Revenue Facts

ವಿಳಂಬ ತೆರಿಗೆ ರಿಟರ್ನಸ್ ಸಲ್ಲಿಕೆ ಮಾಡುವವರು ಎಷ್ಟು ದಂಡ ಪಾವತಿಸಬೇಕು..?

ಬೆಂಗಳೂರು, ಆ. 22 : ಆದಾಯ ತೆರಿಗೆ ರಿಟರ್ನ್ಸ್ ಗೆ ಅರ್ಜಿ ಸಲ್ಲಿಸಲು ಕಳೆದ ತಿಂಗಳೇ ಕೊನೆಯಾಗಿತ್ತು. ಆದರೂ ಕೂಡ ಕೆಲವರು ಇನ್ನೂ ಐಟಿಆರ್ ಫೈಲ್ ಮಾಡಿಲ್ಲ. ಅಂತಹವರು ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ. ಬಿಲೇಟೆಡ್ ಐಟಿಆರ್ ಫೈಲ್ ಮಾಡುವುದು ಹೇಗೆ..? ಈಗ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಬೇರೆ ಅರ್ಜಿ ಇದೆಯಾ.? ಇದಕ್ಕೆ ಯಾವ ದಾಖಲೆಗಳನ್ನು ನೀಡಬೇಕು.? ಹೀಗೆ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಮೂಡಿರುತ್ತದೆ.

ಐಟಿಆರ್ ಫೈಲ್ ಮಾಡುವುದು ಮರೆತವರು ಈಗಲೂ ಅರ್ಜಿ ಸಲ್ಲಿಸಬಹುದು. ಆದರೆ, ಅದಕ್ಕೆ ದಂಡವನ್ನು ಸಹ ಪಾವತಿಸಬೇಕಾಗುತ್ತದೆ. ಐದು ಲಕ್ಷ ರೂಪಾಯಿ ಒಳಗೆ ಆದಾಯ ಪಡೆಯುವವರು ವಿಳಂಬ ತೆರಿಗೆ ಅರ್ಜಿ ಸಲ್ಲಿಸಲು ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕು. ಇನ್ನು ಐದು ಲಕ್ಷಕ್ಕೂ ಅಧಿಕ ಆದಾಯ ಉಳ್ಳವರು ಐದು ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ದಂಡ ಪಾವತಿ ಮಾಡಿ ವಿಳಂಬ ತೆರಿಗೆ ಅರ್ಜಿ ಅನ್ನು ಸಲ್ಲಿಸಬೇಕು.

ತಡವಾದ ITR ಅನ್ನು ಸಲ್ಲಿಸುವ ಮೊದಲು ತೆರಿಗೆದಾರರು ಅನ್ವಯಿಸುವ ತಡವಾದ ದಂಡ ಅಥವಾ ದಂಡವನ್ನು ಠೇವಣಿ ಮಾಡಬೇಕು. ಚಲನ್ ಸಂಖ್ಯೆ 280 ಬಳಸಿಕೊಂಡು ತಡವಾಗಿ ITR ಅನ್ನು ಸಲ್ಲಿಸಲು ವಿಳಂಬ ಶುಲ್ಕ/ದಂಡವನ್ನು ಪಾವತಿಸಲಾಗುತ್ತದೆ. ತೆರಿಗೆದಾರರು NSDL ನ ವೆಬ್‌ಸೈಟ್‌ನಲ್ಲಿ ತಡವಾದ ದಂಡದ ಪಾವತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ತೆರಿಗೆದಾರರು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ತಡವಾದ ದಂಡವನ್ನು ಠೇವಣಿ ಮಾಡಬಹುದು.

 

ಐಟಿಆರ್ ಫೈಲ್ ಮಾಡುವ ಮುನ್ನ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್ 16, 26AS, ಎಐಎಸ್/ಟಿಐಎಸ್, ಬ್ಯಾಂಕ್ ಸ್ಟೇಟ್ ಮೆಂಟ್, ಹೂಡಿಕೆಯ ದಾಖಲೆಗಳು, ಬಾಡಿಗೆಯ ರಶೀದಿ ಹೀಗೆ ಆದಾಯದ ಪ್ರತಿಯೊಂದು ದಾಖಲೆಗಳನ್ನು ಜೊತೆಗಿಟ್ಟುಕೊಳ್ಳಿ. ನಿಮಗೆ ಅನ್ವಯವಾಗುವ ಫಾರ್ಮ್ ಅನ್ನು ಭರ್ತಿ ಮಾಡಿ. ಐಟಿ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ರೂ.ವರೆಗಿನ ಕಡಿತ ಮಾಡಬಹುದು.

ಲೈಫ್ ಇನ್ಶೂರೆನ್ಸ್ ಪ್ರೀಮಿಯಂ, ಪ್ರಾವಿಡೆಂಟ್ ಫಂಡ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ವಸತಿ ಸಾಲದ ಪ್ರಿನ್ಸಿಪಾಲ್ ಇತ್ಯಾದಿಗಳಿಗೆ ಮಾಡಿದ ಪಾವತಿಗಳಿಂದಾಗಿ 1,50,000 ರೂ. ಉಳಿತಾಯ ಮಾಡಬಹುದು. ಇದರಿಂದ ಐಟಿಆರ್ ಫೈಲಿಂಗ್ ಮಾಡಿ ರಿಯಾಯಿತಿ ಹಾಗೂ ವಿನಾಯಿತಿಯನ್ನು ಕೂಡ ಪಡೆಯಬಹುದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ನೀವೇ ಐಟಿಆರ್ ಅನ್ನು ಫೈಲ್ ಮಾಡಬಹುದು. ಇನ್ನು ತಡವಾಗಿ ಐಟಿಆರ್ ಸಲ್ಲಿಸಲು ಐದು ಲಕ್ಷದವರೆಗೂ ಆದಾಯ ಇರುವವರು ಒಂದು ಸಾವಿರ ಹಾಗೂ ಅದಕ್ಕಿಂತಲೂ ಅಧಿಕ ಆದಾಯ ಹೊಂದಿರುವವರು ಐದು ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.

Exit mobile version