Revenue Facts

ನಿಮ್ಮ ಮಕ್ಕಳು ವಿದೇಶಕ್ಕೆ ಹೋಗಬೇಕೇ..? ಹಾಗಾದರೆ, ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ಪಡೆಯಿರಿ..

ನಿಮ್ಮ ಮಕ್ಕಳು ವಿದೇಶಕ್ಕೆ ಹೋಗಬೇಕೇ..? ಹಾಗಾದರೆ, ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ಪಡೆಯಿರಿ..

ಬೆಂಗಳೂರು, ಜು. 22 : ವರ್ಷದಿಂದ ವರ್ಷಕ್ಕೆ ಭಾರತದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಓದುವ ಸಲುವಾಗಿ ಶಿಕ್ಷಣ ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2019ರಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 7.70ಲಕ್ಷ ತಲುಪಿತ್ತು. 2023ರಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. 2024ರಲ್ಲಿ 18 ಲಕ್ಷ ಅಧಿಕ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ವಿದ್ಯಾರ್ಥಿಗಳಿಗೆ ಸಾಲ ನೀಡಿಕೆಗೆ ಸಂಬಂಧ ಪಟ್ಟಂತೆ ಬ್ಯಾಂಕ್ ಗಳಿಗೆ ಅವರದ್ದೇ ಆದ ಕೆಲ ನಿಯಮಗಳಿವೆ.

ಹೀಗಾಗಿ ಯಾವುದೇ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಕೆಲ ಅರ್ಹತೆಗಳು ಸೇರಿದಂತೆ ನಿಯಮಗಳು ಹಾಗೂ ಷರತ್ತುಗಳ ಬಗ್ಗೆ ಮಾಹಿತಿ ತಿಳಿದಿರಬೇಕಾಗುತ್ತದೆ. ಶೈಕ್ಷಣಿಕ ಸಾಲವನ್ನು ಪಡೆಯುವುದಕ್ಕಾಗಿ ನೀವು ಭಾರತೀಯ ಪ್ರಜೆಯಾಗಿರಬೇಕು. ಅಂಗೀಕೃತ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದಿರಬೇಕು. ವಿದ್ಯಾರ್ಥಿಗಳಿಗೆ ಆದಾಯವಿಲ್ಲದಿರುವುದರಿಂದಾಗಿ ಪೋಷಕರು ಇಲ್ಲವೇ ಒಡಹುಟ್ಟಿದವರು ಕೂಡ ಅರ್ಜಿದಾರರಾಗಿರಬೇಕಾಗುತ್ತದೆ.

4 ಲಕ್ಷದವರೆಗೂ ಶಿಕ್ಷಣ ಸಾಲ ಪಡೆಯಲು ಯಾವುದೇ ಆಧಾರವನ್ನು ನೀಡಬೇಕಿಲ್ಲ. ಆದರೆ, ಅದಕ್ಕಿಂತಲೂ ಹೆಚ್ಚಿನ ಸಾಲವನ್ನು ಪಡೆಯಲು ಅರ್ಜಿದಾರರ ಆದಾಯ ಕಡಿಮೆ ಎಂದೆನಿಸಿದ್ರೆ ಬ್ಯಾಂಕು ಮೇಲಾಧರವನ್ನು ಕೇಳುತ್ತದೆ. ಶೈಕ್ಷಣಿಕ ಸಾಲವನ್ನು ಪಡೆಯುವ ಮೊದಲು ವಿವಿಧ ಬ್ಯಾಂಕ್ ಗಳಲ್ಲಿ ಸಿಗುವ ಸಾಲದ ಅವಕಾಶಗಳು, ಬಡ್ಡಿದರವನ್ನು ಲೆಕ್ಕಚಾರ ಮಾಡುತ್ತದೆ. ಸಾಲ ಮರುಪಾವತಿ ಅವಧಿಗಳ ಬಗ್ಗೆ ಮಾಹಿತಿ ಅನ್ನು ಸಂಗ್ರಹಿಸಿ ಹೋಲಿಕೆ ಮಾಡಿ ನೋಡುತ್ತದೆ.

ನಾಲ್ಕು ಲಕ್ಷ ಸಾಲಕ್ಕೆ ಎಲ್ಲಾ ಬ್ಯಾಂಕ್ ಗಳು ಯಾವುದೇ ಆಧಾರವನ್ನು ಕೇಳುವುದಿಲ್ಲ. ಅಷ್ಟೇ ಅಲ್ಲದೇ, ಓದು ಮುಗಿದು ಕೆಲಸಕ್ಕೆ ಸೇರಿ ಮೂರು ವರ್ಷ ಕಳೆಯುವವರೆಗೂ ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡಲು ಅವಕಾಶವನ್ನು ಕೊಡುತ್ತದೆ. ಈ ಮೊತ್ತಕ್ಕೆ ಶೇ. 10-15 ಬಡ್ಡಿದರವನ್ನು ವಿಧಿಸಲಾಗುತ್ತದೆ. ಜಾಸ್ತಿ ಮೊತ್ತದ ಶೈಕ್ಷಣಿಕ ಸಾಲ ಹೊಂದಿರೋರಿಗೆ ಬ್ಯಾಂಕ್ ಗಳು ಸುದೀರ್ಘ ಮರುಪಾವತಿ ಅವಧಿಗೆ ಕಡಿಮೆ ಬಡ್ಡಿ ವಿಧಿಸುತ್ತವೆ. ಇನ್ನು ವಿದ್ಯಾರ್ಥಿಗಳಿಗೆ ಸಾಲ ನೀಡುವ ಮೊದಲು ಬ್ಯಾಂಕ್ ಗಳು ಅರ್ಜಿದಾರರ ಹೆಸರ ಈ ಮೊದಲೇ ಸಾಲ ಇದೆಯಾ ಎಂಬ ಬಗ್ಗೆ ಪರಿಶೀಲನೆಯನ್ನು ನಡೆಸುತ್ತದೆ.

ಇನ್ನು ದೀರ್ಘಾವಧಿಯ ಸಾಲವನ್ನು ಪಡೆದರೆ, ಇಎಂಐ ಮೊತ್ತ ಕಡಿಮೆಯಾಗುತ್ತದೆ. ಉದ್ಯೋಗ ಸಿಕ್ಕಾಗ ವೇತನ ಕಡಿಮೆ ಇದ್ದು, ಇಎಂಐ ಹೆಚ್ಚಿದ್ದರೆ ಕಷ್ಟವಾಗುತ್ತದೆ. ಬ್ಯಾಂಕ್ ಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳು ಇವೆ. ಈ ಮೂಲಕ ಹೆಣ್ಣು ಮಕ್ಕಳಿಗೆ ಯೋಜನೆಗಳಡಿಯಲ್ಲಿ ಕಡಿಮೆ ಬಡ್ಡಿ ದರ ಸಾಲವನ್ನು ನೀಡುವುದರ ಜೊತೆಗೆ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ.

Exit mobile version