ಬೆಂಗಳೂರು, ಜೂ. 27 : ಆಗೆಲ್ಲಾ ಸಾಲ ಪಡೆಯುವುದೆಂದರೆ ದೊಡ್ಡ ತಲೆ ನೋವಾಗಿತ್ತು. ಕೈ ಸಾಲಗಳು ಬಡ್ಡಿ ಜಾಸ್ತಿ , ಬ್ಯಾಂಕ್ ಸಾಲ ಬೇಕೆಂದರೆ, ಹತ್ತಾರು ಬಾರಿ ಬ್ಯಾಂಕಿಗೂ ಮನೆಗೂ ಅಲೆದಾಡಬೇಕಿತ್ತು. ಇದರಿಂದ ಮನೆ ಕಟ್ಟುವುದೂ ಸಾಕು, ಅಲೆದಾಡುವುದು ಸಾಕು ಎನಿಸುತ್ತಿತ್ತು. ಆದರೆ ಈಗ ಹಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ನೀಮದ ಲೋನ್ ಪಡೆಯಬಹುದು. ಬ್ಯಾಂಕ್ ಗಳು ಸಾಲ ಕೊಡಲು ಸಿದ್ಧರಿದ್ದಾರೆ. ಸುಲಭವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆದು ಆಸೆ ಗಳನ್ನು ನೆರವೇರಿಸಿಕೊಳ್ಳಬಹುದು.
ವ್ಯಕ್ತಿಯ ಕ್ರೆಡಿಟ್ ಸ್ಕೋರ್, ಸಂಬಳ, ವಹಿವಾಟನ್ನು ಗಮನಿಸುವ ಬ್ಯಾಂಕ್ ಗಳು, ಆ ವ್ಯಕ್ತಿ ಸಾಲ ಪಡೆದರೆ, ಅದನ್ನು ಮರುಪಾವತಿಯನ್ನು ತಪ್ಪದೇ ಮಾಡುತ್ತಾರಾ ಎಂಬ ಸಾಮರ್ಥ್ಯವನ್ನು ನೋಡಿ ಸಾಲ ಕೊಡಲು ಮುಂದೆ ಬರುತ್ತವೆ. ಅದರಲ್ಲೂ ಈಗ ಬ್ಯಾಂಕ್ ಗೆ ಹೋಗಿಯೇ ಸಾಲ ಪಡೆಯಬೇಕು ಎಂಬ ತಲೆನೋವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೇ ಸಾಲವನ್ನು ಪಡೆಯಬಹುದು. ಕಾರು ಸಾಲು ಹಾಗೂ ಗೃಹ ಸಾಲಗಳು ವಯಕ್ತಿಕ ಸಾಲಕ್ಕಿಂತಲೂ ಸುಲಭವಾಗಿ ಸಿಗುತ್ತದೆ.
ಆದರೆ, ಗೃಹಸಾಲ ನಿಮಗೆ ಸಿಗುತ್ತದೋ ಇಲ್ಲವೋ ಎಂಬುದನ್ನು ನೀವೇ ತಿಳಿದುಕೊಳ್ಳುವುದು ಈಗ ಇನ್ನೂ ಸುಲಭವಾಗಿದೆ. ನಿಮ್ಮ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ನೀವೇ ಎಚ್ಚರವಹಿಸಿ. ನೀವು ಗೃಹ ಸಾಲವನ್ನು ಪಡೆದರೆ, ಅದನ್ನು ಎಷ್ಟು ವರ್ಷದಲ್ಲಿ ತೀರಿಸಲಾಗುತ್ತದೆ ಎಂದಬುದನ್ನು ಅರ್ಥ ಮಾಡಿಕೊಳ್ಳಿ. ಗೃಹ ಸಾಲವನ್ನು ಪಡೆಯುವ ಮುನ್ನ ಮುಂದೆ ನೀವು ಎದುರಿಸಬೇಕಾದ ಒಂದಷ್ಟು ಸವಾಲುಗಳನ್ನು ನಿಮಗೆ ನೀವೇ ಪ್ರಶ್ಷಿಸಿಕೊಳ್ಳಿ. ಇದು ನಿಮಗೆ ಸಾಲ ಪಡೆಯಬೇಕಾ..? ಬೇಡವಾ..? ಇದಕ್ಕಾಗಿ ತಮ್ಮ ಆರ್ಥಿಕ ಸ್ಥಿತಿಯನ್ನು ಯಾವ ರೀತಿ ವೃದ್ಧಿಸಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಮೊದಲು ನಿಮಗೆ ನೀವು