ಕೊರೊನಾ ಸಾಂಕ್ರಾಮಿಕ ಭಯ ದೂರ: ಕಮರ್ಷಿಯಲ್‌ ಡೀಲ್‌ ಜಿಗಿತ

0
108

ಕೊರೊನಾ ಸಾಂಕ್ರಾಮಿಕ ಭಯ ಕೊಂಚ ಕಡಿಮೆಯಾಗಿದ್ದು, ಈಗ ಈ ಮುಂಚಿನಂತೆ ವಾಣಿಜ್ಯ ವಹಿವಾಟುಗಳು ಪುನರಾರಂಭ ಆಗಿವೆ. ಹಾಗೇ ಕಚೇರಿ ವಹಿವಾಟುಗಳು ಆರಂಭವಾಗಿದ್ದು, ದೊಡ್ಡ ದೊಡ್ಡ ಸಂಸ್ಥೆಗಳು, ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದ ಉದ್ಯೋಗಿಗಳಿಗೆ ಬ್ಯಾಕ್‌ ಟು ಆಫೀಸ್‌ ಪ್ರೋಗ್ರಾಂಗಳನ್ನು ಶುರು ಮಾಡಿವೆ. ಕೊರೊನಾ ಕಾರಣದಿಂದ ತತ್ತರಿಸಿದ್ದ ಕಾರ್ಪೊರೇಟ್‌, ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ವರ್ಗಕ್ಕೆ ಇದು ವರದಾನವಾಗಿದೆ.

ಕೊರೊನಾ ಸಮಯದಲ್ಲಿ ಬಹುತೇಕ ಕಂಪೆನಿಗಳು ತಮ್ಮ ಕಚೇರಿಗಳನ್ನ ಬಂದ್ ಮಾಡಿದ್ದವು. ಇಲ್ಲವೇ ನಾಲ್ಕೈದ್ ಫ್ಲೋರ್ ಇದ್ದ ಕಚೇರಿಯನ್ನು ಒಂದೇ ಫ್ಲೋರ್‌ಗೆ ಇಳಿಕೆ ಮಾಡಿದ್ದವು. ಆದರೆ, ಈಗ ವರ್ಕ್ ಫ್ರಮ್ ಹೋಮ್ ಬಹುತೇಕ ಕಡಿಮೆಯಾಗುತ್ತಿದ್ದು, ಎಲ್ಲಾ ಸಿಬ್ಬಂದಿಯನ್ನು ಮರಳಿ ಕರೆಯಲಾಗುತ್ತಿದೆ. ಹೀಗಾಗಿ ಸಿಬ್ಬಂದಿ ಸಂಖ್ಯೆಯ ಅಗತ್ಯಕ್ಕೆ ತಕ್ಕಂತೆ ಕಚೇರಿಯನ್ನು ವಿಸ್ತಾರ ಮಾಡುವ ಅಗತ್ಯವೂ ಇರುವುದರಿಂದ ಕಮರ್ಷಿಯಲ್ ಮಳಿಗೆಗಳನ್ನು ಹೊಂದಿದ್ದವರಿಗೆ ಈಗ ಮತ್ತೆ ಮರುಜೀವ ಬಂದಂತಾಗಿದೆ.

ಇತ್ತೀಚೆಗೆ ಗ್ಲೋಬಲ್‌ ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಸರ್ವೀಸಸ್‌ ಸಿಬಿಆರ್‌ಇ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಕಮರ್ಷಿಯಲ್‌ ಲೀಸಿಂಗ್‌ (ವಾಣಿಜ್ಯ ಗುತ್ತಿಗೆ) ಸುಧಾರಣೆ ಕಂಡಿದೆ. 2022ರ ಎರಡನೇ ತ್ರೈ ಮಾಸಿಕದಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಒಟ್ಟು 18.2 ಮಿಲಿಯನ್‌ ಚದರ ಅಡಿ ಆಫೀಸ್‌ ಜಾಗವನ್ನು ಭೋಗ್ಯಕ್ಕೆ ನೀಡಲಾಗಿದೆ. ಈ ಹಿಂದಿನ ತ್ರೈಮಾಸಿಕಗಳಿಗೆ ಹೋಲಿಸಿದರೆ ಶೇಕಡ 61ರಷ್ಟು ಜಿಗಿತ ಕಂಡಿದೆ ಎಂದು ಸಿಬಿಆರ್‌ಇ ತಿಳಿಸಿದೆ. ಬೆಂಗಳೂರು, ದೆಹಲಿ ಎನ್‌ಸಿಆರ್‌ ಹಾಗೂ ಹೈದರಾಬಾದ್‌ನಲ್ಲಿ ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ವಹಿವಾಟು ಪುಟಿದೆದ್ದಿದೆ ಎಂದಿದೆ.

ದೇಶದಲ್ಲಿ ನಡೆದ ಶೇಕಡ 80 ರಷ್ಟು ಕಮರ್ಷಿಯಲ್‌ ಸ್ಪೇಸ್‌ ಒಪ್ಪಂದಗಳು 10,000 ದಿಂದ 50,000 ಚದರ ಅಡಿಯ ಮಧ್ಯಮಗಾತ್ರದ ಡೀಲ್‌ಗಳಾಗಿವೆ. ದೊಡ್ಡ ಗಾತ್ರದ ಒಪ್ಪಂದಗಳೂ ನಡೆದಿವೆ. ಎಬಿಬಿ, ಅಮೆಜಾನ್‌, ಗೂಗಲ್‌ ಸೇರಿದಂತೆ ಅನೇಕ ದೊಡ್ಡ ಕಂಪನಿಗಳು ಇತ್ತೀಚೆಗೆ ದೊಡ್ಡ ಜಾಗಗಳನ್ನು ಗುತ್ತಿಗೆಗೆ ನೀಡಿವೆ.