Revenue Facts

ನಿಮಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ತಿಳಿಯದ ವಿಚಾರಗಳು

ನಿಮಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ತಿಳಿಯದ ವಿಚಾರಗಳು

ಬೆಂಗಳೂರು, ಜು. 15 : ಈಗ ಎಲ್ಲರೂ ಕೆಲಸಕ್ಕೆ ಸೇರಿದ ಕೂಡಲೇ ಮಾಡಬೇಕಿರುವ ಕೆಲಸವೆಂದರೆ, ನಿವೃತ್ತಿ ನಂತರದ ಬದುಕಿಗಾಗಿ ಪಿಂಚಣಿ ಯೋಜನೆಯನ್ನು ಪಡೆಯಲು. ಯಾಕೆಂದರೆ, ದುಡಿಯುವ ವಯಸ್ಸಿನಲ್ಲಿ ನಿವೃತ್ತಿ ಬದುಕಿಗೂ ಹಣ ಉಳಿತಾಯ ಮಾಡುವುದು ಬಹಳ ಮುಖ್ಯ. ಹಾಗಾಗಿ ಪಿಂಚಣಿ ಯೋಜನೆಯನ್ನು ಪಡೆದು, ನಿವೃತ್ತಿ ಬಳಿಕ ಪಿಂಚಣಿ ಬಂದರೆ, ಜೀವನ ನಿರ್ವಹಣೆ ಸುಲಭವಾಗುತ್ತದೆ. ಹಾಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಿರಿ.

ರಾಷ್ಟ್ರೀಯ ಪಿಂಚಣಿ ಯೋಜನೆಯು ಖಾಸಗಿ ನಿವೃತ್ತಿ ಖಾತೆಯಾಗಿದೆ. ಈದರಲ್ಲಿ ಹಣ ಉಳಿತಾಯ ಮಾಡಿ ನಿವೃತ್ತಿ ಪಡೆಯುವ ಸಮಯದಲ್ಲಿ 34 ಲಕ್ಷ ರೂಪಾಯಿ ಅನ್ನು ಪಡೆಯಬಹುದಾಗಿದೆ. ವ್ಯಕ್ತಿಯು ಡಿಗ್ರಿ ಮುಗಿಸಿ 22 ವರ್ಷದಲ್ಲಿ ಕೆಲಸಕ್ಕೆ ಸೇರಿದರೆ, 42 ವರ್ಷಗಳವರೆಗೆ ಪ್ರತಿ ತಿಂಗಳು 8,500 ರೂಪಾಯಿಗಳನ್ನು ಠೇವಣಿ ಮಾಡುತ್ತಾ ಬರಬೇಕು. ಆಗ ಶೇ. 9 ರಷ್ಟು ಆದಾಯದಂತೆ ಒಟ್ಟು 4 ಕೋಟಿ ರೂಪಾಯಿಗಳವರೆಗೂ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ.

ಒಟ್ಟಿಗೆ ಹಣ ಪಡೆಯದೆ, ಸಂಪೂರ್ಣ ಕಾರ್ಪಸ್ ಅನ್ನು ವರ್ಷಾಶನ ಮಾಡಲು ಆಯ್ಕೆ ಮಾಡಿಕೊಂಡರೆ, ರೂ. 2 ಲಕ್ಷಗಳವರೆಗೂ ಮಾಸಿಕ ಪಿಂಚಣಿ ಬರುತ್ತದೆ. ಇಲ್ಲವೇ ಪ್ರತಿ ದಿನ 50 ರೂಪಾಯಿ ಅಂತೆ ಹೂಡಿಕೆ ಮಾಡಿದರೆ 34 ಲಕ್ಷ ರೂಪಾಯಿ ಪಡೆಯಬಹುದು. ಹೂಡಿಕೆ ಆರಂಭಿಸುವಾಗ 25 ವರ್ಷವಿದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾಸಿಕವಾಗಿ 1,500 ರೂಪಾಯಿ ಹೂಡಿಕೆ ಮಾಡಬೇಕು. 35 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕು.

35 ವರ್ಷಗಳಲ್ಲಿ ಹೂಡಿಕೆ ಮಾಡಿದ ಒಟ್ಟು ಹಣ 6.30 ಲಕ್ಷ ರೂಪಾಯಿ ಆಗಿರುತ್ತದೆ. ಇದಕ್ಕೆ ನಿಮಗೆ ಒಟ್ಟು ಬಡ್ಡಿ 27.9 ಲಕ್ಷ ರೂಪಾಯಿ ಬರುತ್ತದೆ. ಒಟ್ಟಾರೆ ಕೈಗೆ 34.19 ಲಕ್ಷ ರೂ. ಸಿಗುತ್ತದೆ. ಇದಕ್ಕೆ ತೆರಿಗೆ ಉಳಿತಾಯ 1.89 ಲಕ್ಷ ರೂಪಾಯಿ. ಖಾತೆಯನ್ನು ತೆರೆಯಲು ಪಾಯಿಂಟ್ ಆಫ್ ಪ್ರೆಸೆನ್ಸ್ ಸರ್ವಿಸ್ ಪ್ರೊವೈಡರ್ ಗೆ ಭೇಟಿ ನೀಡಬೇಕು. ಬ್ಯಾಂಕ್ ಶಾಖೆ, ಪೋಸ್ಟ್ ಆಫೀಸ್ಗಳಲ್ಲಿ ಖಾತೆಯನ್ನು ತೆರೆಯಬಹುದು. ಇಲ್ಲವೇ, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಬಳಸಿಕೊಂಡು eNPS ವೆಬ್ಸೈಟ್ https://enps.nsdl.com/eNPS/NationalPensionSystem.html ಗೆ ತೆರಳಿ ಮೂಲಕ ಆನ್ಲೈನ್ನಲ್ಲಿ ಖಾತೆ ತೆರೆಯಬಹುದು.

Exit mobile version