Revenue Facts

ಐಟಿಆರ್ ಸಲ್ಲಿಸಿದ ಬಳಿಕ ರಿಫಂಡ್ ಪಡೆಯಲು ಎಷ್ಟು ದಿನ ಬೇಕು..?

ಬೆಂಗಳೂರು, ಜು. 08 : ಆದಾಯ ತೆರಿಗೆಯನ್ನು ಕಟ್ಟುವಾಗ ಕೆಲವೊಮ್ಮೆ ನಮಗೆ ಅರಿವಿಲ್ಲದೇ, ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿರುತ್ತೀವಿ. ಅಂತಹ ಸಂದರ್ಭದಲ್ಲಿ ರೀಫಂಡ್ ಪಡೆಯಲು ಆದಾಯ ತೆರಿಗೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಆದಾಯ ತೆರಿಗೆ ಕಟ್ಟುವುದು ಹೇಗೆ, ರಿಟರ್ನ್ ಫೈಲಿಂಗ್ ಬಗ್ಗೆ ನಿಮಗೆ ತಿಳಿದಿದೆ. ಆದರೆ, ರೀಫಂಡ್ ಪಡೆಯುವುದು ಹೇಗೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.

ಅಕಸ್ಮಾತ್ ಆಗಿ ಆದಾಯ ತೆರಿಗೆಯನ್ನು ಹೆಚ್ಚಿನ ಮೊತ್ತ ಪಾವತಿಸಿದ್ರೆ, ವಾಪಸ್ ಪಡೆಯಲು ಹೀಗೆ ಮಾಡಿದೆ. ನೀವು ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಅದನ್ನು ಪರಿಶೀಲಿಸಿ ರೀಫಂಡ್ ಅನ್ನು ನೀಡಲಾಗುತ್ತದೆ. ಇದಕ್ಕೆ ಹೆಚ್ಚು ಕಡಿಮೆ 20 ರಿಂದ 45 ದಿನಗಳು ತೆಗೆದುಕೊಳ್ಳಲಾಗುತ್ತದೆ. 2022-23ನೇ ಸಾಲಿನಲ್ಲಿ ಐಟಿಆರ್ ಫೈಲ್ ಮಾಡಿದ ಮೊದಲ 30 ದಿನಗಳಲ್ಲಿ ರಿಫಂಡ್ ಸಿಕಿತ್ತು. ಅದೂಕೂಡ ಶೇ.80ರಷ್ಟು ರೀಫಂಡ್ ನೀಡಲಾಗಿತ್ತು. ಇನ್ನು ರೀಫಂಡ್ ಪಡೆಯಲು ಅರ್ಜಿ ಹಾಕಿದ್ದಲ್ಲಿ ಅದರ ಬಗ್ಗೆ ಸ್ಟೇಟಸ್ ಅನ್ನು ತಿಳಿಯಬಹುದು. ಆದಾಯ ತೆರಿಗೆ ಪೋರ್ಟಲ್ ಅಥವಾ ಎನ್ ಎಸ್ ಡಿಎಲ್ ವೆಬ್ ಸೈಟ್ ಗೆ ಭೇಟಿ ಕೊಡಿ. ಅಂದರೆ, https://www.incometax.gov.in/iec/foportal/ ಪೋರ್ಟಲ್ ಗೆ ಭೇಟಿ ನೀಡಿ. ಮೊಬೈಲ್ ಸಂಖ್ಯೆ ಹಾಗೂ ಪ್ಯಾನ್ ಸಂಖ್ಯೆಯನ್ನು ಹಾಕಿ, ಪಾಸ್ ವರ್ಡ್ ಅನ್ನು ನಮೂದಿಸಿ.

ನಂತರ ಕ್ಯಾಪ್ಚ ಕೋಡ್ ಬಳಸಿ ನಿಮ್ಮ ಖಾತೆಗೆ ಲಾಗಿ ಇನ್ ಆಗಿ. e-file ಆಯ್ಕೆಯನ್ನು ಆರಿಸಿಕೊಳ್ಳಿ. ಆ ಬಳಿಕ Income tax returns ಆರಿಸಿ. View Filed returns ಆಯ್ಕೆ ಮಾಡಿ. ಆನ್ಯುವಲ್ ಇಯರ್ ಅನ್ನು ಆರಿಸಿಕೊಳ್ಳಿ. 2022-23ನೇ ಆರ್ಥಿಕ ಸಾಲಿಗೆ 2023-24 ವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ View Details ಅನ್ನು ಆಯ್ಕೆ ಮಾಡಿ. ಆಗ ನಿಮಗೆ ರೀಫಂಡ್ ಸ್ಟೇಟಸ್ ತಿಳಿಯುತ್ತದೆ.

Exit mobile version