೂ ಪ್ರಸ್ತಾಪಿಸಲಾಗಿದೆ.