50 ಸಾವಿರ ಆಸ್ತಿಗಳ ಪೈಕಿ ಖಾಸಗಿ ಶಿಕ್ಷಣ ಸಂಸ್ಥೆಗಳದ್ದೇ ಹೆಚ್ಚು. ಶೇ.25 ಇರುವ ಸೇವಾ ಶುಲ್ಕವನ್ನು ಶೇ. 50ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಅಯುಕ್ತ ದೀಪಕ್ ಹೇಳಿದ್ದಾರೆ.
ಬೆಂಗಳೂರು: ಆಸ್ತಿ ತೆರಿಗೆಯಲ್ಲಿ (Property Tax) ವಿನಾಯ್ತಿ ಪಡೆಯುತ್ತಿದ್ದ ಮಾಲೀಕರಿಗೆ ಶಾಕ್ ನೀಡಲು ಬಿಬಿಎಂಪಿ (BBMP) ತಯಾರಾಗಿದೆ. ಇಷ್ಟು ದಿನ ಪಾಲಿಕೆಯಿಂದ ತೆರಿಗೆ ವಿನಾಯಿತಿ (Tax Relaxation) ಪಡೆಯುತ್ತಿದ್ದ ಕಟ್ಟಡ ಮಾಲೀಕರಿಗೆ ತೆರಿಗೆ ಶಾಕ್ ನೀಡಲು ಪಾಲಿಕೆ ನಿರ್ಧಾರ ಮಾಡಿದೆ.
ವಿನಾಯಿತಿ ಪಡೆಯುತ್ತಿದ್ದ ಕಟ್ಟಡಗಳಿಗೆ ತೆರಿಗೆ ಹೆಚ್ಚಳಕ್ಕೆ ಪಾಲಿಕೆ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿ ಯಲ್ಲಿ ಸರ್ಕಾರದ ಕಟ್ಟಡಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸೇವೆ ನೀಡುತ್ತಿರುವ ಸಂಸ್ಥೆಗಳ ಆಸ್ತಿಗಳಿಗೆ ಆಸ್ತಿ ತೆರಿಗೆಯಲ್ಲಿ ಶೇ.75ರಷ್ಟು ವಿನಾಯ್ತಿ ಪಡೆದುಕೊಳ್ಳುತ್ತಿದ್ದವು. ಈ ಸಂಸ್ಥೆಗಳಿಂದ ಆಸ್ತಿ ತೆರಿಗೆಯನ್ನು ಶೇ.100ರಷ್ಟು ವಸೂಲಿ ಮಾಡುತ್ತಿರಲಿಲ್ಲ. ತೆರಿಗೆಯ ಶೇ. 25 ಮೊತ್ತವನ್ನು ಸೇವಾ ಶುಲ್ಕ ಪಡೆಯಲಾಗುತ್ತಿತ್ತು.
ತೆರಿಗೆ ಮೊತ್ತದ ಶೇ. 75 ಹಣವನ್ನು ರಿಯಾಯಿತಿ ನೀಡಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಾಯ್ದೆಯಲ್ಲೂ ಅವಕಾಶ ಕಲ್ಪಿಸಲಾಗಿತ್ತು. ಆದ್ರೀಗ ಈ ಸೇವಾ ತೆರಿಗೆಯನ್ನು ಶೇ.50ಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಶೇಷ ಅಯುಕ್ತ ದೀಪಕ್ ತಿಳಿಸಿದ್ದಾರೆ.ಬಿಬಿಎಂಪಿ ವ್ಯಾಪ್ತಿಗೆ ಸೇರಿದ 50 ಸಾವಿರಕ್ಕೂ ಅಧಿಕ ಕಟ್ಟಡಗಳು ತೆರಿಗೆ ವಿನಾಯ್ತಿ ಪಡೆದುಕೊಂಡಿವೆ.
ಪ್ರತಿ ವರ್ಷ ಸರಾಸರಿ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ. ಈಗಾಗಲೆ ಲೆಕ್ಕ ಹಾಕಿರುವ ಆಸ್ತಿಗಳ ಪೈಕಿ 50 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿಗೆ ತೆರಿಗೆಯಲ್ಲಿ ವಿನಾಯಿತಿ ಇದೆ.
ಶೇ.50ಕ್ಕೆ ಹೆಚ್ಚಿಸುವ ಪ್ರಸ್ತಾವನೆ
ಪ್ರಮುಖವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಸ್ತಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ವಿನಾಯಿತಿ ಪಡೆದುಕೊಂಡಿವೆ. 50 ಸಾವಿರ ಆಸ್ತಿಗಳ ಪೈಕಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಹೆಚ್ಚು. ಶೇ.25 ಇರುವ ಸೇವಾ ಶುಲ್ಕವನ್ನು ಶೇ. 50ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಅಯುಕ್ತ ದೀಪಕ್ ಹೇಳಿದ್ದಾರೆ