Revenue Facts

UPI ಮೂಲಕ ಬ್ಯಾಂಕ್‌ ಸಾಲ,ಬ್ಯಾಂಕ್ ಸಾಲ ಪಡೆಯುವವರಿಗೆ ಆರ್​ಬಿಐ ಸಿಹಿಸುದ್ದಿ,

RBI UPI ಬಳಕೆದಾರರಿಗೆ ಶುಭ ಸುದ್ದಿ ನೀಡಿದೆ.ಇದರ ಮೂಲಕ ಬಳಕೆದಾರರು ಖಾತೆಯಲ್ಲಿ ಹಣವಿಲ್ಲದಿದ್ದರೂ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ UPI ಸಾಲದ ಸೌಲಭ್ಯ ನೀಡಲು RBI ನಿರ್ದೇಶಿಸಿದ್ದು, ಇದು ಸಿಬಿಲ್ ಸ್ಕೋರ್ ಆಧಾರಿತ ಪ್ರೀ-ಸ್ಯಾಂಕ್ಷನ್ ಕ್ರೆಡಿಟ್ ಲೈನ್ಸ್ ಸೇವೆಯಡಿಯಲ್ಲಿ ಬರಲಿದೆ. ಪ್ರಸ್ತುತ SB ಖಾತೆಯ ಮೂಲಕ UPI ವಹಿವಾಟು ನಡೆಯುತ್ತಿದೆ. ಆದರೆ ಸಾಲದ ವ್ಯವಸ್ಥೆ ಜಾರಿಯಾದರೆ, ಆಯಾ ಪೇಮೆಂಟ್ ವ್ಯಾಲೆಟ್‌ಗೆ ಬ್ಯಾಂಕ್‌ನಿಂದ ಸಾಲದ ಹಣ ಸೇರಿ ಅಲ್ಲಿಂದ ಪಾವತಿ ಸಾಧ್ಯವಾಗಲಿದೆ. ಸಾಲ ನೀಡುವ ನಿರ್ಧಾರ ಆಯಾ ಬ್ಯಾಂಕ್‌ನದ್ದಾಗಿರಲಿದೆ.ಇನ್ನು ಯಾವುದೇ ಬ್ಯಾಂಕ್ ಗ್ರಾಹಕರು ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ UPI ಮಾಡಬಹುದು. UPI Network ನ ಮೂಲಕ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಗಳನ್ನೂ ವರ್ಗಾಯಿಸಲು RBI ಬ್ಯಾಂಕ್ ಗಳಿಗೆ ಅವಕಾಶ ನೀಡುತ್ತಿದೆ. ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿಲ್ಲದಿದ್ದರು ಖಾತೆದಾರರು ಮಿತಿಯ ವರೆಗೆ UPI ಮೂಲಕ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ.

ಆರ್‌ಬಿಐನ ಈ ನಿರ್ಧಾರದ ಮುಖ್ಯ ಉದ್ದೇಶ ಯುಪಿಐ ವ್ಯಾಪ್ತಿಯನ್ನು ಹೆಚ್ಚಿಸುವುದಾಗಿದೆ.ವೈಯಕ್ತಿಕ ಗ್ರಾಹಕರ ಪೂರ್ವಾನುಮತಿಯೊಂದಿಗೆ ನಿಗದಿತ ವಾಣಿಜ್ಯ ಬ್ಯಾಂಕ್‌ನಿಂದ ಪೂರ್ವ ಅನುಮೋದನೆ ಸಾಲ ಸೌಲಭ್ಯದ ಮೂಲಕ ಪಾವತಿಯನ್ನು ಅನುಮತಿಸಲಾಗುವುದು ಎಂದು ಆರ್‌ಬಿಐ ಹೇಳುತ್ತದೆ.UPI ಯ ಹೊಸ ಸೌಲಭ್ಯವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಆದರೆ, ಕಾರ್ಡ್ ಇಲ್ಲದೆಯೇ ವಹಿವಾಟು ನಡೆಸಬಹುದು. ಸೇವೆಯನ್ನು ಪಡೆಯಲು ಒಬ್ಬರು ಅರ್ಜಿ ಸಲ್ಲಿಸಬೇಕು. ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅನುಮೋದಿತ ಸಾಲವನ್ನು ಅನುಮೋದಿಸಲಾಗುತ್ತದೆ.ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಕಾರ, ಸೆಪ್ಟೆಂಬರ್ 1 ರಂದು, ಯುಪಿಐ ಆಗಸ್ಟ್ನಲ್ಲಿ ಮೊದಲ ಬಾರಿಗೆ ತಿಂಗಳಲ್ಲಿ 10 ಬಿಲಿಯನ್ ವಹಿವಾಟುಗಳನ್ನು ದಾಟಿದೆ. ಆಗಸ್ಟ್ 30 ರ ಹೊತ್ತಿಗೆ, ಯುಪಿಐ ತಿಂಗಳಲ್ಲಿ 10.24 ಬಿಲಿಯನ್ ವಹಿವಾಟುಗಳನ್ನು ವರದಿ ಮಾಡಿದೆ,

Exit mobile version