Revenue Facts

EPF Interest Rate: ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇ.8.15 ಬಡ್ಡಿ ಘೋಷಣೆ

ಹೊಸದಿಲ್ಲಿ ಜು. 25;2022-23ರ ಆರ್ಥಿಕ ವರ್ಷಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅಡಿಯಲ್ಲಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.15ಕ್ಕೆ ಹೆಚ್ಚಿಸಿ ಕೇಂದ್ರ ಸರಕಾರ ಸೋಮವಾರ(ಜುಲೈ 24) ಅಧಿಕೃತ ಸುತ್ತೋಲೆ ಪ್ರಕಟಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಖಾತೆಗಳ ಬಡ್ಡಿ ದರವು ಶೇಕಡಾ 8.10ರಷ್ಟು ಆಗಿತ್ತು. ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಮಟ್ಟವಾದ ಶೇಕಡಾ 8.10ಕ್ಕೆ ಇಳಿಸಿದ್ದ ಮಾಡಿದೆ.

ಸರ್ಕಾರ ಈಗ ಸ್ವಲ್ಪ ಹೆಚ್ಚಳ ಮಾಡಿದೆ,ತನ್ನ ಆರು ಕೋಟಿಗೂ ಹೆಚ್ಚು ಚಂದಾದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ(EPF) ಠೇವಣಿಗಳ ಮೇಲಿನ ಬಡ್ಡಿ ದರವನ್ನು 2022-23 ಕ್ಕೆ 8.15 ಶೇಕಡಕ್ಕೆ ಹೆಚ್ಚಿಸಿದೆ.ಕೋಟ್ಯಂತರ ಇಪಿಎಫ್‌ ಖಾತೆದಾರರಿಗೆ ಅನ್ವಯವಾಗಲಿದೆ ಇಪಿಎಫ್‌ಒ ಘೋಷಿಸಿರುವ ಈ ಬಡ್ಡಿ ದರ,ಈ ಕೆಳಗಿನ ನಾಲ್ಕು ವಿಧಾನಗಳನ್ನು ಬಳಸಿಕೊಂಡು ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು

1) ಉಮಾಂಗ್ ಅಪ್ಲಿಕೇಶನ್ ಬಳಸುವ ಮೂಲಕ

2) ಇಪಿಎಫ್ ಸದಸ್ಯರ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಬ್ಯಾಲೆನ್ಸ್‌ ಪರಿಶೀಲಿಸಬಹುದು.

3) ಮಿಸ್ಡ್ ಕಾಲ್ ನೀಡುವ ಮೂಲಕ

4) ಎಸ್‌ಎಂಎಸ್‌ ಕಳುಹಿಸುವ ಮೂಲಕ

Exit mobile version