22.9 C
Bengaluru
Friday, July 5, 2024

ಮೈತ್ರಿ ನಂತರ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿಯಾದ ದಳಪತಿಗಳು

ನವದೆಹಲಿ;ಬಿಜೆಪಿ(BJP) ಜೊತೆ ಮೈತ್ರಿ ಘೋಷಣೆಯಾದ(Declaration of alliance) ಬಳಿಕ ಗುರುವಾರ(ಡಿಸೆಂಬರ್21) ಹೆಚ್.ಡಿ. ದೇವೇಗೌಡ ಅವರು ಮೊದಲ ಬಾರಿಗೆ ನರೇಂದ್ರ ಮೋದಿ (PM Narendra Modi)ಅವರನ್ನು ಭೇಟಿಯಾಗಿದ್ದಾರೆ. ಹೆಚ್‌ಡಿ ದೇವೇಗೌಡರಿಗೆ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಸಾಥ್ ನೀಡಿದ್ದಾರೆ. ದಳಪತಿಗಳ ಜೊತೆಗಿನ ಫೋಟೋಗಳನ್ನು ಮೋದಿ ಅವರು ಎಕ್ಸ್‌ನಲ್ಲಿ(X) ಪೋಸ್ಟ್ ಮಾಡಿದ್ದಾರೆ. ದೇವೇಗೌಡರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ರಾಷ್ಟ್ರದ ಪ್ರಗತಿಗೆ ದೇವೇಗೌಡರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ ಎಂದು ಮೋದಿ ಬರೆದುಕೊಂಡಿದ್ದಾರೆ.ಇಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪುತ್ರರಾದ ಹೆಚ್‌ಡಿ ಕುಮಾರಸ್ವಾಮಿ ಮತ್ತು ಹೆಚ್‌ಡಿ ರೇವಣ್ಣ ಅವರೊಂದಿಗೆ ಮೋದಿಯನ್ನು ಭೇಟಿಯಾದರು. ಭೇಟಿ ಮಾಡಿದ ಬಳಿಕ ಎಕ್ಸ್‌(X)ನಲ್ಲಿ ಫೋಟೋಗಳನ್ನು ಮೋದಿ ಹಂಚಿಕೊಂಡಿದ್ದಾರೆ.

Related News

spot_img

Revenue Alerts

spot_img

News

spot_img