Revenue Facts

UPI ರುಪೇ ಡೆಬಿಟ್ ಕಾರ್ಡ್ ವಹಿವಾಟು ಪ್ರೋತ್ಸಾಹಕ್ಕೆ 2600 ಕೋಟಿ ರೂ. ಸಹಾಯ ಧನ

UPI ರುಪೇ ಡೆಬಿಟ್ ಕಾರ್ಡ್ ವಹಿವಾಟು ಪ್ರೋತ್ಸಾಹಕ್ಕೆ 2600 ಕೋಟಿ ರೂ. ಸಹಾಯ ಧನ

UPI

ಬೆಂಗಳೂರು, ಡಿ. 11: ರುಪೇ ಡೆಬಿಟ್ ಕಾರ್ಡ್ ಮತ್ತು BHIM(UPI) ಕಡಿಮೆ ಮೌಲ್ಯದ ವಹಿವಾಟಿಗೆ ಪ್ರಚಾರದ ಪ್ರೋತ್ಸಾಹ ನೀಡಲು ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 2600 ಕೋಟಿ ರೂ. ಪ್ರೋತ್ಸಾಹ ಧನ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ರುಪೇ ಡೆಬಿಟ್ ಕಾರ್ಡ್ ಮತ್ತು BHIM(UPI)ಗಳ ಕಡಿಮೆ ಮೌಲ್ಯದ ವಹಿವಾಟುಗಳಿಗೆ ಪ್ರಚಾರದ ಪೋತ್ಸಾಹವನ್ನು ಅನುಮೋದಿಸಿತು. FY22-23ಕ್ಕೆ 2,600 ಕೋಟಿ ರೂ.ಗಳ ಪೋತ್ಸಹಧನವನ್ನು ಕ್ಯಾಬಿನೆಟ್ ಅನುಮೋದಿಸಿದೆ. ರುಪೇ ಡೆಬಿಟ್ ಕಾರ್ಡ್ ಗಳು ಮತ್ತು ಭೀಮ್ ಯುಪಿಐ ಬಳಕೆಗೆ ಪೋತ್ಸಹ ನೀಡಲಾಗುವುದು ಎಂದು ಕ್ಯಾಬಿನೆಟ್ ಹೇಳಿದೆ.

ಬಹು-ರಾಜ್ಯ ಸಹಕಾರ ಸಂಘಗಳ (MSCS) ಕಾಯಿದೆ- 2002 ರ ಅಡಿಯಲ್ಲಿ ರಾಷ್ಟ್ರಿಯ ಮಟ್ಟದ ಬಹು-ರಾಜ್ಯ ಸಹಕಾರ ರಫ್ತು ಸೊಸೈಟಿಯನ್ನು ಸ್ಥಾಪಿಸಲು ಕ್ಯಾಬಿನೆಟ್ ಇದೇ ವೇಳೆ ಅನುಮೋದನೆ ನೀಡಿದೆ. “ಇದು ಸಮಗ್ರ ಬೆಳವಣಿಗೆಯ ಮೂಲಕ ‘ಸಹಕಾರ್ ಸೇ ಸಮೃದ್ದಿ’ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಿ ಯಾದವ್ ಹೇಳಿದ್ದಾರೆ.

ಪ್ರಸ್ತುತ ಭಾರತವು ಇ-ಕಾಮರ್ಸ್ ಶಾಪಿಂಗ್, ಟ್ರಾವೆಲ್ ಮತ್ತು ಹಾಸ್ಪಿಟಾಲಿಟಿ ಮತ್ತು OTT ಯಾದ್ಯಂತ ಸುಮಾರು 350 ಮಿಲಿಯನ್ ಆನ್‌ಲೈನ್ ವಹಿವಾಟು ಬಳಕೆದಾರರನ್ನು ಹೊಂದಿದೆ. ಸಂಶೋಧನಾ ವರದಿಯ ಪ್ರಕಾರ 2030 ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.

ನವೆಂಬರ್‌ಗೆ ಹೋಲಿಸಿದರೆ ಒಟ್ಟು ವಹಿವಾಟುಗಳ ಸಂಖ್ಯೆಯಲ್ಲಿ 7% ಬೆಳವಣಿಗೆ ಕಂಡು ಬಂದಿದ್ದು ಒಟ್ಟು ವಹಿವಾಟುಗಳು 730 ಕೋಟಿಗಳಷ್ಟಿದೆ, ಒಟ್ಟು ರೂ 11.9 ಲಕ್ಷ ಕೋಟಿಗಳ ಮೌಲ್ಯ ತಿಂಗಳಿನಿಂದ ತಿಂಗಳ ಬೆಳವಣಿಗೆ 8% ವರ್ಷದಿಂದ ವರ್ಷಕ್ಕೆ ವಹಿವಾಟುಗಳ ಸಂಖ್ಯೆ ಮತ್ತು ಮೌಲ್ಯವು ಕ್ರಮವಾಗಿ 71% ಮತ್ತು 55% ಹೆಚ್ಚಾಗಿದೆ. ಅದೇ ರೀತಿ, ಡಿಸೆಂಬರ್ ಅಂಕಿಅಂಶಗಳು ಆಕ್ಟೋಬರ್ ಗಿಂತ ಹೆಚ್ಚಾಗಿದ್ದು, ಒಟ್ಟು ವಹಿವಾಟುಗಳ ಸಂಖ್ಯೆ 730 ಕೋಟಿ ಇತ್ತು- ಇದು ಮೊದಲ ಬಾರಿಗೆ 700 ಕೋಟಿ ದಾಟಿದೆ, ಒಟ್ಟು ಮೌಲ್ಯ 12.11 ಲಕ್ಷ ಕೋಟಿ ರೂ.2022 ರಲ್ಲಿ ಯುಪಿಐ ಪ್ಲಾಟ್ ಫಾರ್ಮ್ ರೂ 125 ಲಕ್ಷ ಕೋಟಿಗೆ 7,404 ಕೋಟಿ ವಹಿವಾಟುಗಳನ್ನು ಕಂಡಿತ್ತು ಎಂಬುದು ಗಮನಾರ್ಹ.

Exit mobile version