ಬೆಂಗಳೂರು: ನವೆಂಬರ್ 08 ಮಂಗಳವಾರ ಗೌರಿ ಹುಣ್ಣಿಮೆ. ಮಿಗಿಲಾಗಿ ಗ್ರಸ್ತೋದಿತ ಚಂದ್ರಗ್ರಹಣ ಉಂಟಾಗಲಿದೆ.
ಗ್ರಸ್ತೋದಿತ ಚಂದ್ರಗ್ರಹಣ ಭಾರತೀಯ ಕಾಲಮಾನ ಮಧ್ಯಾಹ್ನ 2.55 ಕ್ಕೆ ಸ್ಪರ್ಶವಾಗಲಿದ್ದು, ಸಂಜೆ 4.30 ಕ್ಕೆ ಮಧ್ಯಕಾಲದ ವರೆಗೂ ಗ್ರಹಣ ಉಂಟಾಗಲಿದೆ. ಸಂಜೆ 6.20 ಕ್ಕೆ ಮೋಕ್ಷಕಾಲ ಅಂದರೆ ಗ್ರಹಣ ಮುಗಿಯಲಿದೆ.
ಈ ಗ್ರಹಣ ಕೆಲವು ರಾಶಿಯರಿಗೆ ದೋಷವುಂಟಮಾಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭರಣಿ ನಕ್ಷತ್ರ, ಮೇಷರಾಶಿ, ವೃಷಭ, ಕನ್ಯಾ ಹಾಗೂ ಮಕರ ರಾಶಿಯವರಿಗೆ ದೋಷವುಂಟಾಗಲಿದೆ.
ಮಿಥುನ, ಕರ್ಕ್, ವೃಚ್ಚಿಕ ಮತ್ತು ಕುಂಭ ರಾಶಿಯವರಿಗೆ ಶುಭ ಫಲ ನೀಡಲಿದೆ. ಅದೇ ರೀತಿ ಸಿಂಹರಾಶಿ, ತುಲಾ, ಧನಸ್ಸು, ಮೀನ ರಾಶಿಯವರಿಗೆ ಮಧ್ಯಮ ಫಲ ನೀಡಲಿದೆ. ಮೇಷ, ವೃಷಭ, ಕನ್ಯಾ, ಮಕರ ರಾಶಿಯವರಿಗೆ ಅಶುಭ ಫಲ ನೀಡಲಿದೆ.
ಗೌರಿ ಹುಣ್ಣಿಗೆ ಗ್ರಸ್ತೋದಿತ ಚಂದ್ರಗ್ರಹಣ ಕಾರಣದಿಂದ ಬಾಣಂತಿಯರು, ಗರ್ಭಿಣಿ ಸ್ತ್ರೀಯರು, ಚಿಕ್ಕ ಮಕ್ಕಳು, ವೃದ್ಧರು ಭೊಜನಾಧಿಗಳನ್ನು ಬೆಳಗ್ಗೆ ಮಗಿಸುವುದು ಸೂಕ್ತ. ಗ್ರಹಣ ಬಿಟ್ಟ ಬಳಿಕ ನದಿ ಜಲಾಶಯ ನೀರಿನ್ನು ತಂದು ಸ್ನಾನ ಮಾಡಿ ಪೂಜೆ ಮಾಡಿ ಆ ನಂತರ ಊಟೋಪಚಾರಗಳನ್ನು ಸ್ವೀಕರಿಸಬಹುದು ಎಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡಿದ್ದಾರೆ.


