Revenue Facts

SBI ಗ್ರಾಹಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಆಧಾರ್ ಆಧಾರಿತ ನೋಂದಣಿ

SBI ಗ್ರಾಹಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಆಧಾರ್ ಆಧಾರಿತ ನೋಂದಣಿ

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State bank of india) ಶುಕ್ರವಾರ ಕೇವಲ ಆಧಾರ್ ಕಾರ್ಡ್(Aadharcard) ಅನ್ನು ಒದಗಿಸುವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ನೋಂದಾಯಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯವನ್ನು ಪರಿಚಯಿಸಿದೆ.ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಅವರು ಹೊಸ ವೈಶಿಷ್ಟ್ಯವನ್ನು ಅನಾವರಣಗೊಳಿಸಿದರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ಸೇವೆಗಳನ್ನು ಪರಿಚಯಿಸಿದೆ. ನೀವು ಎಸ್‌ಬಿಐ(SBI) ಶಾಖೆಗೆ ತೆರಳಿ ಆಧಾರ್ ಕಾರ್ಡ್ ನಂಬರ್ ನೀಡುವ ಮೂಲಕ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ,(pradhanamantri jyotibhima yojane) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ(Atalpension) ಯೋಜನೆಗಳಂತಹ ಸರ್ಕಾರಿ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬಹುದು ಎಂದು ಎಸ್‌ಬಿಐ ತಿಳಿಸಿದೆ. ಈ ಸೇವೆಗಳು ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಗಳಲ್ಲಿ (CSP) ಲಭ್ಯವಿರುತ್ತವೆ. ಇನ್ನು ಇದಕ್ಕಾಗಿ ಬ್ಯಾಂಕ್ ಪಾಸ್ ಬುಕ್(bankpassbook) ಕೊಂಡೊಯ್ಯುವ ಅಗತ್ಯವಿಲ್ಲ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ತಿಳಿಸಿದೆ.ಆರ್ಥಿಕ ಭದ್ರತೆಯನ್ನು ಪ್ರವೇಶಿಸಲು ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸುವುದು ಹೊಸ ವೈಶಿಷ್ಟ್ಯದ ಗುರಿಯಾಗಿದೆ, ಇದು ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಖಾರಾ ಹೇಳಿದರು.

Exit mobile version