Revenue Facts

Aadhaar Card: ಉಚಿತ ಆಧಾರ್ ಅಪ್‌ಡೇಟ್ ಗಡುವು ಜೂ. 14ರವರೆಗೆ ಗಡುವು ವಿಸ್ತರಣೆ,

ನವದೆಹಲಿ: ಆಧಾರ್ ಕಾರ್ಡ್ನಲ್ಲಿ(Aadharcard) ಉಚಿತ(Free) ನವೀಕರಣದ ಗಡುವನ್ನು ಸರ್ಕಾರ ವಿಸ್ತರಿಸಿದೆ. ಆಧಾರ್ ಕಾರ್ಡ್ನಲ್ಲಿ ಉಚಿತ ನವೀಕರಣದ ದಿನಾಂಕ 14 ಮಾರ್ಚ್ 2024 ಆಗಿತ್ತು, ಇದನ್ನು ಜೂನ್ 14 ರವರೆಗೆ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ (Aadhaar Card) ಈಗ ಬಹಳ ಪ್ರಮುಖವಾಗಿ ಬೇಕಾಗಿರುವ ದಾಖಲೆಯಾಗಿದೆ. ವೈಯಕ್ತಿಕ ಗುರುತಿನ ಜೊತೆಗೆ ನಮ್ಮ ನಿವಾಸದ ದಾಖಲೆಯಾಗಿಯೂ ಇದನ್ನು ಬಳಸಬಹುದು. ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾನಾ ಸೇವೆಗಳಿಗೆ ಆಧಾರ್ ದಾಖಲೆ ನೆರವಾಗುತ್ತದೆ.ಸಾಮಾನ್ಯ ಜನರಿಗೆ ಸರ್ಕಾರ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಿದೆ.ಉಚಿತ ಆನ್ಲೈನ್ ದಾಖಲೆಗಳನ್ನು ಅಪ್ಲೋಡ್ ಮಾಡುವ ಸೌಲಭ್ಯವನ್ನು 2024 ರ ಜೂನ್ 14 ರವರೆಗೆ ವಿಸ್ತರಿಸಲಾಗುತ್ತಿದೆ ಎಂದು ಯುಐಡಿಎಐ ತನ್ನ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ತಿಳಿಸಿದೆ.ಉಚಿತ ಆಧಾರ್ ಕಾರ್ಡ್ ಅಪ್ ಡೇಟ್ ಗಾಗಿ ಈ ಮೊದಲು ಇದನ್ನು ಡಿಸೆಂಬರ್ 15, 2023 ಎಂದು ನಿಗದಿಪಡಿಸಲಾಗಿತ್ತು. ನಂತರ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಉಚಿತ ಸೌಲಭ್ಯವನ್ನು 3 ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಿತ್ತು. ಇದೀಗ ಮತ್ತೆ 2024 ರ ಜೂನ್ 14 ರವರೆಗೆ ವಿಸ್ತರಿಸಿದೆ. ಈ ಉಚಿತ ಸೇವೆಯು ಮೈಆಧಾರ್ ಪೋರ್ಟಲ್ನಲ್ಲಿ(portal) ಲಭ್ಯವಿರುತ್ತದೆ. ಜನರು ತಮ್ಮ ಆಧಾರ್ ದಾಖಲೆಗಳನ್ನು ನವೀಕರಿಸಬೇಕೆಂದು ಯುಐಡಿಎಐ ಬಯಸುತ್ತದೆ.ಉಚಿತ ಆಧಾರ್ ನವೀಕರಣದ ಸೌಲಭ್ಯವು ಆನ್ಲೈನ್ ನವೀಕರಣಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ಮೂಲವನ್ನು ನವೀಕರಿಸಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚು ವರ್ಷಗಳಿಂದ ಆಧಾರ್ ಅನ್ನು ಅಪ್​ಡೇಟ್ ಮಾಡದೇ ಇದ್ದವರು ಅದನ್ನು ಅಪ್​ಡೇಟ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್​ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್​ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ ಅದನ್ನು ನಮೂದಿಸಿ ಅಪ್​ಡೇಟ್ ಮಾಡಬಹುದು.

ಆನ್‌ಲೈನ್‌ನಲ್ಲಿ ಆಧಾರ್ ಅಪ್​ಡೇಟ್ ನವೀಕರಿಸಲು ಕ್ರಮಗಳು 

1.ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸುವ ಆಧಾರ್ ಸಂಖ್ಯೆ ಮತ್ತು ಒಂದು-ಬಾರಿ ಪಾಸ್‌ವರ್ಡ್ (OTP) ಅನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಲು ಅಧಿಕೃತ UIDAI ವೆಬ್‌ಸೈಟ್, https://myaadhaar.uidai.gov.in/ ಗೆ ಭೇಟಿ ನೀಡಿ.

2.ಈ ವೆಬ್​ಸೈಟ್​ನಿಂದ ಮೈ ಆಧಾರ್ ಪೋರ್ಟಲ್​ಗೆ ಹೋಗಿ.

3.ನಿಮ್ಮ ಡಾಕ್ಯುಮೆಂಟ್‌ಗಳು ಬದಲಾಗದಿದ್ದಲ್ಲಿ ನೀವು ಡಾಕ್ಯುಮೆಂಟ್ ಅನ್ನು ಸಲ್ಲಿಸಬೇಕಾಗುತ್ತದೆ.

4.ಗುರುತಿನ ದಾಖಲೆಯ ಗಾತ್ರವು 2MB ಗಿಂತ ಹೆಚ್ಚಿರಬಾರದು ಮತ್ತು ಫೈಲ್ ಫಾರ್ಮ್ಯಾಟ್ JPEG, PNG ಅಥವಾ PDF ಆಗಿರಬೇಕು.

5.ಇಲ್ಲಿ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿರಿ.ಅದರಲ್ಲಿ ನಿಮ್ಮ ಪ್ರೊಫೈಲ್​ಗೆ ಹೋಗಿ ಮಾಹಿತಿ ವೀಕ್ಷಿಸಬಹುದು.

6.ನಿಮ್ಮ ಒಪ್ಪಿಗೆಯನ್ನು ಸಲ್ಲಿಸಿ.

Exit mobile version