Revenue Facts

ನಿಮ್ಮ ತಂದೆ ತಾಯಿಗೆ ಆರೋಗ್ಯ ವಿಮೆ ಮಾಡಿಸಿದ್ದೀರಾ..? ಇಲ್ಲದಿದ್ದರೆ ಈ ಸುದ್ದಿ ನೋಡಿ..

ಬೆಂಗಳೂರು, ಏ. 29 : ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿ ಹೆಸರಲ್ಲಿ ಆರೋಗ್ಯ ವಿಮೆಯನ್ನು ತಪ್ಪದೇ ಮಾಡಿಸುತ್ತಾರೆ. ಈಗ ಐಟಿ ಉದ್ಯೋಗಿಗಳಿಂದ ಹಿಡಿದು ಎಲ್ಲಾ ತರಹದ ಕಂಪನಿಗಳು ಕೂಡ ಆರೋಗ್ಯ ವೆಚ್ಚಗಳಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನೀಡುತ್ತದೆ. ಹಾಗಾದರೆ ಏನಿದು ಆರೋಗ್ಯ ವಿಮೆ.? ಹಿರಿಯ ನಾಗರೀಕರಿಗೆ ಈ ವಿಮೆಯ ರಕ್ಷಣೆ ಒದಗಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ..

ಹಿರಿಯ ನಾಗರಿಕರಿಗಾಗಿ ಈ ವಿಮೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನು ಹಿರಿಯ ನಾಗರಿಕರಿಗೆಂದೇ ಪ್ರತ್ಯೇಕವಾಗಿ ರೂಪಿಸಲಾಗಿದೆ. ಯಾವುದಾದರೂ ತುರ್ತು ಪರೀಸ್ಥಿತಿ ಎದುರಾಗಿ ಮನೆಯ ಹಿರಿಯರು ಆಸ್ಪತ್ರೆಗೆ ದಾಖಲಾದರೆ, ಶಸ್ತ್ರ ಚಿಕಿತ್ಸೆ, ಗಭೀರ ಅನಾರೋಗ್ಯ, ಅಪಘಾತ ಸಂಭವಿಸಿದರೆ ಈ ಆರೋಗ್ಯ ವಿಮೆ ನೆರವಾಗುತ್ತದೆ. ಆದರೆ ಈ ಆರೋಗ್ಯ ವಿಮೆಯನ್ನು ಆಗಾಗ ನವೀಕರಣ ಮಾಡಿಸುತ್ತಿರಬೇಕು. ಪ್ರತೀ ವರ್ಷವೂ ತಪ್ಪದೇ ನವೀಕರಣಗೊಳಿಸಿದರೆ, ವಿಮೆಯ ಲಾಭ ಪಡೆಯಬಹುದಾಗಿದೆ.

ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿರುತ್ತದೆ. ವೈದ್ಯಕೀಯ ವೆಚ್ಚಗಳನ್ನು ಹೊರೆಯಾಗಿಸಿಕೊಳ್ಳುವುದರ ಬದಲು ವಿಮೆ ಮಾಡಿಸಿದ್ದರೆ, ಹೊರೆ ತಗ್ಗುತ್ತದೆ. ಹಿರಿಯ ನಾಗರಿಕರಿಗೆ ಕನಿಷ್ಠ ಒಬ್ಬ ವ್ಯಕ್ತಿಗೆ ಎಂದರೂ 10 ರಿಂದ 15 ಲಕ್ಷದವರೆಗೆ ಇನ್ಶೂರೆನ್ಸ್ ಕವರೇಜ್ ಇರಬಹುದು. ಸಾಮಾನ್ಯವಾಗಿ ಎಲ್ಲರೂ 5 ಲಕ್ಷದ ಕವರೇಜ್ ಅನ್ನು ಮಾಡಿಸಿರುತ್ತಾರೆ. ಇದು ವಾರ್ಷಿಕ 25 ರಿಂದ 40 ಸಾವಿರದ ವರೆಗಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗಿರುತ್ತದೆ. ಆರೋಗ್ಯ ವಿಮೆಯಲ್ಲಿ ಯಾವ ಕವರೇಜ್ ಪಡೆದಿದ್ದೀರಿ ಎಂಬುದರ ಮೇಲೆ ಪ್ರೀಮಿಯಂ ಹಣವನ್ನು ಕಟ್ಟಬೇಕಾಗುತ್ತದೆ.

ಆರೋಗ್ಯ ವಿಮೆ ಮಾಡಿಸಿದ್ದಲ್ಲಿ ಆದಾಯ ತೆರೆಗೆ ಸೆಕ್ಷನ್ 80ರ ಅಡಿಯಲ್ಲಿ ಹಿರಿಯ ನಾಗರಿಕರಿಗೆ 50 ಸಾವಿರದವರೆಗೆ ತೆರೆಗಿ ವಿನಾಯಿತಿ ದೊರೆಯುತ್ತದೆ. ಇನ್ನು ವಿಮೆಯನ್ನು ತಂದೆ ತಾಯಿ ಇಬ್ಬರ ಹೆಸರಲ್ಲೂ ಒಂದೇ ಪಡೆಯುವುದರ ಬದಲು ಬೇರೆ ಬೇರೆ ಪಡೆಯುವುದು ಸೂಕ್ತ. ಅಷ್ಟೇ ಅಲ್ಲದೇ, ಆದಷ್ಟು ಬೇಗನೆ ವಿಮೆ ಪಡೆಯುವದರ ಜೊತೆಗೆ ಕವರೇಜ್ ಅನ್ನು ವಯಸ್ಸಾದಂತೆ ಹೆಚ್ಚಿಸುವುದು ಕೂಡ ಒಳ್ಳೆಯದು. ಕವರೇಜ್ ವ್ಯಪ್ತಿ ಆರಂಭದಲ್ಲಿ ಕಡಿಮೆ ಇದ್ದರೂ ಹಳೆಯದಾದಂತೆ ಅನುಕೂಲಗಳು ಹೆಚ್ಚಿರುತ್ತವೆ.

Exit mobile version