Revenue Facts

ನಿಮ್ಮ ಮನೆಗಳಲ್ಲಿ ಎಷ್ಟು ಹಣ ಇದ್ರೆ ಒಳ್ಳೇದು ಗೊತ್ತಾ..?

ನಿಮ್ಮ ಮನೆಗಳಲ್ಲಿ ಎಷ್ಟು ಹಣ ಇದ್ರೆ ಒಳ್ಳೇದು ಗೊತ್ತಾ..?

ದೇಶದಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ಆದ್ದರಿಂದ ಮನೆಯಲ್ಲಿ ಹಣವನ್ನು ಇಡುವುದು ತೀರ ಕಡಿಮೆ ಯಾಗಿದೆ. ಡಿಜಿಟಲ್ ಪಾವತಿ ವೇದಿಕೆಗಳಾದ ಫೋನ್ ಪೇ, ಗೂಗಲ್ ಪೇ, ಮತ್ತು CashApp ಬಂದು ಬದಲಾಯಿಸಿದೆ. ಮುಂಚೆ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳುತ್ತಿದ್ದೆವು ಆದರೆ ಈಗ ಎಲ್ಲವೂ ಬದಲಾಗಿದೆ. ಜನರಿಗೆ ತೀರ ಅವಶ್ಯಕತೆ ಇದ್ದಾಗ ಏನ್ ಮಾಡಬೇಕು ಅಂತಾನೆ ಗೊತ್ತಾಗಲ್ಲ. ಯಾವುದಕ್ಕೂ ಸಹ ಕೈ ನಲ್ಲಿ ಅಥವ ಮನೆಯಲ್ಲಿ ಹಣ ಇಟ್ಟು ಕೊಳ್ಳುವುದು ಉತ್ತಮ.

ತುರ್ತು ವೆಚ್ಚ:
ಮನೆಯಲ್ಲಿ ಕುಟುಂಬಸ್ಥರಿಗೆ ಆರೋಗ್ಯ ಏರು ಪೇರು ಆದಗ ಬ್ಯಾಂಕ್ ಸರ್ವರ್ ನಲ್ಲಿ ವ್ಯತ್ಯಾಸವಾದರೆ ಆಸ್ಪತ್ರೆ ಯವರು ಚಿಕಿತ್ಸೆ ನೀಡಲು ನೀರಾಕರಿಸುತ್ತಾರೆ. ವ್ಯಕ್ತಿಗೆ ಪ್ರಾಣಾಪಾಯ ಕೂಡ ಹಾಗಬಹುದು ಅದ್ದರಿಂದ ನಮ್ಮ ಬಳಿ ಭೌತಿಕವಾಗಿ ಹಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಭಾರತದ ಕಾನೂನಿನ ಪ್ರಕಾರ ಒಬ್ಬರ ಮನೆಯಲ್ಲಿ ಇಡಬೇಕಾದ ಮೊತ್ತ ಎಷ್ಟು ಗೊತ್ತಾ…?

ಭಾರತದ ಕಾನೂನಿನನ ಪ್ರಕಾರ ಮನಯಲ್ಲಿ ನಗದನ್ನುಎಷ್ಟು ಬೇಕಾದರು ಇಡಬಹುದು ಆದರೆ ನಗದಿನ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು, ನಗದಿನ ಆದಾಯದ ಮೂಲ ಯಾವದು ಅದರ ಪತ್ರ ಕಾಗದಗಳನ್ನು ಜೋಪಾನವಾಗಿಡಬೇಕು. ಕಾನೂನಿ ಪ್ರಕಾರ ನಿಮ್ಮ ಬಳಿ ಹೆಚ್ಚು ನಗದು ಇದ್ದಲ್ಲಿ ತೆರಿಗೆ ಪಾವತಿಸಲೇ ಬೇಕು, ಇಲ್ಲವಾದಲ್ಲಿ ಐಟಿ ರೈಡ್ ಆದರೆ ತೆರಿಗೆ ಇಲಾಖೆಯವರು ನಿಮ್ಮ ಬಳಿ ಇರುವ ನಗದನ್ನು ವಶ ಪಪಡಿಸಿ ದಂಡ ಹಾಕಬಹುದು.

ಮನೆಯಲ್ಲಿ ಹಣ ಇಡಬೇಕು ಅಂದ್ರೆ ಏನು ಮಾಡಬೇಕು..?

* ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ದಂಡ ವಿಧಿಸಬಹುದು
* ಒಂದು ಬಾರಿಗೆ 50,000 ರೂ.ಗಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಪ್ಯಾನ್ ಸಂಖ್ಯೆಯನ್ನು ನೀಡುವುದು ಅವಶ್ಯಕ.
* ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಠೇವಣಿ ಮಾಡಿದರೆ, ಅವನು ಪ್ಯಾನ್ ಮತ್ತು ಆಧಾರ್ ಮಾಹಿತಿಯನ್ನು ನೀಡಬೇಕಾಗುತ್ತದೆ.
* ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನೀಡಲು ವಿಫಲವಾದರೆ ರೂ 20 ಲಕ್ಷದವರೆಗೆ ದಂಡ ವಿಧಿಸಬಹುದು.
* 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕೊಟ್ಟು ಯಾವುದೇ ವಸ್ತುಗಳನ್ನು ಖರೀದಿಸುವಂತಿಲ್ಲ
* 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಖರೀದಿಸಿದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕಾಗುತ್ತದೆ.
* 30 ಲಕ್ಷಕ್ಕಿಂತ ಹೆಚ್ಚಿನ ನಗದು ಆಸ್ತಿ ಖರೀದಿ ಮತ್ತು ಮಾರಾಟದ ಬಗ್ಗೆ ತನಿಖಾ ಸಂಸ್ಥೆಯ ರಾಡಾರ್‌ಗೆ ಯಾವುದೇ ವ್ಯಕ್ತಿ ಬರಬಹುದು.
* ಕ್ರೆಡಿಟ್-ಡೆಬಿಟ್ ಕಾರ್ಡ್ ಪಾವತಿಯ ಸಮಯದಲ್ಲಿ, ಒಬ್ಬ ವ್ಯಕ್ತಿಯು 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ, ನಂತರ ತನಿಖೆ ಮಾಡಬಹುದು.
* ಕ್ರೆಡಿಟ್-ಡೆಬಿಟ್ ಕಾರ್ಡ್ ಪಾವತಿಯ ಸಮಯದಲ್ಲಿ, ಒಬ್ಬ ವ್ಯಕ್ತಿಯು ಒಮ್ಮೆಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಪಾವತಿಸಿದರೆ, ನಂತರ ತನಿಖೆ ಮಾಡಬಹುದು.
* ನಗದು ರೂಪದಲ್ಲಿ ದೇಣಿಗೆ ನೀಡುವ ಮಿತಿಯನ್ನು 2,000 ರೂ.ಗೆ ನಿಗದಿಪಡಿಸಲಾಗಿದೆ.
* ಒಂದು ದಿನದಲ್ಲಿ ಸಂಬಂಧಿಕರಿಂದ 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳಲಾಗುವುದಿಲ್ಲ. ಇದನ್ನು ಬ್ಯಾಂಕ್ ಮೂಲಕ ಮಾಡಬೇಕು.

ಚೈತನ್ಯ ರಿವೆನ್ಯೂ ಫ್ಯಾಕ್ಟ್ ನ್ಯೂಸ್ ಬೆಂಗಳೂರು

Exit mobile version