Revenue Facts

ಚುನಾವಣಾ ಕಣದಲ್ಲಿ ಕುರುಡು ಕಾಂಚಾಣ : 100 ಕೋಟಿ ಕ್ಲಬ್ ಸೇರಿದ ಚುನಾವಣಾ ಅಕ್ರಮ.

ಚುನಾವಣಾ ಕಣದಲ್ಲಿ ಕುರುಡು ಕಾಂಚಾಣ : 100 ಕೋಟಿ ಕ್ಲಬ್ ಸೇರಿದ ಚುನಾವಣಾ ಅಕ್ರಮ.

ಬೆಂಗಳೂರು ಏ 10:ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ ಘೋಷಣೆಯಾದಾಗಿನಿಂದ ವಶಪಡಿಸಿಕೊಂಡ ನಗದು, ಮದ್ಯ ಮತ್ತು ಉಚಿತ ವಸ್ತುಗಳ ಮೌಲ್ಯವು ಭಾನುವಾರದವರೆಗೆ 100 ಕೋಟಿ ರೂ.ಗೆ ಸಮೀಪಿಸಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಪ್ರಕರಣಗಳ ಸಂಖ್ಯೆ 792 ಕ್ಕೆ ತಲುಪಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ಮಾರ್ಚ್ 29 ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಾಗಿನಿಂದ 99.18 ಕೋಟಿ ಮೌಲ್ಯದ ವಶಪಡಿಸಿಕೊಳ್ಳಲಾಗಿದೆ ಎಂದು ಸಿಇಒ ಹೇಳಿದರು.ಎಂಸಿಸಿ ಜಾರಿಯಾದ ಕೇವಲ 10 ದಿನಗಳಲ್ಲಿ 36.8 ಕೋಟಿ ನಗದು, 15.46 ಕೋಟಿ ಮೌಲ್ಯದ ಉಚಿತ ವಸ್ತುಗಳು, 30 ಕೋಟಿ ಮೌಲ್ಯದ 5.2 ಲಕ್ಷ ಲೀಟರ್ ಮದ್ಯ, 15 ಕೋಟಿ ಮೌಲ್ಯದ ಚಿನ್ನ, 2.5 ಕೋಟಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾನುವಾರ ಯಾದಗಿರಿ ಜಿಲ್ಲೆಯಲ್ಲಿ 34 ಲಕ್ಷ ನಗದು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರದಲ್ಲಿ 21 ಲಕ್ಷ ಮೌಲ್ಯದ 56 ಟೆಲಿವಿಷನ್ಗಳನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡ ವಶಪಡಿಸಿಕೊಂಡಿದೆ. 1.62 ಕೋಟಿ ಮೌಲ್ಯದ 54,282 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

Exit mobile version