ಪ್ರಮುಖವಾದ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಳ್ಳಿ. ಮೊದಲನೇಯ ಪ್ರಶ್ನೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದೆಯಾ ಎಂದು. ನಿಮ್ಮ ಕ್ರೆಡಿಟ್ ಸ್ಕೋರ್ 750 ರಿಂದ 900 ವರೆಗೂ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ. ಈಗ ಕ್ರೆಡಿಟ್ ಸ್ಕೋರ್ ಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಆನ್ ಲೈನ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿ. ನಿಮ್ಮ ಸ್ಕೋರ್ ಕಡಿಮೆ ಇದ್ದರೆ, ಅದನ್ನು ಮೊದಲು ಹೆಚ್ಚಿಸಿಕೊಳ್ಳುವತ್ತ ಪ್ರಯತ್ನಿಸಿ.
ಎರಡನೇಯ ಪ್ರಶ್ನೆಯಾಗಿ ನೀವು ಡೌನ್ ಪೇಮೆಂಟ್ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿಕೊಳ್ಳಿ. ಗೃಹ ಸಾಲ ಪಡೆಯುವ ಮೊದಲು ನಿಮಗೆ ಗೃಹ ಖರೀದಿಗೆ ಶೇ.10 ರಿಂದ 25ರಷ್ಟು ಡೌನ್ ಪೇಮೆಂಟ್ ಮಾಡಲು ಸಾಧ್ಯವಿದೆಯಾ. ನಿಮ್ಮ ಬಳಿ ಅಷ್ಟು ಹಣವಿದೆಯಾ ಎಂದು ತಿಳಿದುಕೊಳ್ಳಿ. ಇಲ್ಲದಿದ್ದರೆ, ಗೃಹಸಾಲ ಪಡೆಯಲು ಸಾಧ್ಯವಿಲ್ಲ. ಅಲ್ಲದೇ, ನಿಮ್ಮ ಗೃಹಸಾಲದ ಮೇಲೆ ಬಡ್ಡೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸುಮ್ಮನೆ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಸೇಫ್ ಆಗಿರುವುದು ಸೂಕ್ತ.
ಸಾಲವನ್ನು ಹಿಂದಿರುಗಿಸುವ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿಕೊಂಡರೆ ಗೃಹಸಾಲ ಬೇಕಾ ಬೇಡವಾ ಎಂದು ಯೋಚಿಸಬಹುದು. ನೀವು ಗೃಹಸಾಲ ಪಡೆದರೆ, ಇಎಂಐನ ಶೇ.60 ರಷ್ಟು ತಿಂಗಳ ಆದಾಯವಿದೆಯಾ ಎಂದು ಬ್ಯಾಂಕ್ ಚೆಕ್ ಮಾಡುತ್ತದೆ. ಇಲ್ಲವಾದರೆ, ಗೃಹಸಾಲ ಕೊಡುವುದು ಕಷ್ಟವಾಗುತ್ತೆ. ಇನ್ನು ನಿಮ್ಮ ತುರ್ತು ಸಂದರ್ಭಗಳ ಬಗ್ಗೆಯೂ ಯೋಚಿಸಿ, ಸಾಲದ ಹೊರೆ ಇರುವ ಸಂದರ್ಭದಲ್ಲಿ, ಅನಾರೋಗ್ಯ, ಆಕಸ್ಮಿಕ ಖರ್ಚುಗಳ ಬಗ್ಗೆ ಯೋಚಿಸಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಕಷ್ಟ ಪಡಬೇಕಾಗುತ್ತದೆ.