ರಾಜ್ಯದಲ್ಲಿ DCM ಹುದ್ದೆ ಸೃಷ್ಟಿ:ಸ್ಪಷ್ಟನೆ ನೀಡಿದ AICC ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ

0
109

#Creation of DCM #post state #AICC president# Dr. Mallikarjun Kharge

ಕಲ್ಬುರ್ಗಿ: ರಾಜ್ಯದಲ್ಲಿ ಮೂವರು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.ಲೋಕ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಇನ್ನೂ 3 ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್‌(Congress) ಹೈಕಮಾಂಡ್ ಮೇಲೆ ಸಿದ್ದು ಬಣ ಒತ್ತಾಯಿಸುತ್ತಿದೆ. ಈ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, 3 ಡಿಸಿಎಂ(DCM) ಸ್ಥಾನವನ್ನು ಸೃಷ್ಟಿಸುವ ವಿಚಾರ ಹೈಕಮಾಂಡ್ ಮುಂದೆ ಇಲ್ಲ, ಈ ಬಗ್ಗೆ CM ಸಿದ್ದರಾಮಯ್ಯ, DCM ಡಿಕೆಶಿ ಅವರನ್ನೇ ಕೇಳಿ ಎಂದು ಈ ವಿಷಯವನ್ನು ತಳ್ಳಿ ಹಾಕಿದ್ದಾರೆ. ಸರ್ಕಾರದ ಕಡೆ ಸಮಸ್ಯೆಗಳ ಕಡೆ ಗ್ಯಾರಂಟಿಗಳನ್ನ ಅನುಷ್ಟಾನಕ್ಕೆ ತರುವ ಕಡೆ ಗಮನ ಕೊಡಬೇಕು. ನಮ್ಮ ಗುರಿ ಮುಟ್ಟುವವರೆಗೂ ಇಂತಹ ವಿಚಾರಕ್ಕೆ ಅವಕಾಶ ಕೊಡಬಾರದು ಎಂದರು.ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಸಭೆ ನಡೆಯಲಿದೆ. ಜ.10 ರಂದು ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದ್ದು ಯಾರನ್ನ ಕಣಕ್ಕಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.