Revenue Facts

ಇಂದಿನಿಂದ ಪೇಟಿಎಂಗೆ ನಿರ್ಬಂಧ: ಏನೆಲ್ಲಾ ಬಂದ್‌ ಆಗಲಿದೆ ಗೊತ್ತೇ?

ಇಂದಿನಿಂದ ಪೇಟಿಎಂಗೆ ನಿರ್ಬಂಧ: ಏನೆಲ್ಲಾ ಬಂದ್‌ ಆಗಲಿದೆ ಗೊತ್ತೇ?

ನವದೆಹಲಿ;ಇಂದಿನಿಂದ ಪೇಟಿಎಂ(Paytm) ಪೇಮೆಂಟ್ಸ್ ಬ್ಯಾಂಕ್ ಸೇವೆ ಸಂಪೂರ್ಣ ಬಂದ್ ಆಗಲಿದೆ. ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಎಸಗಿದ್ದಕ್ಕಾಗಿ ಆರ್‌ಬಿಐ ನಿಷೇಧ ಹೇರಿದ್ದು, ಇಂದಿನಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ. ಆದರೂ, ಪೇಟಿಎಂ(Paytm) ಪೇಮೆಂಟ್ಸ್ ಬ್ಯಾಂಕ್ ಖಾತೆ(Payment bank account) ಮತ್ತು ಫಾಸ್ಟ್‌ಟ್ಯಾಗ್(Fasttag) ಸೇರಿದಂತೆ ವಿವಿಧ ವ್ಯಾಲೆಟ್‌ಗಳಲ್ಲಿ ಹಣವಿದ್ದರೆ, ಅದು ಮುಗಿಯುವವರೆಗೂ ಅದನ್ನು ಬಳಸಬಹುದಾಗಿದೆ. ಆದರೆ, ಮತ್ತೆ ರಿಚಾರ್ಜ್ ಮಾಡಲು ನಿಮಗೆ ಅವಕಾಶವಿಲ್ಲ.ಈ ನಿರ್ಬಂಧದಿಂದಾಗಿ ಪೇಟಿಎಂ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದೆ. ಇನ್ನು, ಇಂದಿನಿಂದ ನಿರ್ಬಂಧ ಜಾರಿಯಾದರೆ ಗ್ರಾಹಕರಿಗೆ ಪೇಟಿಎಂ ಸೇವೆಗಳಲ್ಲಿ ಕೊಂಚ ವ್ಯತ್ಯಯ ಆಗಲಿದೆ,ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ.ಬ್ಯಾಂಕಿಂಗ್ ಲೈಸೆನ್ಸ್ ಪಡೆದ ಸಂಸ್ಥೆ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಹೆಚ್ಚಿನ ವ್ಯವಹಾರ ಪೇಟಿಎಂಗೆ ಸೀಮಿತವಾಗಿದೆ.

Exit mobile version