ಪತಿ ಪತ್ನಿಯರಲ್ಲಿ ವಿರಸ ಮೂಡಲು ಮನೆಯ ವಾಸ್ತು ಕೂಡ ಪ್ರಭಾವ ಬೀರುತ್ತಾ..?

0
257

ಬೆಂಗಳೂರು, ಮೇ. 04 : ಮನೆ ಎಂದ ಮೇಲೆ ಒಮ್ಮೊಮ್ಮೆ ವೈಮನಸ್ಸುಗಳು ಉಂಟಾಗುವುದು ಸಹಜ. ಆದರೆ, ಕೆಲವೊಮ್ಮೆ ನಿರಂತರವಾಗಿ ಪತಿ ಪತ್ನಿಯರಲ್ಲಿ ವಿರಸ ಮೂಡುವುದು. ಇದು ಕೆಲ ಸಂದರ್ಭಗಳಲ್ಲಿ ಶಾಶ್ವತವಾಗಿ ಉಳಿದು ಬಿಡುವುದು. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ಆಗ್ನೇಯ ಕೋಣೆಯಲ್ಲಿ ಏನೆಲ್ಲಾ ದೋಷಗಳು ಇರುತ್ತವೆ ಎಂಬುದನ್ನು ಮೊದಲನೇಯದಾಗಿ ನೋಡಬೇಕಾಗುತ್ತದೆ. ಆಗ್ನೇಯ ಕೋಣೆ ಬೆಳೆದಿದ್ದರೆ, ಶ್ರೀಮತಿ ಪತಿಯ ಮಾತನ್ನು ಕೇಳುವುದಿಲ್ಲ. ಇದರಿಂದ ಯಜಮಾನನಿಗೆ ಬೇಸರವಾಗುತ್ತದೆ.

ಆಗ್ನೇಯ ಕೋಣೆ ಕಟ್ ಆಗಿದ್ದರೆ, ಶ್ರೀಮತಿ ಯಜಮಾನನಿಗೆ ಯಾವುದರಲ್ಲೂ ಆಸಕ್ತಿಯನ್ನು ತೋರುವುದಿಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಿಲ್ಲ. ಇದರಿಂದಲೂ ಮನೆಯ ಯಜಮಾನನ ಮನಸ್ಸಿಗೆ ನೋವಾಗುತ್ತದೆ. ಇನ್ನು ಆಗ್ನೇಯದಲ್ಲಿ ನೀರಿನ ಹರಿವಿನ ಬಗ್ಗೆಯೂ ತಿಳಿದಿರಬೇಕು. ಶೌಚಾಲಯ ಅಥವಾ ಸ್ನಾನಗೃಹ ಬಿಟ್ಟು, ಆಗ್ನೇಯ ಮೂಲೆಯಲ್ಲಿ ಸದಾ ನೆಲ ಒದ್ದೆ ಇದ್ದರೆ ಮನೆಯ ಒಡತಿಯ ಆರೋಗ್ಯದಲ್ಲಿ ಸಮಸ್ಯೆ ಇರುತ್ತದೆ. ಇದರಿಂದಲೂ ಆಕೆ ಮನೆಯ ಎಲ್ಲಾ ವಿಚಾರದಲ್ಲೂ ಗಮನಿಸಲಾಗದು. ಆಗಲೂ ಯಜಮಾನನಿಗೆ ಕಷ್ಟವಾಗುತ್ತದೆ.

ಇನ್ನು ನೈರುತ್ಯ ದಿಕ್ಕು ಯಜಮಾನನಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ನೈರುತ್ಯದಲ್ಲಿ ಯಜಮಾನ ಈ ದಿಕ್ಕಿನಲ್ಲಿ ತನ್ನ ಆದಾಯದ ಕೆಲಸಗಳನ್ನು ಮಾಡಿದರೆ ಒಳಿತಾಗುತ್ತದೆ. ಆದರೆ, ಈ ದಿಕ್ಕಿನಲ್ಲಿ ನೀರು ಇದ್ದರೆ, ಯಜಮಾನನ ಫಲ ಕಡಿಮೆಯಾಗುತ್ತದೆ. ನೈರುತ್ಯದಲ್ಲಿ ಬೇಡದ ವಸ್ತುಳನ್ನು ತುಂಬಿಸಿಟ್ಟರೂ ಯಜಮಾನನ ಮೇಲಿನ ಗೌರವಗಳು ಕಡಿಮೆಯಾಗುತ್ತದೆ. ಈಶಾನ್ಯದಲ್ಲಿ ಸಮಸ್ಯೆ ಇದ್ದಾಗ ಮಕ್ಕಳಿಂದ ಪೋಷಕರಿಗೆ ತೊಂದರೆಯಾಗುತ್ತದೆ. ಆಗ ತಾಯಿ ಹಾಗೂ ತಂದೆಯ ಅಭಿಪ್ರಾಯಗಳು ಬೇರೆಯಾದಾಗಲೂ ಕೂಡ ಜಗಳಗಳು ಶುರುವಾಗುತ್ತವೆ.

ಹಾಗಾಗಿ ಮನೆಯ ವಾಸ್ತು ದೋಷಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಆಗ ಪತಿ ಪತ್ನಿಯರಲ್ಲಿನ ಜಗಳ, ಬೇಸರಗಳ ಪರಿಹಾರವನ್ನು ಮಾಡಬಹುದು. ಕೆಲವೊಮ್ಮೆ ಇತರರಿಂದಲೂ ಸಮಸ್ಯೆಗಳು ತಲೆ ದೂರುವ ಸಾಧ್ಯತೆಗಳಿರುತ್ತವೆ. ಮನೆಯಲ್ಲಿ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಎಂಬುದರ ಖಚಿತ ಮಾಹಿತಿ ಇದ್ದರೆ, ವಾಸ್ತು ದೋಷವಿದೆಯಾ ಎಂದು ತಿಳಿಯಬಹುದು.