Revenue Facts

ಮತ್ತೊಂದು ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್..!!

ಬೆಂಗಳೂರು, ಜು. 21 : ಈಗಾಗಲೇ ಭಾರತದ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಅನ್ನು ಕೂಡ ಲಿಂಕ್ ಮಾಡಬೇಕು ಎಂದು ಹೇಳಲಾಗಿತ್ತು. ಇದೀಗ, ಮತ್ತೊಂದು ದಾಖಲೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಭ್ರಷ್ಟರಿಗೆ ಸಮಸ್ಯೆ ಆಗುವುದು ಗ್ಯಾರೆಂಟಿ ಆಗಿದೆ. ಯಾವ ದಾಖಲೆಗೆ ಅಂತ ಯೋಚಿಸುವ ಬದಲು ಮುಂದೆ ಓದಿ.

ಇನ್ಮುಂದೆ ಆಸ್ತಿ ದಾಖಲೆಗಳಿಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಎಂದು ಯೋಚಿಸಲಾಗುತ್ತಿದೆ. ಈಗಾಗಲೇ, ಸಿಮ್ ಕಾರ್ಡ್, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗಿದೆ. ಇದೀಗ ಆಸ್ತಿ ದಾಖಲೆಗಳನ್ನು ಆಧಾರ್ಗೆ ಲಿಂಕ್ ಮಾಡಬೇಕು ಎಂಬ ಬೇಡಿಕೆಯಿದೆ. ಇದರಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ಬೇನಾಮಿ ಆಸ್ತಿ ವಹಿವಾಟು, ಅಕ್ರಮ ಆಸ್ತಿ ನಿಲ್ಲುತ್ತದೆ. ಈ ಸಂಬಂಧ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವಿಚಾರದಲ್ಲಿ ಸರ್ಕಾರದಿಂದ ಉತ್ತರವನ್ನು ಕೇಳಿದೆ. ಆಸ್ತಿ ದಾಖಲೆಗಳನ್ನು ಆಧಾರ್‌ ಗೆ ಲಿಂಕ್ ಮಾಡಿದರೆ ಅಂತಹ ಪ್ರಕರಣಗಳನ್ನು ಸುಲಭವಾಗಿ ಹಿಡಿಯಬಹುದು. ಈ ಅರ್ಜಿಗೆ ಸಂಬಂಧಿಸಿದಂತೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ 4 ವಾರಗಳ ಕಾಲಾವಕಾಶವನ್ನು ನೀಡಿದೆ. ಈ ಕುರಿತು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ಸೆಪ್ಟೆಂಬರ್ 5 ರಂದು ನಡೆಯಲಿದೆ. ಸರ್ಕಾರ ಏನಾದರೂ ಆಧಾರ್ ಕಾರ್ಡ್ ಅನ್ನು ಆಸ್ತಿ ದಾಖಲೆಗಳಿಗೆ ಲಿಂಕ್ ಮಾಡಲು ಒಪ್ಪಿದರೆ ಅಲ್ಲಿಗೆ, ಅಕ್ರಮ ಆಸ್ತಿ ಹೊಂದಿರುವವರಿಗೆ ಚಳಿ ಜ್ವರ ಶುರುವಾಗುವುದಂತೂ ಗ್ಯಾರೆಂಟಿ ಆಗಿದೆ.

Exit mobile version