Revenue Facts

ಡಿಮ್ಯಾಟ್‌ ಖಾತೆ,ಮ್ಯೂಚುವಲ್‌ ಫಂಡ್‌;ನಾಮಿನಿ ವಿವರ ಸಲ್ಲಿಕೆ ಗಡುವು ವಿಸ್ತರಣೆ

ಡಿಮ್ಯಾಟ್‌ ಖಾತೆ,ಮ್ಯೂಚುವಲ್‌ ಫಂಡ್‌;ನಾಮಿನಿ ವಿವರ ಸಲ್ಲಿಕೆ ಗಡುವು   ವಿಸ್ತರಣೆ

ನವದೆಹಲಿ: ಡಿಮ್ಯಾಟ್ ಮತ್ತು ಮ್ಯೂಚುವಲ್ ಫಂಡ್ ಖಾತೆದಾರರಿಗೆ ನಾಮಿನಿ(Nomini) ವಿವರ ಸಲ್ಲಿಸಲು ಮುಂದಿನ ವರ್ಷ ಜೂನ್ 30(June30) ರವರೆಗೆ ಗಡುವನ್ನು ವಿಸ್ತರಣೆ ` ಮಾಡಲಾಗಿದೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಬುಧವಾರ ಹೇಳಿದೆ. ಈ ಮೊದಲು, ನಾಮನಿರ್ದೇಶನ ಅಥವಾ ಘೋಷಣೆಯ ಫಾರ್ಮ್ ಸಲ್ಲಿಸಲು ಡಿ. 31ರ ಗಡುವು ನೀಡಲಾಗಿತ್ತು. ಹೂಡಿಕೆದಾರರಿಗೆ(investors) ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಇದನ್ನು ವರ್ಗಾಯಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.‘ಮಾರುಕಟ್ಟೆ ಭಾಗಿದಾರರ ಅಭಿಪ್ರಾಯಕ್ಕೆ ಆಧಾರವಾಗಿ ಡೀಮ್ಯಾಟ್ ಖಾತೆಗಳು ಮತ್ತು ಮ್ಯುಚುವಲ್ ಫಂಡ್ ಫೋಲಿಯೋಗಳಿಗೆ ನಾಮಿನೇಶನ್ ಆಯ್ಕೆ ಸಲ್ಲಿಸಲು ಕೊನೆಯ ದಿನಾಂಕವನ್ನು 2024ರ ಜೂನ್ 30ಕ್ಕೆ ವಿಸ್ತರಿಸಲಾಗಿದೆ,’ ಎಂದು ಸೆಬಿ ಹೇಳಿಕೆ ನೀಡಿದೆ.ಡಿಮ್ಯಾಟ್ ಖಾತೆ(Demat account) ಮತ್ತು ಮ್ಯುಚುವಲ್ ಫಂಡ್(Mutual fund) ಖಾತೆಗಳಿಗೆ ನಾಮಿನಿ ಹೆಸರಿಸಬೇಕು ಅಥವಾ ನಾಮಿನೇಶನ್ ಬೇಡ ಎಂದು ಘೋಷಿಸಬೇಕು. ಇಲ್ಲವಾದರೆ ಅಂಥ ಖಾತೆ ಮತ್ತು ಫೋಲಿಯೋಗಳನ್ನು ಫ್ರೀಜ್ ಮಾಡಲಾಗುತ್ತದೆ. ಅದರಿಂದ ಹಣ ಹಿಂಪಡೆಯಲು ಸಾಧ್ಯವಾಗದೇ ಹೋಗಬಹುದು.

ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ?

1. ಅಧಿಕೃತ NSDL ಪೋರ್ಟಲ್‌ಗೆ ಭೇಟಿ ನೀಡಿ.

2. ಮುಖಪುಟದಲ್ಲಿ, ‘ನಾಮನಿರ್ದೇಶನ ಆನ್‌ಲೈನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ಡಿಪಿ ಐಡಿ, ಕ್ಲೈಂಟ್ ಐಡಿ, ಪ್ಯಾನ್ ಮತ್ತು ಒಟಿಪಿಯನ್ನು ಒದಗಿಸಬೇಕಾದ ಹೊಸ ಪುಟಕ್ಕೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ.

4. ಈ ವಿವರಗಳನ್ನು ನಮೂದಿಸಿದ ನಂತರ, ‘ನಾನು ನಾಮನಿರ್ದೇಶನ ಮಾಡಲು ಬಯಸುತ್ತೇನೆ’ ಅಥವಾ ‘ನಾನು ನಾಮನಿರ್ದೇಶನ ಮಾಡಲು ಬಯಸುವುದಿಲ್ಲ’ ಎಂಬ ಆಯ್ಕೆಯನ್ನು ಆರಿಸಿ.

5. ನಾಮಿನಿಯನ್ನು ಸೇರಿಸುವ ಆಯ್ಕೆಯನ್ನು ನೀವು ಆರಿಸಿದರೆ, ನಾಮಿನಿಯ ವಿವರಗಳನ್ನು ಒದಗಿಸಲು ವಿನಂತಿಸುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ.

6. eSign ಸೇವಾ ಪೂರೈಕೆದಾರರ ಪುಟದಲ್ಲಿ, ಸಕ್ರಿಯಗೊಳಿಸಲು ಖಚಿತಪಡಿಸಿಕೊಳ್ಳಿ

Exit mobile version